ರಾತ್ರಿ ಪತ್ನಿ ಕೊಟ್ಟ ಲಸ್ಸಿ ಕುಡಿದು ಮಲಗಿದ ಗಂಡನಿಗೆ ಬೆಳಗ್ಗೆ ಎಚ್ಚರಗೊಂಡಾಗ ಕಾದಿತ್ತು ಬಿಗ್​ ಶಾಕ್! Newly married woman

Newly married woman
Published on

Newly married woman : ಮದುವೆ ಆಗಿ ಕೇವಲ 50 ದಿನಗಳು ಕಳೆದಿತ್ತಷ್ಟೇ, ಗಂಡ ಮತ್ತು ಆತನ ಕುಟುಂಬ ಆಕೆಯನ್ನು ಸಂಪೂರ್ಣ ನಂಬಿದ್ದರು. ಎಲ್ಲವೂ ಸುಗಮವಾಗಿಯೇ ಸಾಗುತ್ತಿತ್ತು. ಹೀಗಿರುವಾಗ ಒಂದು ರಾತ್ರಿ ಆಕೆ, ಮನೆಯಲ್ಲಿದ್ದ ತನ್ನ ಗಂಡ ಮತ್ತು ಕುಟುಂಬ ಸದಸ್ಯರಿಗೆ ಪ್ರೀತಿಯಿಂದ ಲಸ್ಸಿ ನೀಡಿದಳು. ಸಂತೋಷದಿಂದಲೇ ಲಸ್ಸಿಯನ್ನು ಕುಡಿದ ಅವರೆಲ್ಲರೂ ಗಾಢ ನಿದ್ರೆಗೆ ಜಾರಿದರು. ಅದೇ ಸಮಯದಲ್ಲಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಆಭರಣಗಳನ್ನು ತೆಗೆದುಕೊಂಡು ಆಕೆ ತನ್ನ ಗೆಳೆಯನೊಂದಿಗೆ ಪರಾರಿಯಾಗಿದ್ದಳು. ಇತ್ತ ನಿದ್ರೆಗೆ ಜಾರಿದ್ದ ಗಂಡ, ಎಚ್ಚರಗೊಂಡು ಪತ್ನಿಗಾಗಿ ಹುಡುಕಾಡಿದಾಗ ಆಕೆ ಕಾಣೆಯಾಗಿದ್ದಳು. ಆತನ ಕುಟುಂಬ ಸದಸ್ಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದರು ಸಹ ಪ್ರಯೋಜನವಾಗಲಿಲ್ಲ. ಕೊನೆಗೆ ಸಿಸಿಟಿವಿ ದೃಶ್ಯಗಳನ್ನು ನೋಡಿದಾಗ ಇಡೀ ಕುಟುಂಬಕ್ಕೆ ಶಾಕ್​ ಆಯಿತು. ಏಕೆಂದರೆ, ಆಕೆ ತನ್ನ ಗೆಳೆಯನೊಂದಿಗೆ ಎಸ್ಕೇಪ್​ ಆಗಿದ್ದಾಳೆಂದು ತಿಳಿಯಿತು.

ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ತಿಳಿಯುವುದಾದರೆ, ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕೊಟ್ವಾಲಿ ಪ್ರದೇಶದ ಸಾರವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾರವಾ ಗ್ರಾಮದ ನಿವಾಸಿ ಸಲ್ಮಾನ್, ವೃತ್ತಿಯಲ್ಲಿ ಬಡಗಿ. ಏಪ್ರಿಲ್ 25 ರಂದು ಲೋನಿ ನಿವಾಸಿ ಸನಾ ಎಂಬಾಕೆಯನ್ನು ಸಲ್ಮಾನ್​ ವಿವಾಹವಾದರು. ಮದುವೆಯಾಗಿ ಕೇವಲ 50 ದಿನಗಳು ಕಳೆದಿತ್ತು. ಈ ಸಮಯದಲ್ಲಿ ಸನಾ ತನ್ನ ಪತಿ ಮತ್ತು ಆತನ ಕುಟುಂಬ ಸದಸ್ಯರಿಗೆ ತುಂಬಾ ಹತ್ತಿರವಾಗಿದ್ದಳು. ಎಲ್ಲರ ನಂಬಿಕೆಯನ್ನು ಗಳಿಸಿದ್ದಳು. ಸನಾಳ ನಡವಳಿಕೆಯನ್ನು ನೋಡಿ, ಅವಳ ಅತ್ತೆ-ಮಾವ ಸಂತೋಷಗೊಂಡಿದ್ದರು. ಆದರೆ, ಸನಾಳ ಹಿಂದೆ ಇದ್ದ ಮತ್ತೊಂದು ಮುಖ ಯಾರಿಗೂ ತಿಳಿಯಲಿಲ್ಲ. ಈ ಸನಾಗೆ ಮದುವೆಗೆ ಮುನ್ನವೇ ಪ್ರಿಯಕರನಿದ್ದ. ಮದುವೆಯ ನಂತರವೂ ಆತನೊಂದಿಗೆ ಸಾಂದರ್ಭಿಕವಾಗಿ ಸಂಪರ್ಕ ಮುಂದುವರಿಸಿದ್ದಳು. ಅಲ್ಲದೆ, ಒಂದು ಹಂತದಲ್ಲಿ ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧರಿಸಿದರು. ಅದಕ್ಕಾಗಿ ಇಬ್ಬರು ಸೇರಿ ಒಂದು ಪ್ಲಾನ್​ ಮಾಡಿದರು.

ಸನಾ, ಮೇ 13ರಂದು ರಾತ್ರಿ ಮನೆಯ ಎಲ್ಲಾ ಸದಸ್ಯರಿಗೆ ಪ್ರೀತಿಯಿಂದ ಲಸ್ಸಿ ನೀಡಿದಳು. ಅದನ್ನು ಖುಷಿಯಿಂದ ಕುಡಿಯುತ್ತಿದ್ದಂತೆ ಕುಟುಂಬದ ಸದಸ್ಯರೆಲ್ಲರೂ ಗಾಢ ನಿದ್ರೆಗೆ ಜಾರಿದರು. ಮೊದಲೇ ಪ್ಲಾನ್​ ಮಾಡಿಕೊಂಡು ಲಸ್ಸಿಯಲ್ಲಿ ಏನೋ ಬೆರೆಸಿ ನೀಡಿದ್ದಳು. ಎಲ್ಲರೂ ನಿದ್ರೆಗೆ ಜಾರಿದ ಬಳಿಕ ಆಕೆ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಆಭರಣಗಳನ್ನು ತೆಗೆದುಕೊಂಡು ತನ್ನ ಗೆಳೆಯನೊಂದಿಗೆ ಹೊರಟುಹೋದಳು. ಇತ್ತ ಗಂಡನಿಗೆ ಬೆಳಗ್ಗೆ ಎಚ್ಚರಗೊಂಡಾಗ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂಬುದು ಗೊತ್ತಾಯಿತು. ಬಳಿಕ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿದನು. ಆಕೆ ಎಲ್ಲಿಯೂ ಸಿಗದಿದ್ದಾಗ, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದನು. ಬಳಿಕ ಎಲ್ಲರು ಸೇರಿ ಸನಾಳನ್ನು ಹುಡುಕಿದರು. ಆದರೆ, ಅವಳು ಸಿಗಲಿಲ್ಲ. ಮನೆಯಲ್ಲಿದ್ದ 50 ಸಾವಿರ ರೂ. ನಗದು ಮತ್ತು ಲಕ್ಷಾಂತರ ಮೌಲ್ಯದ ಆಭರಣಗಳು ಸಹ ಕಾಣೆಯಾಗಿದ್ದರಿಂದ, ಆಕೆ ಎಸ್ಕೇಪ್​ ಆಗಿದ್ದಾಳೆ ಎಂಬ ಅನುಮಾನ ಮೂಡಿತು. ಇದಾದ ನಂತರ ಅವರು ಪೊಲೀಸರಿಗೆ ದೂರು ನೀಡಿದರು.

ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಈ ಪ್ರಕ್ರಿಯೆಯಲ್ಲಿ ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಅದರಲ್ಲಿ, ಸನಾ ರಾತ್ರಿ 12.30ರ ಸುಮಾರಿಗೆ ಯುವಕನೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಇದರಿಂದ ಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ನಿಜ ವಿಷಯ ಅರ್ಥವಾಯಿತು. ಆಕೆ ಲಸ್ಸಿಯಲ್ಲಿ ಏನೋ ಬರೆಸಿ, ನಿದ್ರೆಗೆ ಜಾರುವಂತೆ ಮಾಡಿ, ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆಂಬುದು ಗೊತ್ತಾಯಿತು.

ಪೊಲೀಸರು ತನಿಖೆ ನಡೆಸಿದಾಗ ಸನಾ ಗಾಜಿಯಾಬಾದ್ ನಿವಾಸಿ ಎಂದು ತಿಳಿದುಬಂದಿದೆ. ಆಕೆಗೆ ಹಾಪುರದ ಸಿಂಭೋಲಿವೆಟ್ ಗ್ರಾಮದ ನಿವಾಸಿ ಸೊಹೈಲ್ ಜೊತೆ ವಿವಾಹಪೂರ್ವ ಸಂಬಂಧವಿತ್ತು. ಆತ ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿ ಎಸಿ ರಿಪೇರಿಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರು ಸನಾ ಮತ್ತು ಆಕೆಯ ಗೆಳೆಯನನ್ನು ಗುರುತಿಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಆಕೆಗೆ ಕೌನ್ಸೆಲಿಂಗ್ ನೀಡಿದಾಗ, ಸನಾ ತನ್ನ ಪ್ರಿಯಕರ ಸೊಹೈಲ್ ಜೊತೆಯೇ ಇರಲು ನಿರ್ಧರಿಸಿದ್ದಾಳೆ. ಪತಿ ಸಲ್ಮಾನ್ ಜೊತೆ ಹೋಗಲು ಅವಳು ನಿರಾಕರಿಸಿದಳು. ಇದಾದ ಬಳಿಕ ಪೊಲೀಸರು ಸನಾಳನ್ನು ಆಕೆಯ ಸಂಬಂಧಿಕರಿಗೆ ಒಪ್ಪಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net