ಏ.10ರಿಂದ ನಮ್ಮೇರಿಕ ಅಂತಾರಾಷ್ಟ್ರೀಯ ಕನ್ನಡ ನಾಟಕೋತ್ಸವ

Drama 6x4
Published on

| ಬೆಂಕಿ ಬಸಣ್ಣ ನ್ಯೂಯಾರ್ಕ್

ನ್ಯೂಯಾರ್ಕ್: ಏಪ್ರಿಲ್​ 10ರಿಂದ 24ರ ವರೆಗೆ ಅಮೆರಿಕದಲ್ಲಿ 'ಅಂತಾರಾಷ್ಟ್ರೀಯ ಕನ್ನಡ ನಾಟಕೋತ್ಸವ' ನಡೆಯಲಿದೆ. ನಮ್ಮೇರಿಕ ಸಂಸ್ಥೆ ಇದೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಿರುವ ಈ ನಾಟಕೋತ್ಸವದಲ್ಲಿ ಅಮೆರಿಕ, ಜರ್ಮನಿ, ಇಂಗ್ಲೆಂಡ್, ನೆದರ್ಲ್ಯಾಂಡ್ ಮುಂತಾದ ದೇಶಗಳ ಅನಿವಾಸಿ ಕನ್ನಡ ನಾಟಕ ತಂಡಗಳ ಜತೆಗೆ ಕರ್ನಾಟಕದ ನಾಟಕ ತಂಡಗಳು ಪಾಲ್ಗೊಳ್ಳುವ ಮೂಲಕ ವಿಶ್ವ ಕನ್ನಡಿಗರನ್ನು ಮನರಂಜಿಸಲಿವೆ.

ಅಂತರ್ಜಾಲದ ಮೂಲಕ ನಡೆಯುವ ಈ ನಾಟಕೋತ್ಸವದಲ್ಲಿ ಟಿ.ಪಿ.ಕೈಲಾಸಂ, ಬೀಚಿ, ಚಂಪಾ, ದುಂಡಿರಾಜ್, ಪರ್ವತವಾಣಿ, ಗುಂಡೂರಾವ್, ಅಂತೋನ್ ಚೆಕೋವ್, ಸುರೇಂದ್ರನಾಥ್ ವಿರಚಿತ ನಾಟಕಗಳು ಪ್ರಸಾರವಾಗಲಿವೆ. ಮತ್ತೊಂದು ವಿಶೇಷತೆ ಎಂದರೆ ಈ ನಾಟಕೋತ್ಸವದಲ್ಲಿ ನಾವಿಕ ಸಂಸ್ಥೆಯ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ಅವರ ನಿರ್ದೇಶನದ, ರಂಗಧ್ವನಿ ತಂಡ ಪ್ರಸ್ತುತ ಪಡಿಸುವ "ಸಂಕ್ರಮಣ" ನಾಟಕವೂ ಪ್ರದರ್ಶನಗೊಳ್ಳಲಿದೆ. ಇದನ್ನೂ ಓದಿರಿ ಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

ಅಂತಾರಾಷ್ಟ್ರೀಯ ಕನ್ನಡ ನಾಟಕೋತ್ಸವದ ಮಹಾನ್ ಕನಸು ಕಂಡು ಅದನ್ನು ಸಾಕಾರ ಮಾಡುತ್ತಿರುವುದು ಬೆಂಗಳೂರು ಮೂಲದ, ನ್ಯೂಜೆರ್ಸಿಯಲ್ಲಿ ವಾಸವಾಗಿರುವ ನಾಟಕಕಾರ, ನಿರ್ದೇಶಕ ಹಾಗೂ ಅಮೆರಿಕದ ನಮ್ಮೆರಿಕ ಸಂಸ್ಥೆಯ ಸಂಸ್ಥಾಪಕ ಆನಂದ್ ರಾವ್. ಈ ನಾಟಕೋತ್ಸವದಲ್ಲಿ ತೀರ್ಪುಗಾರರಾಗಿ ಶ್ರೀನಿವಾಸ ಪ್ರಭು, ಸುನೇತ್ರಾ ಪಂಡಿತ್, ಚೈತನ್ಯ ಕೆ.ಎಂ., ಚಂಪಾಶೆಟ್ಟಿ ಮತ್ತು ಡಾಕ್ಟರ್ ವಿದ್ಯಾ ಮಳವಳ್ಳಿ ಪಾಲ್ಗೊಳ್ಳಲಿದ್ದಾರೆ.

ಅಂತಾರಾಷ್ಟ್ರೀಯ ಕನ್ನಡ ನಾಟಕೋತ್ಸವ ಆಯೋಜನಾ ಸಮಿತಿಯಲ್ಲಿ ಆನಂದರಾವ್, ಮಹೇಶ್ ದತ್ತಾನಿ, ರಾಜ್ ಪಾಟೀಲ್, ರತೀ ಅಪನಾ, ಸ್ವಾತಿ ಶೇಖರ್​ಆನಂದ್, ಸೋಮಶೇಖರ್, ಬೆಂಕಿ ಬಸಣ್ಣ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಅಂತರ್ಜಾಲದ ಮೂಲಕ ನಡೆಯುವ ಈ ಅಂತಾರಾಷ್ಟ್ರೀಯ ಕನ್ನಡ ನಾಟಕ ಉತ್ಸವವನ್ನು ವಿಶ್ವದ ಯಾವ ಮೂಲೆಯಲ್ಲಿದ್ದರೂ ವೀಕ್ಷಿಸಬಹುದು. ಹೆಚ್ಚಿನ ವಿವರಗಳಿಗಾಗಿ ಮತ್ತು ಟಿಕೆಟ್​ಗಳಿಗಾಗಿ www.nammerica.com ಗೆ ಭೇಟಿ ಕೊಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net