More

  ಹಾಲ್ವಿ ಮಹಾಂತ ಶಿವಯೋಗಿಗಳ ರಥೋತ್ಸವ ಅದ್ದೂರಿ

  ಸಿರಗುಪ್ಪ: ತಾಲೂಕಿನ ಗಡಿಭಾಗ ಹಾಲ್ವಿ ಗ್ರಾಮದ ಹಾಲ್ವಿ ಮಹಾಂತ ಶಿವಯೋಗಿಗಳ ಮಠದಲ್ಲಿ ಹಾಲ್ವಿ ಮಹಾಂತಶ್ರೀಗಳ ಮಹಾರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

  ಜಾತ್ರೆ ಅಂಗವಾಗಿ ಮಹಾಂತ ಶ್ರೀಗಳು ಹಾಗೂ ರುದ್ರಮುನಿಶ್ವರ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮಗಳು ನಡೆದವು.ಮಠದ ಅಭಿನವ ಮಹಾಂತ ಶ್ರೀಗಳು ಸಾನ್ನಿಧ್ಯವಹಿಸಿದ್ದರು.

  ಸಂಜೆ ಮಹಾರಥೋತ್ಸವಕ್ಕೆ ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ವಿವಿಧ ಮಠಗಳ ಮಠಾಧೀಶರು ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts