More

    ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…

    ನವದೆಹಲಿ: ಕರೊನಾ ಲಸಿಕೆ ಬೃಹತ್ ಅಭಿಯಾನ ಈಗಾಗಲೇ ಆರಂಭಗೊಂಡಿದ್ದು, ಲಸಿಕೀಕರಣ ದೊಡ್ಡ ಪ್ರಮಾಣದಲ್ಲೇ ನಡೆಯುತ್ತಿದೆ. ಈ ಮಧ್ಯೆ ಲಸಿಕೆ ಕುರಿತ ಗೊಂದಲಗಳು, ಪ್ರಶ್ನೆಗಳು ಆಗಾಗ ಕೇಳಿ ಬರುತ್ತಲೇ ಇವೆ. ಅಂಥವುಗಳಲ್ಲಿ ‘ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?’ ಎಂಬುದು ಕೂಡ ಒಂದು. ಇದೀಗ ಆ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ಪ್ರಕಟಿಸಿದೆ.

    ಗರ್ಭಿಣಿಯರು ಕರೊನಾ ಸೋಂಕಿಗೆ ಒಳಗಾದರೆ ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಂಥವರು ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡುವ ಅಥವಾ ಅಂಥವರಿಗೆ ಜನಿಸಿದ ಶಿಶು ಮರಣಕ್ಕೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಅಲ್ಲದೆ ಸೋಂಕಿತ ಗರ್ಭಿಣಿಯರು ಅಧಿಕ ರಕ್ತದೊತ್ತಡ, ಸ್ಥೂಲಕಾಯ ಹೊಂದಿದ್ದು, 35 ವರ್ಷ ಮೇಲ್ಪಟ್ಟಿದ್ದರೆ ಅಂಥವರೂ ಹೆಚ್ಚಿನ ತೊಂದರೆಗೆ ಒಳಗಾಗುವ ಸಂಭವ ಅಧಿಕ ಎಂದು ಅಧ್ಯಯನ ತಿಳಿಸಿದೆ ಎಂಬುದಾಗಿ ಕೇಂದ್ರ ಸರ್ಕಾರ ಹೇಳಿದೆ. ಮಾತ್ರವಲ್ಲ, ಈ ಹಿನ್ನೆಲೆಯಲ್ಲಿ ಸೋಂಕಿತ ಗರ್ಭಿಣಿಯರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಕುರಿತು ಆರೋಗ್ಯ ಕ್ಷೇತ್ರದ ಮುಂಚೂಣಿ ಕೆಲಸಗಾರರಿಗೆ, ಲಸಿಕೆ ನೀಡುವವರಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆಗಳನ್ನೂ ನೀಡಿದೆ.

    ಇದನ್ನೂ ಓದಿ: ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್​ ಇಮ್ಯುನೈಸೇಷನ್ (ಎನ್​ಟಿಎಜಿ) ಶಿಫಾರಸಿನ ಮೇರೆಗೆ ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದು ಕೇಂದ್ರ ಸರ್ಕಾರ ತಿಳಿಸಿದೆ. ಸದ್ಯ ದೇಶದಲ್ಲಿರುವ ಕೋವಿಶೀಲ್ಡ್​, ಕೊವ್ಯಾಕ್ಸಿನ್​, ಸ್ಪುಟ್ನಿಕ್ ವಿ ಹಾಗೂ ಮಾಡರ್ನಾ ಲಸಿಕೆಗಳಲ್ಲಿ ಯಾವುದನ್ನೂ ಬೇಕಾದರೂ ಗರ್ಭಿಣಿಯರು ತೆಗೆದುಕೊಳ್ಳಬಹುದು ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್​ ತಿಳಿಸಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಸದ್ಯದಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.

    ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

    ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

    ವಾರದೊಳಗೇ ಅರ್ಧಕ್ಕರ್ಧ ಕಡಿಮೆ ಆಯ್ತು ರಾಜ್ಯದಲ್ಲಿನ ಕರೊನಾ ಸಕ್ರಿಯ ಪ್ರಕರಣ

    ಕನ್ನಡಿಗರ ಕ್ಷಮೆ ಕೋರಿದ್ರು ನಿರ್ಮಲಾ ಸೀತಾರಾಮನ್!; ಎಲ್ಲದಕ್ಕೂ ನಾನೊಬ್ಳೇ ಹೊಣೆ ಅಲ್ಲ ಎಂದಿದ್ದೇಕೆ?

    ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗಿದು ಸಂತೋಷದ ಸುದ್ದಿ; ಕೇಂದ್ರ ಸರ್ಕಾರದ ಮಾರ್ಗಸೂಚಿ ಪರಿಷ್ಕರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts