

ಮುಂಬೈ: ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ (26) ರಿಲಯನ್ಸ್ನ ಎರಡು ಸೋಲಾರ್ ಕಂಪನಿಗಳ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅನಂತ್ ರಿಲಯನ್ಸ್ ಒ2ಸಿ ನಿರ್ದೇಶರಾಗಿ ನೇಮಕವಾಗಿದ್ದರು. ಕಳೆದ ವರ್ಷ ಅವರನ್ನು ಜಿಯೋ ಪ್ಲಾಟ್ಫಾಮ್್ಸರ್ ಆಡಳಿತ ಮಂಡಳಿಗೆ ಸೇರಿಸಲಾಗಿತ್ತು. ಮುಕೇಶ್ ಅವರ ಇನ್ನಿಬ್ಬರು ಅವಳಿ ಮಕ್ಕಳಾದ ಇಶಾ ಮತ್ತು ಆಕಾಶ್ (29) ಕೂಡ ಜಿಯೋ ಪ್ಲಾಟ್ಫಾಮ್್ಸರ್ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಇಶಾ ಮತ್ತು ಆಕಾಶ್ ರಿಲಯನ್ಸ್ನ ರಿಟೇಲ್ ವೆಂಚರ್ಸ್ನ ಆಡಳಿತ ಮಂಡಳಿಯ ನಿರ್ದೇಶಕರೂ ಆಗಿದ್ದಾರೆ.
ಅನಂತ್ ನಿರ್ದೇಶಕರಾಗಿರುವ ಒ2ಸಿಯಲ್ಲಿ ಸೌದಿ ತೈಲ ಕಂಪನಿ ಅರಾಮ್ಕೊ ದೊಡ್ಡ ಹೂಡಿಕೆ ಮಾಡಲಿದೆ. ಮುಕೇಶ್ ಅವರ ಮೂರೂ ಮಕ್ಕಳು ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಮಹತ್ವದ ಹುದ್ದೆಯಲ್ಲಿದ್ದಾರೆ. ಉತ್ತರಾಧಿಕಾರಿಯಾರು ಎಂಬುದನ್ನು ಮುಕೇಶ್ ಇನ್ನೂ ಹೇಳಿಲ್ಲ. ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ (2002ರಲ್ಲಿ ನಿಧನ) ಉಯಿಲು ಬರೆದಿರಲಿಲ್ಲ. ಅವರ ಮಕ್ಕಳಾದ ಮುಕೇಶ್ ಮತ್ತು ಅನಿಲ್ ನಡುವೆ ಉತ್ತರಾಧಿಕಾರಿಗಾಗಿ ಕಚ್ಚಾಟವಾಗಿತ್ತು. ನಂತರ ಸಂಸ್ಥೆ ಇಬ್ಭಾಗವಾಯಿತು. ಮುಕೇಶ್ಗೆ ರಿಲಯನ್ಸ್ ತೈಲೋದ್ಯಮ ಸಂಸ್ಥೆಗಳು ಮತ್ತು ಅನಿಲ್ಗೆ ವಿದ್ಯುತ್, ಹಣಕಾಸು, ದೂರಸಂಪರ್ಕ ಸಂಸ್ಥೆಗಳು ದೊರಕಿದವು.