More

    ರೂ. 1500 ಕೋಟಿಯ ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣ: ಮತ್ತೊಬ್ಬ ಬಾಲಿವುಡ್​ ನಟನಿಗೆ ಸಮನ್ಸ್​

    ನವದೆಹಲಿ: ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್‌ ಅಪರಾಧ ವಿಭಾಗವು ಶುಕ್ರವಾರ ನಟ ಸಾಹಿಲ್‌ ಖಾನ್‌ ಮತ್ತು ಇತರ ಮೂವರಿಗೆ ಸಮನ್ಸ್‌ ಜಾರಿ ಮಾಡಿದೆ.

    ಮಹದೇವ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿಲ್​ ಖಾನ್ ಮತ್ತು ಇತರ 31 ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ತನಿಖೆಯಲ್ಲಿ ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಎಲ್ಲಾ ತಾಂತ್ರಿಕ ಸಾಧನಗಳನ್ನು ಪರಿಶೀಲಿಸಲಾಗುತ್ತಿದೆ.

    ಸಾಹಿಲ್ ಖಾನ್, ಆತನ ಸಹೋದರ ಸ್ಯಾಮ್ ಖಾನ್, ಹಿತೇಶ್ ಖುಷ್ಲಾನಿ ಮತ್ತು ಮತ್ತೊಬ್ಬ ಆರೋಪಿಗೆ ಕ್ರೈಂ ಬ್ರಾಂಚ್ ಸಮನ್ಸ್ ನೀಡಿದೆ.

    ‘ಸ್ಟೈಲ್’ ಮತ್ತು ‘ಎಕ್ಸ್‌ಕ್ಯೂಸ್ ಮಿ’ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿರುವ ಸಾಹಿಲ್ ಖಾನ್ ಅವರು ಫಿಟ್‌ನೆಸ್ ಎಕ್ಸ್​ಪರ್ಟ್​ ಕೂಡ ಆಗಿದ್ದಾರೆ.

    ರಣಬೀರ್ ಕಪೂರ್, ಸೋನಾಕ್ಷಿ ಸಿನ್ಹಾ, ಕಪಿಲ್ ಶರ್ಮಾ ಹುಮಾ ಖುರೇಷಿ, ಶ್ರದ್ಧಾ ಕಪೂರ್ ಮೊದಲಾದ ಸೆಲೆಬ್ರಿಟಿಗಳನ್ನು ಕೂಡ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದಕ್ಕಾಗಿ ಜಾರಿ ನಿರ್ದೇಶನಾಲಯವು (ಇಡಿ) ಈ ಹಿಂದೆ ವಿಚಾರಣೆಗೆ ಕರೆಸಿತ್ತು.

    ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರು ಸ್ಥಾಪಿಸಿರುವ ಮಹಾದೇವ್​ ಆನ್​ಲೈನ್​ ಬೆಟ್ಟಿಂಗ್ ಆ್ಯಪ್​ ಕಂಪನಿಯು ದುಬೈನಿಂದ ಕಾರ್ಯನಿರ್ವಹಿಸುತ್ತಿದೆ. ಹೊಸ ಬಳಕೆದಾರರನ್ನು ನೋಂದಾಯಿಸಲು, ಐಡಿಗಳನ್ನು ರಚಿಸಲು ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಲೇಯರ್ಡ್ ವೆಬ್ ಮೂಲಕ ಹಣವನ್ನು ವರ್ಗಾವಣೆ ಮಾಡಲು ಆನ್‌ಲೈನ್ ಬುಕ್ ಬೆಟ್ಟಿಂಗ್ ಅಪ್ಲಿಕೇಶನ್ ಬಳಸುತ್ತಿದೆ ಎಂದು ಈ ಕಂಪನಿಯ ವಿರುದ್ಧ ಆರೋಪ ಹೊರಿಸಲಾಗಿದೆ. ಈ ಹಗರಣವು ಅಂದಾಜು 15,000 ಕೋಟಿ ರೂಪಾಯಿ ಮೊತ್ತದ್ದಾಗಿದೆ ಎಂದು ಆಪಾದಿಸಲಾಗಿದೆ.

    ರಾಜ್ಯದ ಕೆಲವು ಹಣಕಾಸು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ವಿವಾದಿತ ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರ ನಡುವಿನ ಅಕ್ರಮ ವಹಿವಾಟಿನ ಕುರಿತು ತನಿಖೆ ನಡೆಸಲು ಮುಂಬೈ ಪೊಲೀಸರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

    8 ಪಿಎಂ ಮದ್ಯ ತಯಾರಕ ಈಗ ಫೋರ್ಬ್ಸ್‌ ಬಿಲಿಯನೇರ್ ಪಟ್ಟಿಗೆ: ಯಾರು ಈ ಹೊಸ ಕುಬೇರ?

    ಜೆಕ್ ನ್ಯಾಯಾಲಯದ ಮೊರೆ ಹೋಗಿ: ಪನ್ನುನ್ ಹತ್ಯೆ ಸಂಚು ಆರೋಪಿ ನಿಖಿಲ್​ ಗುಪ್ತಾ ಕುಟುಂಬಕ್ಕೆ ಸೂಚಿಸಿದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts