ಹಿರಿಯ ನಟ ಉಮೇಶ್‌ಗೆ ಲಿವರ್ ಕ್ಯಾನ್ಸರ್ | Actor Umesh

Untitled design - 2025-10-12T095140.946
Published on

ಬೆಂಗಳೂರು: ಸ್ನಾನದ ಕೋಣೆಯಲ್ಲಿ ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಎಂ.ಎಸ್.ಉಮೇಶ್( Actor Umesh) ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಲಿವರ್‌ನಲ್ಲಿ ಕ್ಯಾನ್ಸ‌ರ್ ಇರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಲಿವರ್‌ನಲ್ಲಿ ಗಡ್ಡೆ ಪತ್ತೆಯಾಗಿದ್ದು, ದೇಹದ ಬೇರೆ ಅಂಗಗಳು ಹಾಗೂ ಮೂಳೆಗಳಿಗೂ ಕ್ಯಾನ್ಸರ್ ಹಬ್ಬಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮೊದಲು ಕಾಯಿಲೆಗೆ ಚಿಕಿತ್ಸೆ ನೀಡುತ್ತೇವೆ. ಸುಧಾರಿಸಿದ ಬಳಿಕ ಶಸ್ತ್ರಚಿಕಿತ್ಸೆ ಮಾಡುತ್ತೇವೆ.

ಸದ್ಯ ಲಿವರ್ ಕ್ಯಾನ್ಸರ್ 4ನೇ ಹಂತದಲ್ಲಿದೆ. 15 ದಿನಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಬೇಕಿದೆ. ಈ ಕಾಯಿಲೆಯಿಂದ ಅವರು ಸಂಪೂರ್ಣ ಗುಣಮುಖರಾಗುತ್ತಾರೆ ಎಂಬ ಭರವಸೆಯಿದೆ ಎಂದು ವೈದ್ಯ ಡಾ. ಶಿವರಾಜೇಗೌಡ ತಿಳಿಸಿದ್ದಾರೆ. ಮುದ್ದಿನಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net