ರಾಜಸ್ಥಾನ್: ಸಾಮಾನ್ಯವಾಗಿ ದೇಶದ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರು ಅಂದರೆ ಬಿಗಿ ಭದ್ರತೆ, ಐಷಾರಾಮಿ ಕಾರುಗಳು ಮತ್ತು ಸದಾ ವಿಐಪಿ ಪ್ರೋಟೋಕಾಲ್‌ಗಳ ನಡುವೆಯೇ ಇರುತ್ತಾರೆ. ಆದರೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla Viral Video) ಈ ಎಲ್ಲಾ ವಿಐಪಿ ಹಮ್ಮನ್ನು ಪಕ್ಕಕ್ಕಿಟ್ಟು, ಸಾಮಾನ್ಯರಲ್ಲಿ ಸಾಮಾನ್ಯನಂತೆ ನೆಲದ ಮೇಲೆ ಕುಳಿತು ಊಟ ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.