NEET UG 1ನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ವಿಳಂಬ!

untitled-design-81-689b24d5df9df
Published on

NEET UG: ವೈದ್ಯಕೀಯ ಕೌನ್ಸಲಿಂಗ್​ ಸಮಿತಿಯು NEET UG ಸುತ್ತಿನ 1 ಸೀಟು ಹಂಚಿಕೆ ಫಲಿತಾಂಶವನ್ನುಇನ್ನೂ ಬಿಡುಗಡೆ ಮಾಡದ ಕಾರಣ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಆಗಸ್ಟ್ 9ರಂದು ಫಲಿತಾಂಶ ಬಿಡುಗಡೆಗೆ ನಿಗಧಿಪಡಿಸಲಾಗಿತ್ತು. ನಂತರ ದಿನಾಂಕವನ್ನು ಆಗಸ್ಟ್​ 11ಕ್ಕೆ ಘೋಷಿಸಲು ನಿರ್ಧರಿಸಿದರು. ಆದರೆ ವಿದ್ಯಾರ್ಥಿಗಳಿಗೆ ಇನ್ನೂ ಫಲಿತಾಂಶ ತಿಳಿಸಿಲ್ಲ ಹಾಗೂ ಹೊಸ ದಿನಾಂಕವನ್ನು ಕೂಡಾ ಘೋಷಿಸಿಲ್ಲ.

ಹೊಸ ಕೌನ್ಸಲಿಂಗ್​ ಭರ್ತಿ ಪ್ರಕಾರ, ಸೀಟು ಆಯ್ಕೆ ಹಾಗೂ ಲಾಕಿಂಗ್​ ವಿಧಾನವನ್ನು ತೆರೆದಿಡಿಯಲಾಗಿದ್ದು, ಅಭ್ಯರ್ಥಿಗಳಿಗೆ ಕಾಲೇಜು ಹಾಗೂ ಕೋರ್ಸ್​ ಆದ್ಯತೆಗಳನ್ನು ಭರ್ತಿ ಮಾಡಲು ಹೆಚ್ಚುವರಿ ಸಮಯವನ್ನು ನಿಗಧಿಪಡಿಸಲಾಗಿದೆ. ಫಲಿತಾಂಶ ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ಎಂಸಿಸಿ ಅಧಿಕೃತ ವೆಬ್​ಸೈಟ್​ನ mcc.nic.in. ನಲ್ಲಿ 1 ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪರಿಶೀಲನೆ ನಡೆಸಬಹುದು.

ಎಂಸಿಸಿ ಕೆಳಗಿನವುಗಳಿಗಾಗಿ ಕೌನ್ಸೆಲಿಂಗ್​ ಕೈಗೊಳ್ಳುತ್ತದೆ

* ಕೇಂದ್ರಿಯ ವಿಶ್ವವಿದ್ಯಾಲಯಗಳಾದ ಎಎಂಯು, ಬಿಎಚ್​ಯು, ಜೆಎಂಐ,ಇಎಸ್​ಐಸಿ ಗಳಲ್ಲಿ ಶೇ.100ರಷ್ಟು ಸೀಟುಗಳಿಗೆ ಕೌನ್ಸೆಲಿಂಗ್​ ನಡೆಸುತ್ತದೆ.

* ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 15 ರಷ್ಟು ಅಖಿಲ ಭಾರತ ಕೋಟಾ (AIQ) ಸೀಟುಗಳ ಹಂಚಿಕೆ.

* ರಾಜ್ಯ ಕೌನ್ಸೆಲಿಂಗ್ ಅಧಿಕಾರಿಗಳು ಉಳಿದ 85% ಸರ್ಕಾರಿ ಸೀಟುಗಳನ್ನು ಮತ್ತು ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜು ಸೀಟುಗಳನ್ನು ನಿರ್ವಹಿಸುತ್ತಾರೆ.

ಪ್ರಕ್ರಿಯೆ ಹೇಗಿರುತ್ತದೆ?

* ನೋಂದಣಿ

ಮೊದಲನೆಯದಾಗಿ, ಅಭ್ಯರ್ಥಿಗಳು ತಮ್ಮ NEET ರೋಲ್ ಸಂಖ್ಯೆ, ವೈಯಕ್ತಿಕ ಮಾಹಿತಿಯೊಂದಿಗೆ MCC ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಶುಲ್ಕವನ್ನು ಪಾವತಿಸಬೇಕು.

* ಆಯ್ಕೆ ಭರ್ತಿ ಹಾಗೂ ಸೀಟುಗಳನ್ನು ಲಾಕ್​ ಮಾಡುವುದು

ವಿದ್ಯಾರ್ಥಿಗಳು ತಮಗಿಷ್ಟವಾದ ಕಾಲೇಜುಗಳು ಹಾಗೂ ಕೋರ್ಸ್​ಗಳನ್ನು ಆಯ್ಕೆಮಾಡಿ ಲಾಕ್​ ಮಾಡುತ್ತಾರೆ. ಒಮ್ಮೆ ಆಯ್ಕೆಯಾದ ನಂತರ ಅವುಗಳನ್ನು ಬದಲಾಯಿಸುವಂತಿಲ್ಲ

* ಸೀಟ್​ ಹಂಚಿಕೆ

ಎಂಸಿಸಿಯು ನೀಟ್ ಶ್ರೇಣಿ, ಮೀಸಲಾತಿ ಅಂಕಗಳು ಮತ್ತು ಅಭ್ಯರ್ಥಿಯ ಆದ್ಯತೆಗಳ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡುತ್ತದೆ.

* ಕಾಲೇಜಿಗೆ ದಾಖಲಾಗುವುದು

ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ನಿಗದಿಪಡಿಸಿದ ಕಾಲೇಜಿಗೆ ಹಾಜರಾಗಿ, ಪ್ರವೇಶ ಶುಲ್ಕ ಪಾವತಿಸಬೇಕು.

ಮುಂದಿನ ಕೌನ್ಸೆಲಿಂಗ್​ ಸುತ್ತುಗಳು

ಮೊದಲ ಸುತ್ತಿನಲ್ಲಿ ಸೀಟು ಸಿಗದ ವಿದ್ಯಾರ್ಥಿಗಳಿಗೆ ಅವಕಾಶಗಳಿರುತ್ತವೆ

ಸುತ್ತು 2

ಮಾಪ್-ಅಪ್ ಸುತ್ತು

ಸ್ಟ್ರೇ ಖಾಲಿ ಸುತ್ತು

ಪ್ರತಿಯೊಂದು ಸುತ್ತು ಒಂದೇ ಸ್ವರೂಪದ್ದಾಗಿರುತ್ತದೆ ಮತ್ತು ಹಿಂದಿನ ಸುತ್ತುಗಳ ನಂತರ ಸೀಟು ಲಭ್ಯತೆಯನ್ನು ಅವಲಂಬಿಸಿರುತ್ತದೆ

ಅಭ್ಯರ್ಥಿಗಳು ಏನು ಮಾಡಬೇಕು?

ಫಲಿತಾಂಶ ಪ್ರಕಟಣೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಈ ಕೆಳಗಿನವುಗಳನ್ನು ಪಾಲಿಸಬೇಕು

ಪರಿಶೀಲನೆಗೆ ಮತ್ತು ಪ್ರವೇಶಕ್ಕೆ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

mcc.nic.in ನಲ್ಲಿ ನಿಯಮಿತವಾಗಿ ನವೀಕರಣಗಳನ್ನು ಅನುಸರಿಸಿ

ಕೌನ್ಸೆಲಿಂಗ್ ಸುತ್ತುಗಳು ಹಾಗೂ ವರದಿ ಮಾಡುವ ದಿನಾಂಕಗಳ ಬಗ್ಗೆ ತಿಳಿದಿರಲಿ

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net