ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದ ದೇವಿಕಾ ರೋಟವಂರವರಿಗೆ ಸ್ವಾತಂತ್ರ್ಯ ದಿನದಂದು ಶ್ರೀ ಷಣ್ಮುಕ ಶೌರ್ಯ ಪ್ರಶಸ್ತಿ ಪ್ರಧಾನ | Shaurya Ratna Award

untitled-design-80-689b0cba1e9e7
Published on

Shaurya Ratna Award : ಷಣ್ಮುಕಾನಾಂದ ಸಭೆಯು ಇದೇ 2025 ರ ಆಗಸ್ಟ್​ 15 ರಂದು ಸಮಾರಂಭವನ್ನು ಆಯೋಜಿಸಲಿದ್ದು, 2008ರಲ್ಲಿ ಮುಂಬೈನ ಭಯೋತ್ಪಾದಕ ದಾಳಿಯಿಂದ ಬದುಕುಳಿದ ದೇವಿಕಾ ರೋಟವಂ ಅವರಿಗೆ ಶ್ರೀ ಷಣ್ಮುಕ ಶೌರ್ಯ ಪ್ರಶಸ್ತಿ ಕೊಟ್ಟು ಸನ್ಮಾನಿಸಲಿದೆ.

9 ವರ್ಷ ಇದ್ದಾಗ ಈ ಬಾಲಕಿಯ ಕಾಲಿಗೆ ಗುಂಡು ತಗುಲಿದ್ದು, ನಂತರ ವಿಚಾರಣೆ ಸಮಯದಲ್ಲಿ ಈಕೆ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್​ ಕಸಬ್​ನನ್ನು ಆ ವಯಸ್ಸಿನಲ್ಲಿಯೇ ಗುರುತಿಸಿದ್ದಳು. ಈ ವೇಳೆ ಭಯೋತ್ಪಾದಕನಿಗೆ ಸರ್ಕಾರ ಶಿಕ್ಷೆಯನ್ನು ವಿಧಿಸಿತ್ತು. ಇನ್ನು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೇನಾ ಸಿಬ್ಬಂದಿ ಕುಟುಂಬಗಳಿಗೂ ಹಾಗೂ ಆಪ್ ಸಿಂಧೂರ್ ಸಮಯದಲ್ಲಿ ಮಡಿದ ನಾಗರಿಕರ ಕುಟುಂಬಗಳಿಗೂ ಸಹ ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಕ್ಯಾಂಟೀನ್​ ಸ್ಟೋರ್ಸ್​ನ ಮುಖ್ಯಸ್ಥ ಮೇಜರ್ ಜನರಲ್ ಸತೀಂದರ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದು, ಸ್ಟೇಷನ್ ಕಮಾಂಡರ್ ಬ್ರಿಗ್ ಜ್ಞಾನ್ ತ್ರಿವೇದಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net