ನೇರ ತೆರಿಗೆಯಲ್ಲಿ ಶೇ. 19.4 ಹೆಚ್ಚಳ: ರೂ. 14.7 ಲಕ್ಷ ಕೋಟಿ ಸಂಗ್ರಹ

tax
Published on

ನವದೆಹಲಿ: .ಭಾರತ ಸರ್ಕಾರದ ನಿವ್ವಳ ನೇರ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ ಶೇಕಡಾ 19.4 ರಷ್ಟು ಹೆಚ್ಚಳವಾಗಿದ್ದು 14.7 ಶತಕೋಟಿ ರೂಪಾಯಿಗಳಿಗೆ ($ 177.1 ಶತಕೋಟಿ) ತಲುಪಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಜನವರಿ 10 ರವರೆಗಿನ ಲೆಕ್ಕಾಚಾರ ಇದಾಗಿದೆ.

ಕೇಂದ್ರ ಹಣಕಾಸು ಸಚಿವಾಲಯ ಈ ಸಂಗತಿಯನ್ನು ಹೇಳಿಕೆಯಲ್ಲಿ ತಿಳಿಸಿದೆ. ಭಾರತದ ಹಣಕಾಸು ವರ್ಷವನ್ನು ಏಪ್ರಿಲ್​ನಿಂದ ಮಾರ್ಚ್​ವರೆಗೆ ಪರಿಗಣಿಸಲಾಗುತ್ತದೆ.

2023ರ ಏಪ್ರಿಲ್ 1 ರಿಂದ 2024ರ ಜನವರಿ 1ರವರೆಗೆ ನೇರ ತೆರಿಗೆ ಸಂಗ್ರಹವು 18.2 ಲಕ್ಷ ರೂಪಾಯಿ ಆಗಿದೆ. ಇದು ಬಜೆಟ್ ಗುರಿಯ ಅಂದಾಜು 81% ರಷ್ಟು ಆಗಿದೆ.

ನೇರ ತೆರಿಗೆಗಳು ಕಾರ್ಪೋರೇಟ್​ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುತ್ತವೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಜನವರಿಗೆ 10ರವರೆಗೆ ಕಾರ್ಪೋರೇಟ್​ ತೆರಿಗೆಯಲ್ಲಿ ಶೇಕಡಾ 12.4 ಮತ್ತು ಆದಾಯ ತೆರಿಗೆಯಲ್ಲಿ ಶೇಕಡಾ 27.3 ರಷ್ಟು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿರುವುದು ಗಮನಾರ್ಹವಾಗಿದೆ.

ಇದೇ ಅವಧಿಯಲ್ಲಿ, ಮರುಪಾವತಿಗೆ ಸರಿಹೊಂದಿಸುವ ಮೊದಲು ಸರ್ಕಾರದ ಒಟ್ಟು ತೆರಿಗೆಯು 17.2 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷಕ್ಕಿಂತ ಅಂದಾಜು ಶೇಕಡಾ 17ರಷ್ಟು ಹೆಚ್ಚಾಗಿದೆ. ಪ್ರಸ್ತುತ ಹಣಕಾಸಿನ ವರ್ಷದಲ್ಲಿ 2.5 ಲಕ್ಷ ಕೋರಿ ರೂಪಾಯಿ ಮೌಲ್ಯದ ಮರುಪಾವತಿಯನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net