ಹೆಣ್ಣುಮಕ್ಕಳಿಗೆ ಶಿಕ್ಷಣ ಬೇಡ, ಮನೆಯಲ್ಲಿದ್ದರೆ ಸಾಕು! ಬಿಹಾರ ಶಿಕ್ಷಣ ಸಚಿವ ಮಿತಿಲೇಶ್ ತಿವಾರಿ ವಿವಾದಾತ್ಮಕ ಹೇಳಿಕೆ..Mithilesh Tiwari

ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿಲ್ಲ : ಮಿತಿಲೇಶ್​ ತಿವಾರಿ
ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿಲ್ಲ : ಮಿತಿಲೇಶ್​ ತಿವಾರಿ
Published on

ಪ್ರಮುಖ ಮುಖ್ಯಾಂಶಗಳು

  • ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿಲ್ಲ : ಮಿತಿಲೇಶ್​ ತಿವಾರಿ
  • ಅವರು ಮನೆಯಲ್ಲಿದ್ದರೆ ಸಾಕು: ಬಿಹಾರ್​ ಶಿಕ್ಷಣ ಸಚಿವ
  • ​ ಶಿಕ್ಷಣ ಸಚಿವನ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ
ಬಿಹಾರ್​: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೇಟಿ ಬಜಾವೋ, ಬೇಟಿ ಪಡಾವೋ (ಮಗಳನ್ನು ರಕ್ಷಿಸಿ, ಮಗಳಿಗೆ ಶಿಕ್ಷಣ ನೀಡಿ) ಎಂದು ಹೇಳಿದರೆ, ಬಿಹಾರದ ಶಿಕ್ಷಣ ಸಚಿವ ಮಿತಿಲೇಶ್​ ತಿವಾರಿ (Mithilesh Tiwari) ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವೇನಿದೆ ಎಂದು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಹೆಣ್ಣು ಮಕ್ಕಳು ಮನೆಯಲ್ಲೇ ಇರಲಿ!

ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಿತಿಲೇಶ್​ ತಿವಾರಿ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವೇನಿಲ್ಲ, ಅವರು ನಮ್ಮ ಮನೆಯಲ್ಲಿ ಇರಲಿ, ಅವರು ನಮ್ಮ ಮನೆತನ ಹಾಗೂ ಸಮೃದ್ಧಿಯ ಸಂಕೇತ. ಹೀಗಾಗಿ ಅವರು ಮನೆ ಬಿಟ್ಟು ಹೊರಗೆ ಹೋಗುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ವಿರೋಧ ಪಕ್ಷಗಳಿಂದ ವಿರೋಧ!
ಮಿತಿಲೇಶ್​ ತಿವಾರಿ ಅವರ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಹರಿಹಾಯ್ದಿದ್ದಾರೆ. ಕಾಂಗ್ರೆಸ್​ ನಾಯಕ ಶ್ರೀನಿವಾಸ್​ ಬಿವಿ, ಇವರೇ ನೋಡಿ ಬಿಹಾರದ ನೂತನ ಶಿಕ್ಷಣ ಸಚಿವ ಎಂದು ವ್ಯಂಗ್ಯವಾಡಿದ್ದಾರೆ.
ಮಿತಿಲೇಶ್​ ತಿವಾರಿ ಪೂಜೆ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಆರ್​ಜೆಡಿ ಪಕ್ಷ, ಈ ಮಿತಿಲೇಶ್​ ತಿವಾರಿ ಹಾಗೂ ನಿತೀಶ್​ ಕುಮಾರ್​ ಜೋಡಿ ಬಿಹಾರದ ಶಿಕ್ಷಣ ವ್ಯವಸ್ಥೆಯನ್ನೇ ಹಾಳುಗೆಡವಿದೆ. ಈ ಶಿಕ್ಷಣ ಮಂತ್ರಿ ಹೋಮ-ಹವನಗಳ ಮೂಲಕ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲಿದ್ದಾನೆ ಎಂದು ಕೌಂಟರ್​ ಕೊಟ್ಟಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದಂತೆ ನೆಟ್ಟಿಗರ ನೆತ್ತಿ ಗರಂ ಆಗಿದೆ. ರಾಜ್ಯದ ಶಿಕ್ಷಣ ಸಚಿವನ ಮನಸ್ಥಿತಿ ಈ ರೀತಿಯಲ್ಲಿದ್ದರೆ, ಆ ರಾಜ್ಯದ ಶಿಕ್ಷಣದ ಮಟ್ಟ ಹೇಗಿರಬಹುದು? ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ.
ಸ್ತ್ರೀ ವಿರೋಧಿ ಸಚಿವನಿಗೆ ಧಿಕ್ಕಾರ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್​ ಮಾಡಿದರೆ, ಕೂಡಲೇ ಇವನನ್ನು ಪಕ್ಷದಿಂದ ವಜಾ ಮಾಡಿ ಎಂದು ಇನ್ನು ಕೆಲವರು ಆಗ್ರಹಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net