8 ಗಂಟೆ ಶಿಫ್ಟ್ ವಿಚಾರ: ದೀಪಿಕಾಗೆ ಪ್ರಿಯಾಮಣಿ ಟಾಂಗ್​ ಕೊಟ್ರಾ! ಅಷ್ಟಕ್ಕೂ ಸೌತ್​ ಬ್ಯೂಟಿ ಹೇಳಿದ್ದೇನು? | Deepika Padukone

Untitled design - 2025-10-12T102725.424
Published on: 

Deepika Padukone: ಒಂದಲ್ಲೊಂದು ವಿಚಾರದಕ್ಕೆ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಇದೀಗ ಎಂಟು ಗಂಟೆ ಶಿಫ್ಟ್​ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು, ದೀಪಿಕಾ ಪಡುಕೋಣೆ ತಾಯಿಯಾಗಿ ಬಡ್ತಿ ಪಡೆದ ನಂತರ ಅವರು ಕೇವಲ 8 ಗಂಟೆ ಕೆಲಸ ಮಾಡುತ್ತಾರೆ. ಅಲ್ಲದೆ, ಅವರು ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎಂಬ ಪ್ರಚಾರವೂ ಇತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ದೀಪಿಕಾ ಈ ವಿಷಯಕ್ಕೆ ಪ್ರತಿಕ್ರಿಯಿಸಿದರು. ಇದೀಗ ಇದೇ ವಿಚಾರಕ್ಕೆ ಪಂಚಭಾಷ ನಟಿ ಪ್ರಿಯಾಮಣಿ ಪ್ರತಿಕ್ರಿಯಿಸಿದ್ದಾರೆ.

''ಎಲ್ಲರೂ ಹೊಂದಿಕೊಳ್ಳುವುದು ಮತ್ತು ಒಟ್ಟಿಗೆ ಕೆಲಸ ಮಾಡುವುದು ಮುಖ್ಯ. ಇದು ಎಲ್ಲರ ಮೇಲೆ ಅವಲಂಬಿತವಾಗಿರುತ್ತದೆ. ನಾವು ಹೊಂದಿಕೊಳ್ಳಬೇಕಾದ ಸಂದರ್ಭಗಳಿವೆ. ನಾವು ಅದಕ್ಕೆ ಅವಕಾಶ ಮಾಡಿಕೊಡಬೇಕು" ಎಂದು ಪ್ರಿಯಾಮಣಿ ಹೇಳಿದ್ದಾರೆ.

ದೀಪಿಕಾ ಹೇಳಿದ್ದೇನು?

8 ಗಂಟೆ ಶಿಫ್ಟ್​ ವಿಚಾರ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ದೀಪಿಕಾ “ಮಹಿಳೆಯಾಗಿರುವುದೇ ಒತ್ತಡ. ನಟಿಯಾಗಿ ನನಗೆ ಅನಾನುಕೂಲವಾಗಿದ್ದರೆ, ನಾನು ಅದನ್ನು ಸ್ವೀಕರಿಸುವುದಿಲ್ಲ. ಭಾರತೀಯ ಚಲನಚಿತ್ರೋದ್ಯಮದ ಅನೇಕ ಸೂಪರ್‌ಸ್ಟಾರ್‌ಗಳು ಮತ್ತು ನಾಯಕರು ಹಲವು ವರ್ಷಗಳಿಂದ ಕೇವಲ 8 ಗಂಟೆ ಕೆಲಸ ಮಾಡುತ್ತಿದ್ದಾರೆ. ಇದು ರಹಸ್ಯವಲ್ಲ. ಆದರೆ ಅದು ಎಂದಿಗೂ ಸುದ್ದಿಯಲ್ಲಿಲ್ಲ. ನಾನು ಈಗ ಅವರ ಹೆಸರುಗಳನ್ನು ಉಲ್ಲೇಖಿಸಿ ಇದನ್ನು ಬದಲಾಯಿಸಲು ಬಯಸುವುದಿಲ್ಲ. ಆದರೆ ಅನೇಕ ನಾಯಕರು ದಿನಕ್ಕೆ ಕೇವಲ 8 ಗಂಟೆ ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅವರು ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಕೇವಲ ಎಂಟು ಗಂಟೆ ಕೆಲಸ ಮಾಡುತ್ತಾರೆ. ಅವರು ವಾರಾಂತ್ಯದಲ್ಲಿ ಕೆಲಸ ಮಾಡುವುದಿಲ್ಲ.” ಎಂದಿದ್ದಾರೆ.(ಏಜೆನ್ಸೀಸ್)