More

    3ನೇ ತ್ರೈಮಾಸಿಕದಲ್ಲಿ ಟಿಸಿಎಸ್​ ಲಾಭ ರೂ. 11,058 ಕೋಟಿ

    ನವದೆಹಲಿ:
    ಭಾರತದ ಮುಂಚೂಣಿ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (TCS) ಗುರುವಾರ ಡಿಸೆಂಬರ್ 2023 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ (2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ) ತನ್ನ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದೆ.

    ಭಾರತದ ಪ್ರಮುಖ ಸಾಫ್ಟ್‌ವೇರ್ ಸೇವಾ ಪೂರೈಕೆ ಕಂಪನಿಯಾದ ಟಿಸಿಎಸ್​ ವರ್ಷದಿಂದ ವರ್ಷಕ್ಕೆ ಶೇಕಡಾ 2% ರಷ್ಟು ಏಕೀಕೃತ ನಿವ್ವಳ ಲಾಭದ ಬೆಳವಣಿಗೆಯನ್ನು ವರದಿ ಮಾಡಿದೆ, ಈ ತ್ರೈಮಾಸಿಕ ಲಾಭವು 11,058 ಕೋಟಿ ರೂಪಾಯಿಗೆ ತಲುಪಿದೆ. ಏತನ್ಮಧ್ಯೆ, ಕಂಪನಿಯ ಆದಾಯವು 4 ಪ್ರತಿಶತದಷ್ಟು ವಾರ್ಷಿಕ ಹೆಚ್ಚಳವನ್ನು ಕಂಡಿದ್ದು, 60,583 ಕೋಟಿ ರೂಪಾಯಿಗೆ ತಲುಪಿದೆ.

    ಕಂಪನಿಯ ಆದಾಯವು ವಿಶ್ಲೇಷಕರು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಉತ್ತಮವಾಗಿ ಬಂದಿದೆ.

    ಟಿಸಿಎಸ್​ ಕಂಪನಿಯ ಮಂಡಳಿಯು ಈ ಮೂರನೇ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಪ್ರತಿ ಷೇರಿಗೆ ರೂ 18 ರ ವಿಶೇಷ ಲಾಭಾಂಶ ಹಾಗೂ ಪ್ರತಿ ಷೇರಿಗೆ ರೂ 9 ರ ಮಧ್ಯಂತರ ಲಾಭಾಂಶ ವಿಂಗಡಿಸಲು ಶಿಫಾರಸು ಮಾಡಿದೆ.

    “ಇಂದು ನಡೆದ ಬೋರ್ಡ್ ಮೀಟಿಂಗ್‌ನಲ್ಲಿ, ನಿರ್ದೇಶಕರು ಮೂರನೇ ಮಧ್ಯಂತರ ಲಾಭಂಶ ರೂ. 9 ಮತ್ತು ಕಂಪನಿಯ ಪ್ರತಿ ಇಕ್ವಿಟಿ ಷೇರಿಗೆ 18 ರೂ.ಗಳ ವಿಶೇಷ ಲಾಭಾಂಶವನ್ನು ಘೋಷಿಸಿದ್ದಾರೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ” ಎಂದು ಕಂಪನಿ ಹೇಳಿದೆ.

    ಈ ಹಿಂದಿನ ವರ್ಷದ ತ್ರೈಮಾಸಿಕಕ್ಕೆ ಹೋಲಿಸಿದರೆ, ಕಂಪನಿಯ ಆದಾಯವು ಶೇಕಡಾ 1.5 ರಷ್ಟು ಏರಿದೆ, ಆದರೆ ಅದರ ನಿವ್ವಳ ಲಾಭವು ಶೇಕಡಾ 2.5 ರಷ್ಟು ಕಡಿಮೆಯಾಗಿದೆ. ಏಕೆಂದರೆ ಟಿಸಿಎಸ್​ ಮೂರನೇ ತ್ರೈಮಾಸಿಕದಲ್ಲಿ ಕಾನೂನು ಕ್ಲೈಮ್‌ನ ಇತ್ಯರ್ಥಕ್ಕಾಗಿ 958 ಕೋಟಿ ರೂ.ಗಳ ಒಂದು-ಬಾರಿ ಶುಲ್ಕವನ್ನು ನೀಡಿದೆ.

    ಟಿಸಿಎಸ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ ಕೃತಿವಾಸನ್ ಅವರು, “ಸ್ಥೂಲ-ಆರ್ಥಿಕ ಅಡಚಣೆ ಇರುವ ದುರ್ಬಲ ತ್ರೈಮಾಸಿಕದಲ್ಲಿ ನಮ್ಮ ಬಲವಾದ ಕಾರ್ಯಕ್ಷಮತೆಯು ಉತ್ತಮ-ವೈವಿಧ್ಯತೆಯ ಬಂಡವಾಳ ಮತ್ತು ಗ್ರಾಹಕ ಕೇಂದ್ರಿತ ಕಾರ್ಯತಂತ್ರದೊಂದಿಗೆ ನಮ್ಮ ವ್ಯವಹಾರ ಮಾದರಿಯ ಶಕ್ತಿಯನ್ನು ಪ್ರದರ್ಶಿಸುತ್ತದೆ. ನಾವು ಜನರೇಟಿವ್ ಎಐನಲ್ಲಿ ಅಪಾರ ಆಸಕ್ತಿಯನ್ನು ಕಾಣುತ್ತಿದ್ದೇವೆ. ಈ ಕ್ಷೇತ್ರದಲ್ಲಿ ನಮ್ಮ ಗ್ರಾಹಕರಿಗೆ ನಾವೀನ್ಯತೆ ಮತ್ತು ಪರಿಶೋಧನಾ ಪ್ರಯತ್ನಗಳನ್ನು ಒದಗಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

    ಗುರುವಾರ ಮಾರುಕಟ್ಟೆಯ ಮುಕ್ತಾಯದ ವೇಳೆಗೆ ಟಿಸಿಎಸ್ ಷೇರುಗಳು ಶೇಕಡಾ 0.37 ರಷ್ಟು ಏರಿಕೆ ಕಂಡು 3726.70 ರೂಪಾಯಿಗೆ ತಲುಪಿವೆ.

    3ನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್​ ಲಾಭ ಶೇ 7.3ರಷ್ಟು ಕುಸಿತ

    ಏಷ್ಯಾದ ಶ್ರೀಮಂತರಲ್ಲಿ ಮುಖೇಶ್​ ಅಂಬಾನಿ ನಂಬರ್​ 1: ಟಾಪ್​ ಟೆನ್​ ಕುಬೇರರಲ್ಲಿ ಅನೇಕ ಭಾರತೀಯರು

    ಒಂದೇ ವರ್ಷದಲ್ಲಿ ಶೇಕಡಾ 320 ರಿಟರ್ನ್; ನವೀಕರಿಸಬಹುದಾದ ಇಂಧನ ಕಂಪನಿ ಷೇರು ನೀಡಬಹುದು ಭರ್ಜರಿ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts