VIDEO: ಸ್ಟೇಡಿಯಂ ಮೇಲೆ ತೆರಳಿ ಕ್ರಿಕೆಟ್ ಕಾಮೆಂಟರಿ; ದೃಶ್ಯ ನೋಡಿ 'ವಾವ್' ಎಂದ ಪ್ರೇಕ್ಷಕರು!

ICC
Published on

ಪರ್ತ್​​: ಕ್ರಿಕೆಟ್ ಪಂದ್ಯಾಟ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ. ಇದೀಗ ಪಾಕಿಸ್ತಾನ ಮತ್ತು ನೆದರ್ಲೆಂಡ್ ನಡುವಣ ಕ್ರಿಕೆಟ್ ಪಂದ್ಯಾಟದಲ್ಲೊಂದು 'ವಾವ್' ಎನಿಸುವಂತಹ ಘಟನೆಗೆ ಸಾಕ್ಷಿಯಾಗಿದೆ. ಇದೀಗ ಈ ವಿಡಿಯೋವನ್ನು ಐಸಿಸಿ ತನ್ನ ಇನ್ಸ್​​ಟಾಗ್ರಾ ಖಾತೆಯಲ್ಲಿ ಹಂಚಿಕೊಂಡಿದೆ.

ಕ್ರಿಕೆಟ್​ ಪಂದ್ಯದ ಆರಂಭದಿಂದ ಅಂತ್ಯದ ವರೆಗೂ ಕೇಳಿ ಬರಉವ ವೀಕ್ಷಕ ವಿವರಣೆ ಅತ್ಯಂತ ಕುತೂಹಲಕರವಾಗಿರುತ್ತದೆ. ವಿಭಿನ್ನ ಶೈಲಿಯ ನಿರೂಪಣೆಯಿಂದ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಕಾರಣವಾಗುತ್ತದೆ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಪಂದ್ಯದ ಪಾಕಿಸ್ತಾನ-ನೆದರ್ಲೆಂಡ್ ನಡುವಣ ಪಂದ್ಯದ ವೀಕ್ಷಕ ವಿವರಣೆಯನ್ನು ಮೈದಾನದ ಮೇಲ್ಭಾಗದಿಂದ ನೀಡಲಾಗಿದೆ.

ದಕ್ಷಿಣ ಆಫ್ರಿಕಾದ ನಟಾಲಿ ಜರ್ಮನೋಸ್​ ಸ್ಟೇಡಿಯಂನ ಮೇಲ್ಭಾಗಕ್ಕೆ ತೆರಳಿ ಈ ಸಾಹಸ ಮಾಡಿದ್ದಾರೆ. ಅಷ್ಟೇ ಅಲ್ಲಾ, ಇದಕ್ಕಿಂತ ಉತ್ತಮ ರೀತಿಯಲ್ಲಿ ಪಂದ್ಯವನ್ನು ವೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಐಸಿಸಿ ಅಪ್ಲೋಡ್ ಮಾಡಿರುವ ಈ ವಿಡಿಯೋಗೆ 'ಕಾಮೆಂಟರಿ ಫ್ರಮ್ ದಿ ಕ್ಲೌಡ್ಸ್' ಎಂದು ಶೀರ್ಷಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net