ನೆಟ್ಟಿಗರ ಗಮನಸೆಳೆದ ಬುಲ್​ ರೈಡರ್​: ದೆಹಲಿಯ ರಸ್ತೆಗಳಲ್ಲಿಯೇ ಗೂಳಿ ಸವಾರಿ ಮಾಡಿದ್ದೇಕೆ?

FotoJet-3
Published on

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ​ ದೆಹಲಿಯ ಬೀದಿಗಳಲ್ಲಿನ ವೀಡಿಯೋ ನೋಡಿದರೆ ಸಂಪತ್ತಿಗೆ ಸವಾಲು ಚಿತ್ರದ ಗೀತೆ, "ಯಾರೇ ಕೂಗಾಡಲಿ... ಊರೇ ಹೋರಾಡಲಿ.. ಎಮ್ಮೆ ನಿನಗೆ ಸಾಟಿಯಿಲ್ಲ..." ನೆನಪಿಗೆ ಬರುತ್ತದೆ.

ದೆಹಲಿಯ ಬೀದಿಗಳಲ್ಲಿ ವ್ಯಕ್ತಿಯೊಬ್ಬರು ಗೂಳಿಯ ಮೇಲೆ ಸವಾರಿ ಮಾಡಿದ್ದಾರೆ. ಅಲ್ಲದೆ, ಮೊಲದ ಆಕಾರದ ಹೆಲ್ಮೆಟ್ ಧರಿಸಿ ಗಮನಸೆಳೆದಿದ್ದಾರೆ.

ಈ ವಿಡಿಯೋ ವೈರಲ್​ ಆಗಿದ್ದು, ಅಪಾರ ಸಂಖ್ಯೆಯ ನೆಟ್ಟಿಗರು ನೋಡಿದ್ದಾರೆ. ಗೂಳಿ ಸವಾರಿಗೆ ಸಾಕಷ್ಟು ಮಂದಿ ಟೀಕೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕ ನೆಟಿಜನ್‌ಗಳು ಇದನ್ನು ಪ್ರಾಣಿ ಕಿರುಕುಳ ಎಂದು ಆಪಾದಿಸಿದ್ದಾರೆ.

ತನ್ನನ್ನು "ಬುಲ್ ರೈಡರ್" ಎಂದು ಕೊಂಡಿರುವ ಈ ವ್ಯಕ್ತಿಯು @bull_rider_077 ಹೆಸರಿನ ತನ್ನ Instagram ಖಾತೆಯಲ್ಲಿ ಪ್ರಾಣಿಗಳ ಮೇಲೆ ಸವಾರಿ ಮಾಡುವ ಅನೇಕ ವಿಡಿಯೋಗಳನ್ನು ಪೋಸ್ಟ್​ ಮಾಡಿದ್ದಾನೆ.

ನವೆಂಬರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈತ "ಪೆಟ್ರೋಲ್ ಮೆಹಂಗಾ ಹುವಾ ತೋ ಅಬ್ ಮೈನೆ ಉಸ್ಕೊ ಭಿ ಔಕಾತ್ ದಿಖಾ ದೀ (ಪೆಟ್ರೋಲ್ ದುಬಾರಿಯಾಗಿದೆ. ಆದ್ದರಿಂದ ಅದಕ್ಕೆ ನಾನು ಅದರ ಲೆವಲ್​ ತೋರಿಸಿದ್ದೇನೆ)" ಎಂದು ಬರೆದಿದ್ದಾನೆ. ಗೂಳಿಯ ಮೇಲೆ ಸವಾರಿ ಮಾಡುತ್ತಿರುವಾಗ, ಮೋಟಾರ್‌ಸೈಕಲ್‌ನಲ್ಲಿ ಕುಳಿತ ವ್ಯಕ್ತಿಯೊಬ್ಬ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬರುತ್ತದೆ.

"ನೀವು ಎಮ್ಮೆಯ ಮೇಲೆ ಕುಳಿತು ನಿಮ್ಮ ಲೆವಲ್​ ತೋರಿಸಿದ್ದೀರಿ" ಎಂದು Instagram ಬಳಕೆದಾರರು ಲೇವಡಿ ಮಾಡಿದ್ದಾರೆ. “ಎತ್ತುಗಳು ನೀವು ಕುಳಿತುಕೊಳ್ಳಲು ಅಲ್ಲ. ಪ್ರಾಣಿಗಳ ಕಿರುಕುಳ ನಿಲ್ಲಿಸಿ” ಎಂದು ಇನ್ನೊಬ್ಬರು ಹೇಳಿದ್ದಾರೆ. "ಎಲ್ಲರೂ ನಿಮ್ಮಂತೆ ಯೋಚಿಸಿದರೆ ಪೆಟ್ರೋಲ್ ಅಗ್ಗವಾಗುತ್ತದೆ" ಎಂದು ಮಗದೊಬ್ಬ ಬಳಕೆದಾರರು ಬರೆದಿದ್ದಾರೆ. ತಮ್ಮ ಚೇಷ್ಟೆಯಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟು ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.

ಮತ್ತೊಂದು ವೀಡಿಯೊದಲ್ಲಿ, ಈತ ಕಿಕ್ಕಿರಿದ ಮಾರುಕಟ್ಟೆಯಲ್ಲಿ ಗೂಳಿಯ ಮೇಲೆ ಸವಾರಿ ಮಾಡುತ್ತಿರುವಾಗ ಹಲವು ದಾರಿಹೋಕರು ಸೆಲ್ಫಿ ತೆಗೆದುಕೊಂಡಿದ್ದಾರೆ.

ಇವರ Instagram ಖಾತೆಯು 56,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, @Bull.Rider-Vlogs ಎಂಬ ಅವರ YouTube ಚಾನಲ್ 2.68 ಲಕ್ಷ ಚಂದಾದಾರರನ್ನು ಹೊಂದಿದೆ ಎಂಬುದು ಗಮನಾರ್ಹವಾಗಿದೆ.

ent

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net