ರಣಬೀರ್ ಕಪೂರ್​ ಮನೆಯಲ್ಲಿ ಅತ್ತೆ ಸೊಸೆ ಜಗಳ; ಅಷ್ಟಕ್ಕೂ ಮನೆಯಲ್ಲಿ ನಡೆದಿದ್ದಾದರೂ ಏನು ?

alliya bhat
Published on

ಮುಂಬೈ: ಹಿರಿಯ ನಟಿ ನೀತು ಕಪೂರ್ ಅವರು ಸೊಸೆ ಆಲಿಯಾ ಭಟ್ ಹಾಗೂ ಅವರ ತಾಯಿ ಸೋನಿ ರಾಜ್ದಾನ್ ಜೊತೆ ರಾಹಾ ಕಪೂರ್ ವಿಚಾರವಾಗಿ ಜಗಳ ನಡೆಯಲಿದೆ ಎನ್ನಲಾಗಿದೆ. ಈ ಕುರಿತು ಕಾಫಿ ಕೌಚ್​ ಲೇಟೆಸ್ಟ್ ಎಪಿಸೋಡ್​ನಲ್ಲಿ ಕರಣ್ ಜೊತೆ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಹಾ ಕಪೂರ್ ನಮ್ಮ ಮನೆಯಲ್ಲಿ ಬೆಳೆಯುತ್ತಿದೆ. ಮಗುವನ್ನು ನೋಡಿಕೊಳ್ಳುವ ಮನೆ ಕೆಲಸದಾಕೆಗೆ ಮಗುವಿಗೆ ಪಾಪ ಎಂದು ಕರೆಯಲು ಕಲಿಸು ಎಂದು ಹೇಳುತ್ತೇನೆ. ಆದರೆ ಸೋನಿ ರಾಜ್ದಾನ್ ಅವರು ಮಮ್ಮ ಎಂದು ಹೇಳಲು ಕಲಿಸುತ್ತಾರೆ ಹೀಗಾಗಿ ನಮಗೆ ಜಗಳ ಆಗುತ್ತೆ ಎಂದಿದ್ದಾರೆ.

ನಾನು ಮನೆಗೆ ಹೋದಾಗ ರಾಹಾ ಮಮ್ಮ ಎಂದಳು ಎಂದು ಆಲಿಯಾ ಭಟ್ ನನಗೆ ಹೇಳಿದಳು ಎಂದು ರಣಬೀರ್ ಕಪೂರ್ ತಾಯಿ ನೀತು ಹೇಳಿದ್ದಾರೆ. ಅದಕ್ಕೆ ಉತ್ತರಿಸಿ ರಾಹಾ ಮಮ್ಮ ಎನ್ನಲಿಲ್ಲ, ಮ್ ಮ್ ಎಂದಿದ್ದಾಳೆ. ಹಾಗಾಗಿ ತುಂಬಾ ಖುಷಿ ಪಡಬೇಡ ಎಂದು ನಾನು ಆಲಿಯಾಗೆ ಹೇಳಿದ್ದೆ ಎಂದು ನೀತು ಕಪೂರ್ ಹೇಳಿದ್ದಾರೆ.

ಅಲಿಯಾ ಭಟ್​ ಮತ್ತು ರಣಬೀರ್​ ಇಬ್ಬರೂ ಶೂಟಿಂಗ್​​ನಲ್ಲಿ ಬ್ಯುಸಿ ಇರುವ ಕಾರಣ ಮನೆಗೆ ಬಂದ ಹೊತ್ತಲ್ಲಿ ಮಗುವನ್ನು ಎತ್ತಲು ಇಬ್ಬರೂ ಸಣ್ಣ ಪುಟ್ಟ ಜಗಳ ಮಾಡುತ್ತಾರಂತೆ. ಅಂತೂ ಕಪೂರ್ ಫ್ಯಾಮಿಲಿ ಜಗಳ ಮಾಡಿಕೊಂಡೇ ಮಗುವಿಗೆ ಹೆಚ್ಚಿನ ಪ್ರೀತಿ ನೀಡ್ತಾರಂತೆ.

ಆಲಿಯಾ ಭಟ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇತ್ತೀಚೆಗೆ ಕ್ರಿಸ್ಮಸ್ ಸಂದರ್ಭ ಮಗಳ ಮುಖವನ್ನು ಮಾಧ್ಯಮದವರ ಮುಂದೆ ರಿವೀಲ್ ಮಾಡಿದ್ದರು. ರಾಹಾ ನಮ್ಮ ಕುಟುಂಬದ ಭಾಗವಾಗಿದ್ದಕ್ಕೆ. ನಮ್ಮ ಬದುಕು ಈಗಷ್ಟೇ ಆರಂಭವಾದಂತ್ತೆ ಅನಿಸುತ್ತಿದೆ ಎಂದು ಆಲಿಯಾ ಭಟ್ ಹಲವು ಬಾರಿ ಹೇಳಿಕೊಂಡಿದ್ದರು.

ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್​ ಕಪೂರ್ ಏಪ್ರಿಲ್​ 14ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಬಳಿಕ ನವೆಂಬರ್ 06 ರಂದು ನಟಿ ಆಲಿಯಾ ಭಟ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net