ಅತ್ಯಂತ ಕಡಿಮೆ ಅವಧಿಯಲ್ಲಿ ಬಜೆಟ್​ ಮಂಡನೆ! ಇಲ್ಲಿದೆ ವಿತ್ತ ಸಚಿವರ ಹಿಂದಿನ ದಾಖಲೆಗಳ ಕಂಪ್ಲೀಟ್​ ವಿವರ...

ವಿಜಯವಾಣಿ-2024-02-01T130150.870
Published on

ಹೊಸದಿಲ್ಲಿ: ಇಂದು ಹೊಸ ಸಂಸತ್ತಿನಲ್ಲಿ ನಡೆದ ಮಧ್ಯಂತರ ಬಜೆಟ್ 2024 ಅನ್ನು ಅತ್ಯಂತ ಕಡಿಮೆ ಅವಧಿಯೊಳಗೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕೇವಲ 58 ನಿಮಿಷಗಳಲ್ಲಿ ಈ ಬಾರಿಯ ಬಜೆಟ್​ ಮಂಡಿಸಿದ್ದಾರೆ. ಈ ಮೂಲಕ ಬಜೆಟ್​ ಭಾಷಣದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ ಹಣಕಾಸು ಸಚಿವೆ, ಈ ಹಿಂದಿನ ವರ್ಷಗಳಲ್ಲಿ ಎಷ್ಟು ಅವಧಿಯಲ್ಲಿ ಬಜೆಟ್​ ಮಂಡಿಸಿದ್ದಾರೆ ಎಂಬುದರ ಕಂಪ್ಲೀಟ್​ ವಿವರ ಇಲ್ಲಿದೆ ಗಮನಿಸಿ.

ಗುರುವಾರ ಸಂಸತ್ತಿನಲ್ಲಿ 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ಹಣಕಾಸು ಸಚಿವರು 58 ನಿಮಿಷಗಳ ಭಾಷಣ ಮುಗಿಸಿ ಎಲ್ಲರಿಗೂ ಶಾಕ್ ನೀಡಿದರು. ಬೆಳಗ್ಗೆ 11 ಗಂಟೆಗೆ ತಮ್ಮ ಭಾಷಣ ಪ್ರಾರಂಭಿಸಿದ ಸಚಿವರು 11:58ಕ್ಕೆ ಸರಿಯಾಗಿ ಅಂತ್ಯಗೊಳಿಸಿದರು. ಈ ಮೂಲಕ ದಾಖಲೆ ನಿರ್ಮಿಸಿದ ನಿರ್ಮಲಾ ಸೀತಾರಾಮನ್​, ಇಂದು ತಮ್ಮ ಆರನೇ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು.

ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಕೊನೆಯ ಬಜೆಟ್ ಇದಾಗಿದ್ದು, 17ನೇ ಲೋಕಸಭೆಯ ಅಧಿಕಾರಾವಧಿಯು ಜೂನ್ 16, 2024 ರಂದು ಕೊನೆಗೊಳ್ಳಲಿದೆ ಮತ್ತು 2024ರ ಲೋಕಸಭಾ ಚುನಾವಣೆಯು ಈ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ ಎಂಬುದು ವರದಿ. ಇಲ್ಲಿಯವರೆಗೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಅಷ್ಟು ಬಜೆಟ್ ಭಾಷಣದ ದಾಖಲೆಯ ವಿವರ ಹೀಗಿದೆ.

2024: 58 ನಿಮಿಷ

2023: 1 ಗಂಟೆ 27 ನಿಮಿಷ

2022: 1 ಗಂಟೆ 30 ನಿಮಿಷ

2021: 1 ಗಂಟೆ 50 ನಿಮಿಷ

2020: 2 ಗಂಟೆ 42 ನಿಮಿಷ

2019: 2 ಗಂಟೆ 15 ನಿಮಿಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net