More

    ಷೇರು ಮಾರುಕಟ್ಟೆಯಲ್ಲಿ ಕಡಿಮೆ ವಹಿವಾಟು: ಅಲ್ಪ ಏರಿಕೆ ಕಂಡ ಸೂಚ್ಯಂಕ

    ಮುಂಬೈ: ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಗುರುವಾರ ಅಲ್ಪ ಮಟ್ಟದ ಏರಿಕೆ ಕಂಡವು. ಐಟಿ ದಿಗ್ಗಜ ಕಂಪನಿಗಳಾದ ಟಿಸಿಎಸ್ ಮತ್ತು ಇನ್ಫೋಸಿಸ್‌ನ ತ್ರೈಮಾಸಿಕ ಫಲಿತಾಂಶಗಳ ಪ್ರಕಟಣೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಜಾಗರೂಕರಾಗಿರುವುದರಿಂದ ಇಂಟ್ರಾ-ಡೇ ವಹಿವಾಟಿನ ಲಾಭ ಕಡಿಮೆಯಾಯಿತು.

    ಅಮೆರಿಕ ಹಣದುಬ್ಬರ ದತ್ತಾಂಶ ಘೋಷಣೆ ಮತ್ತು ದೇಶೀಯ ಸ್ಥೂಲ ಆರ್ಥಿಕ ಸಂಖ್ಯೆಗಳು ಕೂಡ ಹೂಡಿಕೆದಾರರು ದೂರ ಉಳಿಯುವಂತೆ ಮಾಡಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 63.47 ಅಂಕಗಳು ಅಥವಾ ಶೇಕಡಾ 0.09 ರಷ್ಟು ಏರಿಕೆಯಾಗಿ 71,721.18 ಕ್ಕೆ ಸ್ಥಿರವಾಯಿತು. ದಿನದ ಮಧ್ಯದಲ್ಲಿನ ವಹಿವಾಟಿನಲ್ಲಿ ಇದು 341.76 ಅಂಕಗಳ ಹೆಚ್ಚಳ ಕಂಡು 71,999.47 ಕ್ಕೆ ತಲುಪಿತ್ತು.

    ನಿಫ್ಟಿ ಸೂಚ್ಯಂಕವು 28.50 ಅಂಕಗಳು ಅಥವಾ ಶೇಕಡಾ 0.13 ರಷ್ಟು ಏರಿಕೆ ಕಂಡು 21,647.20 ಕ್ಕೆ ತಲುಪಿತು.

    ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಪವರ್ ಗ್ರಿಡ್, ಟಾಟಾ ಮೋಟಾರ್ಸ್, ಟೆಕ್ ಮಹೀಂದ್ರಾ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಗಳ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ವಿಪ್ರೋ, ಲಾರ್ಸನ್ ಅಂಡ್ ಟೂಬ್ರೋ ಮತ್ತು ನೆಸ್ಲೆ ಕಂಪನಿಗಳ ಷೇರುಗಳು ಹಿನ್ನಡೆ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಲಾಭ ಕಂಡರೆ, ಸಿಯೋಲ್ ನಷ್ಟ ಅನುಭವಿಸಿತು.

    ಐರೋಪ್ಯ ಮಾರುಕಟ್ಟೆಗಳು ಹೆಚ್ಚಿನ ವಹಿವಾಟು ನಡೆಸಿದವು. ಅಮೆರಿಕದ ಮಾರುಕಟ್ಟೆಗಳು ಬುಧವಾರ ಏರಿಕೆ

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 1,721.35 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಮಾಹಿತಿ ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಬುಧವಾರ 271.50 ಅಂಕಗಳ ಏರಿಕೆಯೊಂದಿಗೆ 71,657.71 ಕ್ಕೆ ತಲುಪಿತ್ತು. ನಿಫ್ಟಿ ಸೂಚ್ಯಂಕವು 73.85 ಅಂಕಗಳ ಹೆಚ್ಚಳದೊಂದಿಗೆ 21,618.70 ಕ್ಕೆ ಮುಟ್ಟಿತ್ತು.

    ವಿವಿಧ ಸೂಚ್ಯಂಕಗಳು:

    ಬಿಎಸ್​ಇ ಮಿಡ್​ ಕ್ಯಾಪ್​: 37,739.22 (248.69 ಅಂಕ ಹೆಚ್ಚಳ)
    ಬಿಎಸ್​ಇ ಸ್ಮಾಲ್​ ಕ್ಯಾಪ್​: 44,321.68 (348.95 ಅಂಕ ಹೆಚ್ಚಳ)
    ನಿಫ್ಟಿ ಮಿಡ್​ ಕ್ಯಾಪ್​ 100: 47,337.30 (230.15 ಅಂಕ ಹೆಚ್ಚಳ)
    ನಿಫ್ಟಿ ಸ್ಮಾಲ್​ ಕ್ಯಾಪ್​ 100: 15,476.45 (89.75 ಅಂಕ ಹೆಚ್ಚಳ)
    ನಿಫ್ಟಿ ಸ್ಮಾಲ್​ ಕ್ಯಾಪ್​ 250: 14,498.55 (118.7 ಹೆಚ್ಚಳ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts