

ಮುಂಬೈ: ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಇದೀಗ ಮತ್ತೊಂದು ವಿಚಾರಕ್ಕೆ ಮುನ್ನೆಲೆ ಬಂದಿದ್ದಾರೆ.
ಹೌದು, ಪ್ರತಿಯೊಬ್ಬರಿಗೂ ತಮ್ಮ ಜೀವನದ ಪ್ರಯಾಣದ ಬಗ್ಗೆ ಹೆಮ್ಮೆ ಪಡುವ ಹಕ್ಕಿದೆ. ಬಾಲಿವುಡ್ ನಟ ಶಾರುಖ್ಖಾನ್(Shah Rukh Khan) ಗಿಂತ ನನ್ನ ಜೀವನದ ಪ್ರಯಾಣ ಕಷ್ಟಕರವಾಗಿತ್ತು ಎಂದು ಕಂಗನಾ ರಣಾವತ್ ವಿಭಿನ್ನವಾಗಿ ಹೇಳಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಂಗನಾ "ಒಂದು ಹಳ್ಳಿಯಿಂದ ಬಂದು ಮುಖ್ಯವಾಹಿನಿಯಲ್ಲಿ ಇಂತಹ ಯಶಸ್ಸನ್ನು ಪಡೆದವರು ಬೇರೆ ಯಾರೂ ಇಲ್ಲ. ನೀವು ಶಾರುಖ್ ಖಾನ್ ಬಗ್ಗೆ ಮಾತನಾಡುತ್ತೀರಿ. ಅವರು ದೆಹಲಿಯಿಂದ ಬಂದವರು, ಕಾನ್ವೆಂಟ್-ಶಿಕ್ಷಿತರು. ನಾನು ಯಾರೂ ನೋಡದ ಹಳ್ಳಿಯಿಂದ ಬಂದವಳು ಎಂದಿದ್ದಾರೆ.
ಬಾಲಿವುಡ್ನಲ್ಲಿ ಸ್ಟಾರ್ ಪಟ್ಟ ಮತ್ತು ಇದೀಗ ರಾಜಕೀಯದತ್ತ ತನ್ನ ಪ್ರಯಾಣವು ಸೂಪರ್‌ಸ್ಟಾರ್ ಶಾರುಖ್ ಖಾನ್‌ಗಿಂತ ಗಮನಾರ್ಹವಾಗಿ ಹೆಚ್ಚು ಕಷ್ಟಕರವಾಗಿದೆ ಎಂದು ಕಂಗನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕಾನ್ವೆಂಟ್-ಶಿಕ್ಷಣವೂ ಅವರ ಅಭಿಪ್ರಾಯದಲ್ಲಿ ಒಂದು ಅಂಶವಾಗಿದೆ.
ಶಾರುಖ್ ಹೆಸರನ್ನು ಹೇಳಿಕೆಯಲ್ಲಿ ಉಲ್ಲೇಖಿಸುವುದೇ ಆಕೆ ಅವನನ್ನು ಕೀಳಾಗಿ ಕಾಣಲು ಮತ್ತು ತನ್ನನ್ನು ತಾನು ದೊಡ್ಡ ವ್ಯಕ್ತಿಯೆಂದು ತೋರಿಸಿಕೊಳ್ಳಲು ಬಯಸಿದ್ದಾಳೆ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಹಾಕಿದ್ದಾರೆ.
ದಯವಿಟ್ಟು ಅದು ಉತ್ತಮ ಕಂಗನಾ ಅವರನ್ನು ಸಮರ್ಥಿಸಿಕೊಳ್ಳದಿರುವುದು ಒಳ್ಳೆಯದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್)