17 ದಿನದ ಮಗುವಿನ ಬೆಲೆ ಎರಡೂವರೆ ಲಕ್ಷ ರೂ.: ಮಾರಾಟಕ್ಕೆ ಯತ್ನಿಸಿದ ತಾಯಿ, ಗ್ಯಾಂಗ್​ ಬಂಧನ

child 1
ಸಾಂದರ್ಭಿಕ ಚಿತ್ರ
Published on

ಮುಂಬೈ: ಮಹಿಳೆಯೊಬ್ಬರು ಮಧ್ಯವರ್ತಿಗಳ ನೆರವಿನಿಂದ 17 ದಿನದ ಮಗುವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನ ಖಾರ್ಘರ್‌ನಲ್ಲಿ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಮುಮ್ತಾಜ್ ಮಂಡಲ್ (28), ಮಧ್ಯವರ್ತಿ ಮುಮ್ತಾಜ್ ಖಾನ್(48), ನದೀಮ್ ಅನ್ಸಾರಿ(29), ಗುಲಾಮ್ ಅನ್ಸಾರಿ(37), ಸುರೇಶ್ ಕಾಂಬ್ಳೆ(60), ಜುಬೇದಾ ರಫೀಕ್(49), ಶಮೀರಾ ಶೇಖ್(42) ಮತ್ತು ದಿಲ್ಶಾದ್ ಆಲಂ(42) ಎಂಬುವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪತ್ನಿಗೆ ವಿಡಿಯೋ ಕಾಲ್​ ಮಾಡಿ ಪ್ರಾಣಬಿಟ್ಟ ಪತಿ..!

ಮಕ್ಕಳನ್ನು ಅಪಹರಿಸಿ ಮಾರಾಟ ಮಾಡುತ್ತಿದೆ ಎಂದು ಅನೈತಿಕ ಮಾನವ ಕಳ್ಳಸಾಗಣೆ ಘಟಕಕ್ಕೆ ಮಾಹಿತಿ ಲಭಿಸಿದ್ದು, ತಕ್ಷಣವೇ ಅಧಿಕಾರಿಗಳು ಮಗುವನ್ನು ಮಾರಾಟ ಮಾಡಲು ಬಂದ ತಾಯಿ ಮತ್ತು ಮಗುವನ್ನು ಮಾರಾಟ ಮಾಡಲು ಮಧ್ಯವರ್ತಿಗಳಾಗಿದ್ದ ಎಂಟು ಜನರನ್ನು ಬಂಧಿಸಿದೆ.

ಕಳೆದ ಒಂದು ತಿಂಗಳಿನಿಂದ ಮಹಿಳೆಯ ಮೂಲಕ ವಾಟ್ಸಾಪ್ ಮೂಲಕ ಈ ಗ್ಯಾಂಗ್‌ ಸಂಪರ್ಕ ಹೊಂದಿತ್ತು. ಗ್ಯಾಂಗ್ ನವಜಾತ ಶಿಶುವನ್ನು 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಸಿದ್ಧವಾಗಿದ್ದು, ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮುಮ್ತಾಜ್ ಮತ್ತು ರಿಕ್ಷಾ ಚಾಲಕ ನದೀಮ್ ಮತ್ತು ಮಗುವಿನ ತಾಯಿ ಮುಮ್ತಾಜ್ 17 ದಿನದ ಮಗುವಿನೊಂದಿಗೆ ರಿಕ್ಷಾದಲ್ಲಿ ಖಾರ್ಘರ್‌ಗೆ ಬಂದಿದ್ದರು. ಈ ವೇಳೆ ಪೊಲೀಸರು ಮೂವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಈ ಮಗುವಿನ ಮಾರಾಟದಲ್ಲಿ ಇತರ ಐವರು ಭಾಗಿಯಾಗಿದ್ದು, ನಂತರ, ಇತರ ಐವರನ್ನು ಮುಂಬ್ರಾದಿಂದ ಬಂಧಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net