

ನವದೆಹಲಿ: ಭಾರತೀಯ ನೌಕಾ ಪಡೆಯ ಅಡ್ಮಿರಲ್ಗಳ ಸಮವಸ್ತ್ರದಲ್ಲಿ ಹೊಸ ವಿನ್ಯಾಸವನ್ನು ಸೇರ್ಪಡೆಗೊಳಿಸಲಾಗಿದ್ದು ಛತ್ರಪತಿ ಶಿವಾಜಿ ಮಹಾರಾಜರ ಪ್ರೇರಣೆಯಿಂದ ಇದನ್ನು ಮಾಡಲಾಗಿದೆ ಎಂದು ನೇವಿ ಹೇಳಿದೆ.
ಅಧಿಕಾರಿಗಳ ದರ್ಜೆಯನ್ನು ಸೂಚಿಸಲು ಸಮವಸ್ತ್ರದ ಮೇಲೆ ಧರಿಸುವ ಅಲಂಕಾರಿಕ ಭುಜ ಪಟ್ಟಿಯ (ಎಪಾಯುಲೆಟ್ಸ್) ವಿನ್ಯಾಸವನ್ನು ಬದಲಾಯಿಸಲಾಗಿದೆ. ಅಡ್ಮಿರಲ್ಗಳ ಭುಜಪಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಪ್ರತಿಬಿಂಬಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 4ರಂದು ನಡೆದ ನೌಕಾ ಪಡೆ ದಿನಾಚರಣೆಯಂದು ಘೋಷಿಸಿದ್ದರು.
ಭಾರತೀಯ ನೇವಿಯಲ್ಲಿರುವ ಅಡ್ಮಿರಲ್ಗಳು ಎರಡು, ಮೂರು ಹಾಗೂ ನಾಲ್ಕು ನಕ್ಷತ್ರಗಳ ದರ್ಜೆಯ ಅಧಿಕಾರಿಗಳಾಗಿದ್ದಾರೆ. ಅವರ ನಂತರ ವೈಸ್ ಅಡ್ಮಿರಲ್ ಹಾಗೂ ನಂತರ ಎರಡು ನಕ್ಷತ್ರಗಳ ದರ್ಜೆಯ ಅಧಿಕಾರಿ ರೀರ್ ಅಡ್ಮಿರಲ್ ಇರುತ್ತಾರೆ.