More

    ಸ್ಟಾರ್​ ನಿರ್ದೇಶಕನ ಚಿತ್ರದಲ್ಲಿ ’12 ಫೇಲ್’​ ನಟ! ಇದು ಖಂಡಿತ ಸಿನಿಮಾ ಅಲ್ಲ?

    ಮುಂಬೈ: ಕಳೆದ ವರ್ಷ ಬಹುತೇಕ ಚಿತ್ರಮಂದಿರಗಳಲ್ಲಿ ಸದ್ದಿಲ್ಲದೇ ಪ್ರೇಕ್ಷಕರ ಮುಂದೆ ಬಂದ ವಿಧು ವಿನೋದ್ ಚೋಪ್ರಾ ನಿರ್ದೇಶನದ ’12 ಫೇಲ್‌’ ಚಿತ್ರ ಇಂದು ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿದ್ದು, ಐಪಿಎಸ್​ ಮನೋಜ್​ ಶರ್ಮಾ ಅವರ ಜೀವನಾಧಾರಿತ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ದೊರಕಿತು. ಈ ಫಿಲಂನ ಯಶಸ್ಸಿಗೆ ಪಾತ್ರರಾದ ನಟ ವಿಕ್ರಾಂತ್​ ಮಾಸ್ಸೆ, ಇದೀಗ ಅನೇಕ ಸ್ಟಾರ್​ ನಿರ್ದೇಶಕರ ಕಥೆಗೆ ನಾಯಕರಾಗಿ ಆಯ್ಕೆಯಾಗುತ್ತಿದ್ದಾರೆ. ಇಲ್ಲಿಯವರೆಗೆ ಸಿಕ್ಕಿರುವ ಪ್ರಾಜೆಕ್ಟ್​ಗಳ ಪೈಕಿ ವಿಕ್ರಾಂತ್​ ‘ಡಂಕಿ’ ನಿರ್ದೇಶಕರೊಂದಿಗೆ ಕೈಜೋಡಿಸಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಸಲಿಗೆ ಇದು ನಿಜವೇ? ಇಲ್ಲಿದೆ ವಿವರ.

    ಇದನ್ನೂ ಓದಿ: ಪ್ಯಾನ್ ಇಲ್ಲದೆಯೇ 5 ಲಕ್ಷದವರೆಗೆ ಚಿನ್ನವನ್ನು ಖರೀದಿಸಲು ಸಾಧ್ಯವೇ?, ಸರ್ಕಾರ ಈ ಘೋಷಣೆ ಮಾಡಬಹುದು!

    ಅದ್ಭುತ ಅಭಿನಯದ ಮೂಲಕ ಸಿನಿಪ್ರೇಕ್ಷಕರ ಹಾಗೂ ಯುಪಿಎಸ್​ಸಿ ಪರೀಕ್ಷಾ ಆಕಾಂಕ್ಷಿಗಳ ಮನಗೆದ್ದ ನಟ ವಿಕ್ರಾಂತ್ ಮಾಸ್ಸೆ ಈ ಒಂದು ಚಿತ್ರದಿಂದ ಅಪಾರ ಜನಮನ್ನಣೆ ಸ್ವೀಕರಿಸಿ, ಸ್ಟಾರ್ ಪಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಐಪಿಎಸ್ ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ಕಾಣಿಸಿಕೊಂಡ ಮಾಸ್ಸೆಗೆ ನಾಯಕಿಯಾಗಿ ಮೇಧಾ ಶಂಕರ್​ ಸಾಥ್​ ನೀಡಿದರು.

    ಇದೀಗ ಬಾಲಿವುಡ್​ನ ಸ್ಟಾರ್​ ನಿರ್ದೇಶಕ, ಡಂಕಿ ಖ್ಯಾತಿಯ ರಾಜ್‌ಕುಮಾರ್ ಹಿರಾನಿ ಅವರ ಚಿತ್ರದಲ್ಲಿ ವಿಕ್ರಾಂತ್​ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದು, ಇವರಿಬ್ಬರ ಕಾಂಬಿನೇಷನ್​ನಲ್ಲಿ ಚಿತ್ರ ಮೂಡಿಬಂದರೆ ನಿಜಕ್ಕೂ ಅದ್ಭುತವಾಗಿರುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಅಸಲಿಗೆ ಇದು ಸಿನಿಮಾನಾ ಅಥವಾ ವೆಬ್​ ಸಿರೀಸ್​? ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: 92 ವರ್ಷಗಳ ಹಿಂದಿನ ಸಂಪ್ರದಾಯಕ್ಕೆ ಪೂರ್ಣವಿರಾಮ…ಬಜೆಟ್ ಮಂಡಿಸುವ ವಿಧಾನ ಎಷ್ಟು ಬದಲಾಗಿದೆ?

    ಸಿನಿ ವರದಿಗಳ ಪ್ರಕಾರ, ರಾಜ್‌ಕುಮಾರ್ ಹಿರಾನಿ ತಮ್ಮ ಮುಂದಿನ ಚಿತ್ರಕ್ಕೆ ರಣಬೀರ್ ಕಪೂರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ವೆಬ್​ ಸಿರೀಸ್​ಗೆ ವಿಕ್ರಾಂತ್​ ಜತೆ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ವೆಬ್​ ಸರಣಿಯಲ್ಲಿ ಮಾಸ್ಸೆ ನಾಯಕನಾಗಿ ಅಭಿನಯಿಸಲಿದ್ದು, ಅಮೀರ್ ಸತ್ಯವೀರ್ ಸಿಂಗ್ ನಿರ್ದೇಶಿಸಲಿದ್ದಾರೆ. ಇದು ಸೈಬರ್ ಅಪರಾಧವನ್ನು ಆಧರಿಸಿದ್ದು, ಸೈಬರ್ ಕ್ರೈಮ್ ಭದ್ರತಾ ತಜ್ಞರ ಪಾತ್ರದಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

    ಭಾರತ್ ಜೋಡೋ ಯಾತ್ರೆಗೆ 72 ಕೋಟಿ ರೂ. ಖರ್ಚು! ಹೀಗಿದೆ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts