More

    ‘ಕಪಿಲ್​ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?

    ಕಲಬುರಗಿ: ಸಾರ್ವಜನಿಕರು ಯಾರಾದರೂ ಕೋವಿಡ್ ನಿಯಮ ಪಾಲಿಸಲಿಲ್ಲ ಎಂದರೆ ಪೊಲೀಸರು ಅಡ್ಡಗಟ್ಟಿ ತಡೆದು ಖಡಕ್​ ಆಗಿ ಗದರುವ ಜತೆಗೆ ದಂಡವನ್ನೂ ವಸೂಲಿ ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಪೊಲೀಸರ ಸಮ್ಮುಖದಲ್ಲೇ ದಂಡಿಯಾಗಿ ಕೋವಿಡ್​ ನಿಯಮ ಉಲ್ಲಂಘನೆಯಾಗಿದ್ದು, ಇದಕ್ಕೆಲ್ಲ ಪೊಲೀಸ್ ಇನ್​ಸ್ಪೆಕ್ಟರ್ ಒಬ್ಬರ ವರ್ಗಾವಣೆ ಖುಷಿಯೇ ಕಾರಣವಾಗಿದೆ.

    ಕಲಬುರಗಿಯ ಬ್ರಹ್ಮಪುರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಇನ್​ಸ್ಪೆಕ್ಟರ್ ಕಪಿಲ್​ದೇವ್​ ಎಂಬವರು ಬೀದರ್​ನ ನ್ಯೂಟೌನ್​ ಠಾಣೆಗೆ ವರ್ಗಾವಣೆಗೊಂಡಿದ್ದು, ಅವರನ್ನು ಬೀಳ್ಕೊಡುವಾಗ ‘ಬೌಂಡರಿ’ ಮೀರಿ ಸಂಭ್ರಮಿಸಿರುವ ಅಭಿಮಾನಿಗಳು-ಸಹೋದ್ಯೋಗಿಗಳು ದೈಹಿಕ ಅಂತರ ಕಾಪಾಡುವುದು, ಮಾಸ್ಕ್​ ಧರಿಸುವುದು ಮುಂತಾದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

    ಇದನ್ನೂ ಓದಿ: ಒಬ್ಬನ ಹುಟ್ಟುಹಬ್ಬ, ಮತ್ತೊಬ್ಬನಿಗೆ ಸಾವು, ಇನ್ನೊಬ್ಬನಿಗೆ ಗಾಯ: ಅಷ್ಟಕ್ಕೂ ದೇಹ ಛಿದ್ರವಾಗಿದ್ದೇಕೆ?

    ವರ್ಗಾವಣೆ ನೆಪದಲ್ಲಿ ಕಲಬುರಗಿಯ ಯಾತ್ರಿ ನಿವಾಸದಲ್ಲಿ ಕಪಿಲ್​ದೇವ್​ಗೆ ಭರ್ಜರಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಲಬುರಗಿಯ ವಿವಿಧ ಸಂಘಟನೆಗಳ ಅಭಿಮಾನಿಗಳು ಇನ್​ಸ್ಪೆಕ್ಟರ್ ಮೇಲೆ ಹೂಗಳ ಸುರಿಮಳೆಗರೆದಿದ್ದಲ್ಲದೆ, ಅವರನ್ನು ಹೊತ್ತುಕೊಂಡು ಗುಂಪಾಗಿ ಕುಣಿದಿದ್ದಾರೆ. ಅವರ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಲಾರಂಭಿಸಿದೆ. ಕರೊನಾ ನಿಯಮ ಪಾಲಿಸಬೇಕಾದ ಹಾಗೂ ಪಾಲಿಸುವಂತೆ ನೋಡಿಕೊಳ್ಳಬೇಕಾದ ಪೊಲೀಸರ ಸಮ್ಮುಖದಲ್ಲೇ ಹೀಗೆ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ ಆಗಿರುವ ಕುರಿತು ಈಗ ಸಾರ್ವಜನಿಕರಿಂದ ತೀವ್ರ ಅಸಮಾಧಾನ ಕೇಳಿಬರುತ್ತಿದೆ.

    ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

    ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…

    ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts