ಮೆಟ್ರೋ ಟಿಕೆಟ್​ಗೆ ಇನ್ನು ಮುಂದೆ ಸರತಿ ಸಾಲು ಬೇಡ; ವಾಟ್ಸ್​​ಆ್ಯಪ್ ಮೂಲಕ ಖರೀದಿ ಸಾಧ್ಯ

Namma Metro
Published on

ಬೆಂಗಳೂರು: ಇನ್ನು ಮುಂದೆ ಮೆಟ್ರೋ ಪ್ರಯಾಣಿಕರು ಟಿಕೆಟ್ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಹೌದು, ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಪ್ರಯಾಣಿಕರಿಗಾಗಿ ನಮ್ಮ ಮೆಟ್ರೋ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಇದನ್ನು ಎಲ್ಲರೂ ಬಳಕೆ ಮಾಡಿಕೊಳ್ಳಿ ಎಂದು ನಮ್ಮ ಮೆಟ್ರೋ ತಿಳಿಸಿದೆ.

ಸಮಯ ಉಳಿತಾಯ ಹಾಗೂ ಚಿಲ್ಲರೆ ಸಮಸ್ಯೆಯನ್ನು ದೂರ ಮಾಡುವ ಉದ್ಧೇಶದಿಂದ ನಮ್ಮ ಮೆಟ್ರೋ ಕ್ಯೂ ಆರ್​ ಕೋಡ್ ಮೂಲಕ ಒಳ ಬರುವ ಮತ್ತು ಹೊರ ಹೋಗುವ (Entry & Exit) ಅವಕಾಶ ಕಲ್ಪಿಸುತ್ತಿದೆ.

ಇನ್ನು ಮುಂದೆ ಮೆಟ್ರೋ ಪ್ರಯಾಣಿಕರು 'ನಮ್ಮ ಮೆಟ್ರೋ ಆಪ್' ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ನಂತರ ಎಂಟ್ರಿ ಗೇಟ್​ನಲ್ಲಿ ಸ್ಕ್ಯಾನ್ ಮಾಡಿ ಒಳ ಪ್ರವೇಶ ಪಡೆಯಬಹುದಾಗಿದೆ.

ವಾಟ್ಸ್​​ಆ್ಯಪ್​ ಮೂಲಕವೂ ಟಿಕೆಟ್ ಖರೀದಿಸಬಹುದು

BMRCLನ ಅಧಿಕೃತ ವಾಟ್ಸ್​​ಆ್ಯಪ್ ನಂ. 810 555 66 77 ಮೊದಲು 'ಹಾಯ್' ಎಂದು ಮೆಸೇಜ್ ಮಾಡಿ, QR ಟಿಕೆಟ್‌ಗಳನ್ನು ಖರೀದಿಸಬಹುದು. ವಾಟ್ಸ್​​ಆ್ಯಪ್ ಚಾಟ್​​ ಮೂಲಕ ಪಡೆದುಕೊಳ್ಳುವ ಟಿಕೆಟ್​ಗೆ WhatsApp UPI ಹಣ ಪಾವತಿ ಮಾಡಬಹುದು. ಆಂಡ್ರಾಯ್ಡ್ ಮತ್ತು ಐಓಸ್ ಮೊಬೈಲ್ ಬಳಕೆದಾರರಿಗೆ ಚಾಟ್‌ಬಾಟ್ (Chatbot) ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net