ಮೆಟ್ರೋ ನಿಲ್ದಾಣಗಳಲ್ಲಿ ಜನವೋ ಜನ! ಮತ ಚಲಾಯಿಸಲು ಊರಿಗೆ ತೆರಳಿದ ಮಂದಿ

Metro
Published on

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಮತಚಲಾಯಿಸಲು ಲಕ್ಷಾಂತರ ಜನರು ರಾಜಧಾನಿಯಿಂದ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಪರಿಣಾಮ ಗುರುವಾರ ಸಂಜೆಯಿಂದ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡುಬಂತು. ಪ್ರತಿ ರೈಲಿನಲ್ಲೂ ಜನ ಭರ್ತಿಯಾಗುತ್ತಿದ್ದರು. ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಗರದ ವಿವಿಧ ಭಾಗಗಳಿಂದ ಮೆಜೆಸ್ಟಿಕ್​ ಬಸ್​ ನಿಲ್ದಾಣ, ಕೆಎಸ್​ಆರ್​ ಹಾಗೂ ಯಶವಂತಪುರ ರೈಲು ನಿಲ್ದಾಣ ತಲುಪಬೇಕಿದ್ದ ಜನರು ಮೆಟ್ರೋ ಅವಲಂಬಿಸಿದ್ದರು. ಹೀಗಾಗಿ ಸಂಜೆ 6 ಗಂಟೆ ಕಳೆಯುತ್ತಿದ್ದಂತೆ ಇಂಟರ್​ಚೇಂಜ್​ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್​) ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಾ ಸಾಗಿತು.

ಜತೆಗೆ ಯಶವಂತಪುರ, ಮಹಾತ್ಮಗಾಂಧಿ ರಸ್ತೆ, ಕಬ್ಬನ್​ಪಾರ್ಕ್​, ಜಯನಗರ, ರಾಜಾಜಿನಗರ, ದೀಪಾಂಜಲಿನಗರ ಸೇರಿ ಪ್ರಮುಖ ನಿಲ್ದಾಣದಲ್ಲಿ ಜನದಟ್ಟಣೆ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net