More

    ಒಂದೇ ವರ್ಷದಲ್ಲಿ ಶೇಕಡಾ 320 ರಿಟರ್ನ್; ನವೀಕರಿಸಬಹುದಾದ ಇಂಧನ ಕಂಪನಿ ಷೇರು ನೀಡಬಹುದು ಭರ್ಜರಿ ಲಾಭ

    ಮುಂಬೈ: ಸುಜ್ಲಾನ್ ಎನರ್ಜಿ ಕಂಪನಿಯು ನವೀಕರಿಸಬಹುದಾದ ಇಂಧನ ಪರಿಹಾರಗಳಲ್ಲಿ ವಿಶ್ವ-ಪ್ರಮುಖ ಕಂಪನಿಯಾಗಿದೆ. ಪವನ ಶಕ್ತಿ ಮತ್ತು ಸೌರ ಶಕ್ತಿ ವಲಯಗಳಲ್ಲಿ ಉತ್ಪನ್ನಗಳನ್ನು ತಯಾರಿಸುತ್ತದೆ. ಸುಜ್ಲಾನ್ ಎನರ್ಜಿಯು ವಿಂಡ್ ಟರ್ಬೈನ್‌ಗಳು ಮತ್ತು ವಿಂಡ್‌ಮಿಲ್‌ಗಳ ಪ್ರಸಿದ್ಧ ತಯಾರಕ ಕಂಪನಿಯಾಗಿದೆ.

    ಸುಜ್ಲಾನ್ ಎನರ್ಜಿ ಷೇರುಗಳು ಕಳೆದ ಸೋಮವಾರ ಶೇಕಡಾ 5ರಷ್ಟು ಹೆಚ್ಚಳ ಕಂಡಿವೆ. ಕಳೆದ ಮೂರು ವಹಿವಾಟು ಅವಧಿಗಳಲ್ಲಿ ಈ ಕಂಪನಿಯ ಷೇರುಗಳ ಬೆಲೆ 13 ಪ್ರತಿಶತದಷ್ಟು ಹೆಚ್ಚಾಗಿವೆ.

    ಸುಜ್ಲಾನ್ ಎನರ್ಜಿ ಷೇರುಗಳು ಕಳೆದ ಐದು ದಿನಗಳಲ್ಲಿ ಶೇಕಡಾ 12 ಮತ್ತು ಆರು ತಿಂಗಳಲ್ಲಿ ಶೇಕಡಾ 145 ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿವೆ. ಈ ಸ್ಟಾಕ್ ಒಂದು ವರ್ಷದಲ್ಲಿ ಶೇಕಡಾ 320ಕ್ಕಿಂತ ಅಧಿಕ ಏರಿಕೆ ಕಂಡಿದೆ.

    ಸುಜ್ಲಾನ್ ಎನರ್ಜಿಯ ಷೇರುಗಳು ಕಳೆದ 5 ವರ್ಷಗಳಲ್ಲಿ ಶೇಕಡಾ 570 ಕ್ಕಿಂತ ಅಧಿಕ ಏರಿಕೆ ಕಂಡಿವೆ. ಈ ಷೇರು ಭವಿಷ್ಯದಲ್ಲಿ ಶೇಕಡಾ 1000ರಷ್ಟು ದೀರ್ಘಾವಧಿಯ ಆದಾಯ ನೀಡಬಹುದು ಎಂಬುದು ವಿಶ್ಲೇಷಕರ ಅಂದಾಜು ಆಗಿದೆ.

    ಈ ಕಂಪನಿಯ ಷೇರಿನ 52 ವಾರದ ಗರಿಷ್ಠ ಬೆಲೆ 44 ರೂಪಾಯಿ ಆಗಿದ್ದರೆ, 52 ವಾರಗಳ ಕನಿಷ್ಠ ಬೆಲೆ 6.96 ರೂಪಾಯಿ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 57,923.54 ಕೋಟಿ ರೂಪಾಯಿಗೆ ತಲುಪಿದೆ.

    ಷೇರಿನ ಬೆಲೆಯು ಒಮ್ಮೆ ರೂ 44 ಗಡಿಯನ್ನು ದಾಟಿದರೆ, ಅದು ನಂತರ ರೂ 50 ಮತ್ತು ರೂ 54 ಮಟ್ಟವನ್ನು ತಲುಪಬಹುದಾಗಿದೆ. ಸುಜ್ಲಾನ್ ಎನರ್ಜಿ ಷೇರುಗಳು ಇತ್ತೀಚಿನ ಕನಿಷ್ಠ ಮಟ್ಟದಿಂದ ಅಂದಾಜು 600 ಪ್ರತಿಶತದಷ್ಟು ಏರಿಕೆಯಾಗಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.

    ವಿದ್ಯಾರ್ಥಿ ಜತೆ ಶಾಲಾ ಮೈದಾನದಲ್ಲೇ ಲೈಂಗಿಕ ಕ್ರಿಯೆ: ಅಮೆರಿಕ ಶಿಕ್ಷಕಿಯ ಬಂಧನ

    ಜನವರಿ 31ರಿಂದ ಬಜೆಟ್ ಅಧಿವೇಶನ: ಮಹಿಳಾ ರೈತರಿಗೆ ದೊಡ್ಡ ಘೋಷಣೆ ಸಾಧ್ಯತೆ

    ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಈ ಷೇರುಗಳಿಗೆ ಭಾರೀ ಬೇಡಿಕೆ, ಭರ್ಜರಿ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts