More

    ಪಾಕಿಸ್ತಾನಕ್ಕೆ ಹೋಗು ಎಂದ ಧೋನಿಗೆ ಅಭಿಮಾನಿ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್!

    ಮುಂಬೈ: ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ಅವರು ತಮ್ಮ ಅಬ್ಬರದ ಬ್ಯಾಟಿಂಗ್​ ಮತ್ತು ನಾಯಕತ್ವದಿಂದ ಮಾತ್ರವಲ್ಲ, ಕ್ಯಾಮೆರಾಗಳ ಮುಂದೆ ಹಾಸ್ಯ ಚಟಾಕಿ ಹಾರಿಸುವುದರಲ್ಲೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ತಮಗೆ ಎದುರಾಗುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ಅಲ್ಲೊಂದು ಹಾಸ್ಯ ಚಟಾಕಿ ಹಾರಿಸುವುದೇ ಧೋನಿ ಅವರ ವಿಶೇಷತೆ. ಇದೀಗ ಧೋನಿ ಅವರ ಮತ್ತೊಂದು ವಿಡಿಯೋ ವೈರಲ್​ ಆಗಿದ್ದು, ಅಭಿಮಾನಿಗೆ ನೀಡಿರುವ ಸಲಹೆ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೆ, ಅಭಿಮಾನಿಯ ಉತ್ತರವೂ ಸಹ ಎಲ್ಲರ ಮನ ಮುಟ್ಟಿದೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ಧೋನಿ ಅವರು ಪಾಕಿಸ್ತಾನದ ತಿನಿಸುಗಳ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ತುಂಬಾ ರುಚಿಕರವಾದ ತಿನಿಸುಗಳು ಬೇಕಾದರೆ ಒಮ್ಮೆ ನೀನು ಪಾಕಿಸ್ತಾನಕ್ಕೆ ಹೋಗು ಎಂದು ಅಭಿಮಾನಿಗೆ ಧೋನಿ ಅವರು ಹೇಳುತ್ತಾರೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

    ಧೋನಿ ನೀಡಿದ ಸಲಹೆಗೆ ನಯವಾಗಿಯೇ ಉತ್ತರ ನೀಡುವ ಅಭಿಮಾನಿ, ವಿಶ್ವದಲ್ಲೇ ತುಂಬಾ ರುಚಿಕರವಾದ ಆಹಾರವನ್ನು ಪಾಕಿಸ್ತಾನದವರು ನೀಡಿದರೂ ಸಹ ನಾನು ಅಲ್ಲಿಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಧೋನಿ, ಗಹಗಹಿಸಿ ನಗುತ್ತಾರೆ.

    ಹಿಂದೊಮ್ಮೆ ಧೋನಿಯವರು ಸಂಬಂಧ (ರಿಲೇಶನ್​ಶಿಪ್ಸ್​)ಗಳ ಬಗ್ಗೆ ಮಾತನಾಡಿದ್ದರು. ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ವಿಡಿಯೋದಲ್ಲಿ ಜನರ ಗುಂಪನ್ನು ಉದ್ದೇಶಿಸಿ ಮಾತನಾಡಿದ್ದ ಧೋನಿ, ಸಂಬಂಧಗಳ ಬಗ್ಗೆ ಕೆಲವು ಮೌಲ್ಯಯುತ ಸಲಹೆಗಳನ್ನು ನೀಡಿದ್ದರು. ಅದರಲ್ಲೂ ವಿಶೇಷವಾಗಿ ಬ್ಯಾಚುಲರ್​ಗಳನ್ನು ಗುರಿಯಾಗಿಸಿಕೊಂಡು ಧೋನಿ ಮಾತನಾಡಿದ್ದರು. ಅನೇಕ ಸಂಬಂಧಗಳಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದರು. ಗರ್ಲ್​ಫ್ರೆಂಡ್​ಗಳನ್ನು ಹೊಂದಿರುವ ಬ್ಯಾಚುಲರ್​ಗಳಿಗೆ ಈ ಉತ್ತರವನ್ನು ಹೇಳುವ ಮೂಲಕ ನಾನು ಸಾಮಾನ್ಯ ತಪ್ಪುಗ್ರಹಿಕೆಯನ್ನು ತೆರವುಗೊಳಿಸಲು ಬಯಸುತ್ತೇನೆ. ಅದೇನೆಂದರ ನಿಮ್ಮ ನಿಮ್ಮ ಗರ್ಲ್​ಫ್ರೆಂಡ್​ ಇತರರಿಗಿಂತ ತುಂಬಾ ವಿಭಿನ್ನ ಎಂದು ನಿಮ್ಮಷ್ಟಕ್ಕೆ ನೀವು ಭಾವಿಸಿಕೊಳ್ಳಬೇಡಿ ಎಂದು ಧೋನಿ ಸಲಹೆ ನೀಡಿದ್ದರು. ಧೋನಿ ಅವರು ಈ ಹೇಳಿಕೆಯನ್ನು ನೀಡುತ್ತಿದ್ದಂತೆ ಅಲ್ಲಿ ನೆರದಿದ್ದ ಜನರು ಜೋರಾಗಿ ನಕ್ಕಿರುವುದು ವೈರಲ್​ ವಿಡಿಯೋದಲ್ಲಿತ್ತು.

    2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ​ ಅವರ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಅವರ 7ನೇ ನಂಬರಿನ ಜರ್ಸಿಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಬಿಸಿಸಿಐ, ಧೋನಿ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸಿದೆ. ಆಟಗಾರನಾಗಿ ಮತ್ತು ತಂಡದ ನಾಯಕನಾಗಿ ಕ್ರೀಡಾ ಜಗತ್ತಿನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಧೋನಿ, ಕ್ರಿಕೆಟ್​ ಲೋಕದ ಅಪ್ರತಿಮ ವ್ಯಕ್ತಿ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಮತ್ತು 2013ರಲ್ಲಿ ಚಾಂಪಿಯನ್ಸ್​ ಟ್ರೋಫಿಯಂತಹ ಎಲ್ಲ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

    ತಂಡದ ಪರ 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 10 ಶತಕ ಮತ್ತು 73 ಅರ್ಧ ಶತಕಗಳೊಂದಿಗೆ 50.57 ರನ್ ಸರಾಸರಿಯಲ್ಲಿ ಒಟ್ಟು 10,773 ರನ್​ ಕಲೆಹಾಕಿದ್ದಾರೆ. ಟಿ20 ಪಂದ್ಯಗಳ ವಿಚಾರಕ್ಕೆ ಬಂದರೆ, ಒಟ್ಟು 98 ಪಂದ್ಯಗಳನ್ನು ಆಡಿರುವ ಧೋನಿ, 37.60 ಸರಾಸರಿಯೊಂದಿಗೆ 126.13 ಸ್ಟ್ರೈಕ್​ರೇಟ್​ನಲ್ಲಿ 1617 ರನ್ ಗಳಿಸಿದ್ದಾರೆ. ಟೆಸ್ಟ್​ ಪಂದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಧೋನಿ, 97 ಪಂದ್ಯಗಳಲ್ಲಿ 6 ಶತಕ ಮತ್ತು 33 ಅರ್ಧಶತಕಗಳೊಂದಿಗೆ 4876 ರನ್​ ಕಲೆಹಾಕಿದ್ದಾರೆ.

    ವಿಕೆಟ್​ಕೀಪರ್​ ಆಗಿ ತಮ್ಮ ವೃತ್ತಿಬದುಕಿನಲ್ಲಿ​ ಧೋನಿ ಅವರು ಅತ್ಯದ್ಭುತ ಕೌಶಲಗಳನ್ನು ತೋರಿದ್ದಾರೆ. ತಮ್ಮ ಚಾಕಚಕ್ಯತೆಯಿಂದ ಅನೇಕ ಪಂದ್ಯಗಳಲ್ಲಿ ಸ್ಪಂಪೌಟ್​ ಹಾಗೂ ರನೌಟ್​ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳಿವೆ. ವಿಶ್ವ ಕ್ರಿಕೆಟ್​ನ ಶ್ರೇಷ್ಠ ವಿಕೆಟ್​ ಕೀಪರ್​ಗಳ ಸಾಲಿನಲ್ಲಿ ಧೋನಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಒಟ್ಟು 294 ಬಾರಿ ವಿಕೆಟ್​ಗಳನ್ನು ತೆಗೆದಿದ್ದಾರೆ. (ಏಜೆನ್ಸೀಸ್​)

    ಧೋನಿ ಸರ್​ ಕಪ್​ ಗೆಲ್ಲಲು RCBಗೆ ಸಹಾಯ ಮಾಡಿ: ಯುವಕನ ಮನವಿಗೆ ಮಾಹಿ ಕೊಟ್ಟ ಉತ್ತರ ವೈರಲ್​

    ನಿವೃತ್ತಿ ನಂತ್ರ ಧೋನಿ ಪ್ಲ್ಯಾನ್​ ಏನು? ಕುಟುಂಬಕ್ಕಿಂತ ಮಾಹಿಯ ಮೊದಲ ಆದ್ಯತೆ ಕೇಳಿ ಸಲಾಂ​ ಎಂದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts