More

    ಮತ್ತೆ ದಾಖಲೆ ಮಟ್ಟ ತಲುಪಿದ ಷೇರು ಸೂಚ್ಯಂಕ: ಒಂದೇ ದಿನದಲ್ಲಿ ಶೇ. 5 ಏರಿದ ಷೇರುಗಳು ಯಾವವು?

    ಮುಂಬೈ: ದಲಾಲ್ ಸ್ಟ್ರೀಟ್‌ನಲ್ಲಿ ಶುಕ್ರವಾರವೂ ಬುಲ್ ಓಟ ಮುಂದುವರಿಯಿತು, ಕಳೆದ ಕೆಲ ದಿನಗಳಿಂದ ನಿರಂತರವಾಗಿ ದಾಖಲೆ ಮಟ್ಟ ತಲುಪುತ್ತಲೇ ಸಾಗಿರುವ ಸೂಚ್ಯಂಕಗಳು ಶುಕ್ರವಾರದಂದು ಮತ್ತೆ ಹೊಸ ಮಟ್ಟವನ್ನು ಮುಟ್ಟಿ ಹೊಸ ದಾಖಲೆ ಸೃಷ್ಟಿಸಿದವು.

    ಎಸ್ & ಪಿ ಬಿಎಸ್‌ಇ ಸೂಚ್ಯಂಕವು 970 ಅಂಕಗಳ ಏರಿಕೆ ಕಂಡು 71,484 ಕ್ಕೆ ತಲುಪಿತು, ಇಂಟ್ರಾ-ಡೇ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ 71,606 ತಲುಪಿತ್ತು. ಮತ್ತೊಂದೆಡೆ, ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 274 ಅಂಕಗಳ ಏರಿಕೆಯೊಂದಿಗೆ 21,457 ಕ್ಕೆ ಮುಟ್ಟಿತು. ಇದು ದಿನದ ವಹಿವಾಟಿನ ನಡುವೆ 21,492 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.

    ಎಚ್‌ಸಿಎಲ್, ಟಿಸಿಎಸ್, ಇನ್ಫೋಸಿಸ್, ಎಸ್‌ಬಿಐ, ಟಾಟಾ ಸ್ಟೀಲ್, ಎನ್‌ಟಿಪಿಸಿ ಮೊದಲಾದ ಷೇರುಗಳು ಲಾಭ ಗಳಿಸಿದವು. ಎಚ್‌ಸಿಎಲ್, ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳು ಶುಕ್ರವಾರದ ಒಂದೇ ದಿನದಲ್ಲಿ ಶೇ. 5ರಷ್ಟು ಏರಿಕೆ ದಾಖಲಿಸಿದವು. ನೆಸ್ಲೆ, ಏರ್‌ಟೆಲ್, ಮಾರುತಿ, ಐಟಿಸಿ, ಕೊಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದವು.

    ಬಿಎಸ್‌ಇ ಮಿಡ್‌ಕ್ಯಾಪ್ ಷೇರುಗಳು ಸ್ವಲ್ಪ ನಷ್ಟ ಕಂಡವು. ಬಿಎಸ್‌ಇ ಸ್ಮಾಲ್‌ಕ್ಯಾಪ್ ಷೇರುಗಳು ಶೇಕಡಾ 0.58 ರಷ್ಟು ಏರಿಕೆ ದಾಖಲಿಸಿದವು.

    ನಿಫ್ಟಿ ಐಟಿ ಸೂಚ್ಯಂಕವು ಟಾಪ್ ಗೇನರ್ ಆಗಿದ್ದು, ಶೇಕಡಾ 4.5 ರಷ್ಟು ಏರಿಕೆ ದಾಖಲಿಸಿತು. ನಿಫ್ಟಿ ಮೆಟಲ್ ಶೇಕಡಾ 2.13 ರಷ್ಟು ಲಾಭ ಗಳಿಸಿದರೆ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇಕಡಾ 2.39 ರಷ್ಟು ಏರಿಕೆಯಾಗಿದೆ.

    ಗುರುವಾರದ ಹಿಂದಿನ ದಿನದ ವಹಿವಾಟಿನಲ್ಲಿ ಬಿಎಸ್​ಇ ಸೂಚ್ಯಂಕವು 930 ಅಂಕಗಳ ಏರಿಕೆಯೊಂದಿಗೆ 70,514 ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 50 256 ಅಂಕಗಳ ಏರಿಕೆಯೊಂದಿಗೆ 21,182 ಕ್ಕೆ ಸ್ಥಿರವಾಗಿತ್ತು.

    8 ಪಿಎಂ ಮದ್ಯ ತಯಾರಕ ಈಗ ಫೋರ್ಬ್ಸ್‌ ಬಿಲಿಯನೇರ್ ಪಟ್ಟಿಗೆ: ಯಾರು ಈ ಹೊಸ ಕುಬೇರ?

    ಜೆಕ್ ನ್ಯಾಯಾಲಯದ ಮೊರೆ ಹೋಗಿ: ಪನ್ನುನ್ ಹತ್ಯೆ ಸಂಚು ಆರೋಪಿ ನಿಖಿಲ್​ ಗುಪ್ತಾ ಕುಟುಂಬಕ್ಕೆ ಸೂಚಿಸಿದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts