BBKS10: 'ನನಗೆ ಕಾರ್ತಿಕ್ ಆಡುವುದು ಇಷ್ಟವಿಲ್ಲ'; ಪ್ರೀತಿಯ ಗೆಳತನದಲ್ಲಿ ಮೂಡಿತು ಒಡಕು!

ವಿಜಯವಾಣಿ - 2024-01-11T133107.973
Published on

ಬೆಂಗಳೂರು: ‘ಟಿಕೆಟ್ ಟು ಫಿನಾಲೆ’ ಟಾಸ್ಕ್‌ಗಳು ಬಿಗ್‌ಬಾಸ್ ಮನೆಯೊಳಗೆ ಸಾಕಷ್ಟು ಚಕಮಕಿ ಹುಟ್ಟಿಸುತ್ತಿದ್ದು, ಈಗ ಕಾರ್ತಿಕ್ ಮತ್ತು ಸಂಗೀತಾ ಮಧ್ಯೆ ಕಿಡಿ ಮತ್ತೆ ಹೊತ್ತಿಕೊಂಡಿದೆ. ಒಬ್ಬರನ್ನು ಆಟದಿಂದ ಹೊರಗಿಡುವ ಅಧಿಕಾರ ಸಂಗೀತಾ ಅವರಿಗೆ ಸಿಕ್ಕಂತಿದೆ. ವಿನಯ್, ಸಂಗೀತಾಗೆ ‘ನಿನಗೆ ಒಬ್ಬರನ್ನು ತೆಗೆದು ಒಬ್ಬರನ್ನು ಸೇರಿಸುವುದಕ್ಕೆ ಅಡ್ವಾಂಟೇಜ್ ಬರುತ್ತದೆ’ ಎಂದು ಹೇಳಿದಾಗ ಸಂಗೀತಾ, ‘ನಾನು ಫಸ್ಟ್ ಕಾರ್ತಿಕ್‌ ಅವರನ್ನೇ ತೆಗೆಯುವುದು’ ಎಂದು ಹೇಳಿದ್ದಾರೆ.

ಅದರಂತೆಯೇ ‘ನನಗೆ ಕಾರ್ತಿಕ್ ಆಡುವುದು ಇಷ್ಟವಿಲ್ಲ. ಹಾಗಾಗಿ ಅವರನ್ನು ಹೊರಗಿಡುತ್ತಿದ್ದೀನಿ’ ಎಂದ ಸಂಗೀತಾ ಅವರನ್ನು ಹೊರಗಿಟ್ಟಿದ್ದಾರೆ. ಇದಕ್ಕೆ ಟಾಸ್ಕ್‌ ಮುಗಿದ ಮೇಲೆ ಕಾರ್ತಿಕ್, ‘ವುಮನ್ ಕಾರ್ಡ್‌’ ಎಂದು ಟೀಕಿಸಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಸಿಟ್ಟಿಗೆದ್ದ ಸಂಗೀತಾ ಕೂಡ ಕಿರುಚಾಡಿ, ‘ಇದು ನಿಮ್ಮ ಕ್ಯಾರೆಕ್ಟರ್‍ ಅನ್ನು ಸೂಚಿಸುತ್ತದೆ’ ಎಂದು ಹೇಳಿದ್ದಾರೆ.

ಹೀಗೆ ಹಿಂದೊಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಜಗಳದ ಕಿಡಿ ಮತ್ತೆ ಹೊತ್ತಿಕೊಂಡಿದ್ದು, ಇದರ ಪರಿಣಾಮ ಏನಾಗುತ್ತದೆ? ವಾರಾಂತ್ಯದ ಹೊತ್ತಿಗೆ ಫಿನಾಲೆಗೆ ಪ್ರವೇಶ ಪಡೆದುಕೊಳ್ಳಲಿರುವ ಸದಸ್ಯ ಯಾರು ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೆ ಕಾಯಬೇಕಿದೆ. ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net