VIDEO | ಮಗಳ ಮದುವೆಯ ನಂತರ ಭಾವುಕರಾಗಿ ಕಣ್ಣೀರು ಒರೆಸಿಕೊಂಡ ಅಮೀರ್; ಐರಾ ಮಾಡಿದ್ದೇನು?

amir
Published on

ಮುಂಬೈ: ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಪುತ್ರಿ ಐರಾ ಖಾನ್ ಗುರುವಾರ ಉದಯಪುರದಲ್ಲಿ ತನ್ನ ಬಹುಕಾಲದ ಗೆಳೆಯ ನೂಪುರ್ ಶಿಖರೆ ಅವರನ್ನು ವಿವಾಹವಾದರು. ಈ ಜೋಡಿಯ ವಿವಾಹ ಮಹೋತ್ಸವದ ಹಲವು ಫೋಟೋಗಳು ಮತ್ತು ವಿಡಿಯೋಗಳು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿವೆ. ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ನಡೆದ ಮದುವೆಯಲ್ಲಿ ಐರಾ ಮತ್ತು ನೂಪುರ್ ಚುಂಬಿಸಿದಾಗ, ಅಮೀರ್ ಖಾನ್ ಈ ಸಮಯದಲ್ಲಿ ಸಾಕಷ್ಟು ಭಾವುಕರಾಗಿ ಕಾಣಿಸಿಕೊಂಡರು. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ.

ಖಾನ್ ಮತ್ತು ನೂಪುರ್ ಶಿಖರೆ ವಿವಾಹದ ಸಂದರ್ಭದಲ್ಲಿ ಯಾವಾಗಲೂ ಪರಸ್ಪರ ಬೆಂಬಲಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ಅಮೀರ್ ಖಾನ್ ಭಾವುಕರಾದರು. ಅಂದಹಾಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ತಮ್ಮ ಕಣ್ಣೀರನ್ನು ಕರವಸ್ತ್ರದಿಂದ ಒರೆಸುತ್ತಿರುವುದು ಕಂಡುಬಂದಿದೆ. ಅಮೀರ್ ಮಾಜಿ ಪತ್ನಿ ರೀನಾ ಕೂಡ ಮಗಳ ಮದುವೆಯಲ್ಲಿ ಭಾವುಕರಾಗಿ ಕಾಣಿಸಿಕೊಂಡಿದ್ದರು.

ನಂತರ ಅಮೀರ್ ಖಾನ್ ತನ್ನ ಮಗ ಜುನೈದ್ ಮತ್ತು ಮಾಜಿ ಪತ್ನಿ ರೀನಾ ದತ್ತಾ ಅವರೊಂದಿಗೆ ನವವಿವಾಹಿತ ದಂಪತಿಗಳ ಬಳಿ ತೆರಳಿ ಈ ವೇಳೆ ಎಲ್ಲರೂ ಫ್ಯಾಮಿಲಿ ಹಗ್ ಮಾಡಿದ್ದು, ಐರಾ ಕೂಡ ಭಾವುಕರಾಗಿ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು. ಅಷ್ಟೇ ಅಲ್ಲ, ತನ್ನ ತಂದೆಯನ್ನು ತಬ್ಬಿಕೊಂಡು ಅಳುವ ದೃಶ್ಯಗಳು ಎಲ್ಲರ ಗಮನಸೆಳೆದಿದೆ. ಇದಾದ ನಂತರ ಖಾನ್ ಮತ್ತು ಶಿಖರೆ ಕುಟುಂಬಗಳು ಒಟ್ಟಿಗೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ನಾವಿಲ್ಲಿ ನೋಡಬಹುದು. ಮದುವೆಯ ಬಗ್ಗೆ ಮಾತನಾಡುವುದಾದರೆ ಐರಾ ಬಿಳಿ ಗೌನ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ನೂಪುರ್ ಟುಕ್ಸೆಡೊ ಧರಿಸಿದ್ದರು. ವಿವಾಹದ ನಂತರ ಐರಾ ಮತ್ತು ನೂಪುರ್ ಪರಸ್ಪರ ಚುಂಬಿಸಿದರು. ಇದಾದ ನಂತರ ದಂಪತಿಗಳು ನೃತ್ಯ ಮಾಡಿದರು.

ಜನವರಿ 13 ರಂದು ರಿಸೆಪ್ಷನ್  ಆಯ್ರಾ ಮತ್ತು ನೂಪುರ್ ಅವರ ಸಾಂಪ್ರದಾಯಿಕ ವಿವಾಹದ ಎಲ್ಲಾ ಕಾರ್ಯಕ್ರಮಗಳು ಈಗ ಉದಯಪುರದಲ್ಲಿ ನಡೆದಿವೆ. ಇಂದು ದಂಪತಿ ಕುಟುಂಬ ಸಮೇತ ಮುಂಬೈಗೆ ತೆರಳಲಿದ್ದಾರೆ. ದಂಪತಿಗಳ ಆರತಕ್ಷತೆ ಕಾರ್ಯಕ್ರಮವನ್ನು ಜನವರಿ 13 ರಂದು ಆಯೋಜಿಸಲಾಗಿದೆ. ಇದರಲ್ಲಿ ಅಮೀರ್ ಖಾನ್ ಬಾಲಿವುಡ್ ನ ಎಲ್ಲಾ ದೊಡ್ಡ ತಾರೆಯರನ್ನು ಆಹ್ವಾನಿಸಿದ್ದಾರೆ. ಅಮೀರ್ ಖಾನ್ ಮಗಳ ಆರತಕ್ಷತೆ ಸಮಾರಂಭದಲ್ಲಿ ಶಾರುಖ್ ಖಾನ್ ರಿಂದ ಸಲ್ಮಾನ್ ಖಾನ್ ವರೆಗೆ ಎಲ್ಲರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net