More

    3ನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್​ ಲಾಭ ಶೇ 7.3ರಷ್ಟು ಕುಸಿತ

    ನವದೆಹಲಿ: ಬೆಂಗಳೂರು ಮೂಲದ ಬೃಹತ್ ಐಟಿ ಕಂಪನಿ ಇನ್ಫೋಸಿಸ್ ಗುರುವಾರ ಮೂರನೇ ತ್ರೈಮಾಸಿಕದಲ್ಲಿ ದುರ್ಬಲ ಫಲಿತಾಂಶಗಳನ್ನು ವರದಿ ಮಾಡಿದೆ, ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆ ಕಂಪನಿಯ ಉತ್ಪನ್ನಗಳಿಗೆ ಗ್ರಾಹಕರಿಂದ ದುರ್ಬಲ ಬೇಡಿಕೆ ವ್ಯಕ್ತವಾಗಿದೆ.

    ಕಂಪನಿಯ ಏಕೀಕೃತ ನಿವ್ವಳ ಲಾಭವು ಕಳೆದ ವರ್ಷದ ಇದೇ ಅವಧಿಯಲ್ಲಿ ವರದಿಯಾದ 6,586 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, ಪ್ರಸ್ತುತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ) ಶೇಕಡಾ 7.3 ರಷ್ಟು ಕುಸಿತ ಕಂಡಿದೆ. ಈ ತ್ರೈಮಾಸಿಕದ ಲಾಭವು 6,106 ಕೋಟಿ ರೂಪಾಯಿ ಆಗಿದೆ. ಇದು ವಿಶ್ಲೇಷಕರು ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಲಾಭವಾಗಿದೆ.

    ಏತನ್ಮಧ್ಯೆ, ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಶೇಕಡಾ 1 ರಷ್ಟು ಏರಿಕೆಯಾಗಿ 38,821 ಕೋಟಿ ರೂ.ಗೆ ತಲುಪಿದೆ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 38,318 ಕೋಟಿ ರೂ ಆದಾಯ ಇತ್ತು.

    ಮೂರನೇ ತ್ರೈಮಾಸಿಕದಲ್ಲಿ ಐಟಿ ಕಂಪನಿಯು 3.2 ಶತಕೋಟಿ ಡಾಲರ್​ ಮೌಲ್ಯದ ದೊಡ್ಡ ವ್ಯವಹಾರಗಳನ್ನು ಪಡೆದುಕೊಂಡಿದ್ದು, ಇದರಲ್ಲಿ 71 ಪ್ರತಿಶತದಷ್ಟು ಹೊಸ ವ್ಯವಹಾರಗಳಿಂದ ಬಂದಿದೆ.

    ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಚೇತರಿಸಿಕೊಳ್ಳುವ ಕಾರ್ಯಕ್ಷಮತೆಯ ಬಗ್ಗೆ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ತೃಪ್ತಿ ವ್ಯಕ್ತಪಡಿಸಿದ್ದಾರೆ, ಉತ್ಪಾದಕ ಎಐ, ಡಿಜಿಟಲ್ ಪರಿಹಾರಗಳು, ಕ್ಲೌಡ್ ಸೇವೆಗಳು ಮತ್ತು ವೆಚ್ಚ-ಪರಿಣಾಮಕಾರಿ ಯಾಂತ್ರೀಕೃತಣದ ವೈವಿಧ್ಯತೆತೆಯು ಕಂಪನಿಯ ಸಾಮರ್ಥ್ಯ ಮತ್ತು ದೊಡ್ಡ ಒಪ್ಪಂದದ ಗೆಲುವುಗಳಿಗೆ ಕಾರಣವೆಂದು ಅವರು ಹೇಳಿದ್ದಾರೆ.

    ಏಷ್ಯಾದ ಶ್ರೀಮಂತರಲ್ಲಿ ಮುಖೇಶ್​ ಅಂಬಾನಿ ನಂಬರ್​ 1: ಟಾಪ್​ ಟೆನ್​ ಕುಬೇರರಲ್ಲಿ ಅನೇಕ ಭಾರತೀಯರು

    ಒಂದೇ ವರ್ಷದಲ್ಲಿ ಶೇಕಡಾ 320 ರಿಟರ್ನ್; ನವೀಕರಿಸಬಹುದಾದ ಇಂಧನ ಕಂಪನಿ ಷೇರು ನೀಡಬಹುದು ಭರ್ಜರಿ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts