More

    ತಾಯಿ-ಮಕ್ಕಳು ಚುಂಬಿಸುವಂತಹ ಅಸಭ್ಯ ವಿಡಿಯೋ: ಯೂಟ್ಯೂಬ್ ವಿರುದ್ಧ ಪ್ರಕರಣ ದಾಖಲು

    ಮುಂಬೈ: ಯೂಟ್ಯೂಬ್‌ನಲ್ಲಿ ತಾಯಂದಿರು ಮತ್ತು ಮಕ್ಕಳನ್ನು ಒಳಗೊಂಡಿರುವ “ಅಸಭ್ಯ ವಿಷಯ” ದ ಬಗ್ಗೆ ಮಕ್ಕಳ ಹಕ್ಕುಗಳ ಸಂಸ್ಥೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್) ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಗುರುವಾರ ಯೂಟ್ಯೂಬ್ ಇಂಡಿಯಾ ವಿರುದ್ಧ ವೀಡಿಯೊಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.

    ತಾಯಿ-ಮಗನ “ಚಾಲೆಂಜ್ ವೀಡಿಯೊಗಳನ್ನು” ಪೋಸ್ಟ್ ಮಾಡಿದ್ದಕ್ಕಾಗಿ ನಿರ್ದಿಷ್ಟ ಯೂಟ್ಯೂಬ್ ಚಾನೆಲ್‌ನ ನಿರ್ವಾಹಕರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

    ಇಂತಹ ಚಾನಲ್‌ಗಳ ಪಟ್ಟಿಯೊಂದಿಗೆ ಜನವರಿ 15 ರಂದು ವೈಯಕ್ತಿಕವಾಗಿ ತನ್ನ ಮುಂದೆ ಹಾಜರಾಗುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಯೂಟ್ಯೂಬ್​ನ ಭಾರತದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಮುಖ್ಯಸ್ಥರಿಗೆ ಸೂಚಿಸಿದೆ.

    ಈ ‘ಚಾಲೆಂಜ್ ವೀಡಿಯೋ’ಗಳಲ್ಲಿ ತಾಯಂದಿರು ಮತ್ತು ಹದಿಹರೆಯದ ಮಕ್ಕಳ ನಡುವೆ ಚುಂಬನದಂತಹ ಅಸಭ್ಯ ವರ್ತನೆಗಳು ಇವೆ ಎಂದು ಮೂಲಗಳು ತಿಳಿಸಿವೆ.

    ಎನ್‌ಸಿಪಿಸಿಆರ್ ಮುಖ್ಯಸ್ಥ ಪ್ರಿಯಾಂಕ್ ಕಾನೂಂಗೊ ಅವರು ಯೂಟ್ಯೂಬ್‌ನ ಭಾರತದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿಯ ಮುಖ್ಯಸ್ಥೆ ಮೀರಾ ಚಾಟ್‌ಗೆ ಪತ್ರ ಬರೆದಿದ್ದಾರೆ.

    ತಾಯಂದಿರು ಮತ್ತು ಪುತ್ರರನ್ನು ಒಳಗೊಂಡ ಸವಾಲುಗಳಿರುವ ಅಸಭ್ಯ ಕೃತ್ಯಗಳನ್ನು ಚಿತ್ರಿಸುವ ಯೂಟ್ಯೂಬ್ ಚಾನೆಲ್‌ಗಳಲ್ಲಿ ಆತಂಕಕಾರಿ ಪ್ರವೃತ್ತಿ ಇರುವುದನ್ನು ಈ ಪತ್ರದಲ್ಲಿ ಕನೂಂಗೊ ಅವರು ಗಮನಕ್ಕೆ ತಂದಿದ್ದಾರೆ.

    “ಯೂಟ್ಯೂಬ್‌ನಲ್ಲಿ ತಾಯಂದಿರು ಮತ್ತು ಮಕ್ಕಳನ್ನು ಒಳಗೊಂಡಿರುವ ಹಲವಾರು ಚಾಲೆಂಜ್ ವೀಡಿಯೊಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ 2012 ಅನ್ನು ಉಲ್ಲಂಘಿಸುತ್ತವೆ” ಎಂದು ಕನೂಂಗೊ ಹೇಳಿದ್ದಾರೆ.

    “ಯೂ ಟ್ಯೂಬ್​ ಇದನ್ನು ಸರಿಪಡಿಸಬೇಕು. ಅಪರಾಧಿಗಳು ಜೈಲಿಗೆ ಹೋಗಬೇಕಾಗುತ್ತದೆ. ಇಂತಹ ವಿಡಿಯೋಗಳ ವ್ಯಾಪಾರೀಕರಣವು ಪೋರ್ನ್ ಮಾರಾಟದಂತಿದೆ. ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿದ ವೀಡಿಯೊಗಳನ್ನು ಒಳಗೊಂಡಿರುವ ಯಾವುದೇ ವೇದಿಕೆಯು ಜೈಲಿಗೆ ಹೋಗಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

    3ನೇ ತ್ರೈಮಾಸಿಕದಲ್ಲಿ ಟಿಸಿಎಸ್​ ಲಾಭ ರೂ. 11,058 ಕೋಟಿ

    3ನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್​ ಲಾಭ ಶೇ 7.3ರಷ್ಟು ಕುಸಿತ

    ಏಷ್ಯಾದ ಶ್ರೀಮಂತರಲ್ಲಿ ಮುಖೇಶ್​ ಅಂಬಾನಿ ನಂಬರ್​ 1: ಟಾಪ್​ ಟೆನ್​ ಕುಬೇರರಲ್ಲಿ ಅನೇಕ ಭಾರತೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts