

ಬುಲ್ಧಾನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೊಲೀಸ್ ಪತ್ನಿ ಹಾಗೂ ಎರಡು ವರ್ಷದ ಮಗಳನ್ನು ಪತಿಯೇ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಂಚಲನ ಮೂಡಿಸಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ಬಳಿಯ ಚಿಖ್ಲಿಯಲ್ಲಿ ನಡೆದಿದೆ.
ವರ್ಷಾ ಕುಟೆ (37) ಪತಿ ಕಿಶೋರ್ ಮತ್ತು ಕೃಷ್ಣ(2) ಮೃತ ದುರ್ದೈವಿಗಳಾಗಿದ್ದು, ಈ ದಂಪತಿಯ ಹಿರಿಯ ಮಗಳು ಶಾಲೆಗೆ ಹೋಗಿದ್ದರಿಂದ ಬದುಕುಳಿದಿದ್ದಾಳೆ. ವರ್ಷಾ ಚಿಖ್ಲಿ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಪುತ್ರಿಯರೊಂದಿಗೆ ನಗರದ ಪಂಚಮುಖಿ ಮಹಾದೇವ ದೇವಸ್ಥಾನದ ಬಳಿ ವಾಸಿಸುತ್ತಿದ್ದರು.
ಸೋಮವಾರ ಅಂಧೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಲ್‌ಗಾಂವ್ ರಸ್ತೆಯ ಕವ್ತಾಲ್ ಶಿವರಾ ಎಂಬಲ್ಲಿನ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಾವಿಯ ಬಳಿ ದ್ವಿಚಕ್ರ ವಾಹನವೂ ಪತ್ತೆಯಾಗಿತ್ತು. ಬೈಕ್‌ನ ನಂಬರ್ ಪ್ಲೇಟ್‌ನಿಂದ ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಯತ್ನಿಸಿದಾಗ ಅದು ಪೊಲೀಸ್ ಮಹಿಳಾ ಕಾನ್ಸ್ಟೇಬಲ್ ವರ್ಷಾ ಅವರದ್ದು ಎಂದು ತಿಳಿದುಬಂದಿದೆ.
ಕೂಡಲೇ ಪೊಲೀಸರು ವರ್ಷಾಳ ಸಹೋದರ ಸಂತೋಷ್ರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದು ಆತ ಮೃತದೇಹವನ್ನು ಗುರುತನ್ನು ನೀಡಿ ಈ ಮಾಹಿತಿಯನ್ನು ತನ್ನ ಸಹೋದರಿಗೆ ನೀಡಲು ಹೊರಟಿದ್ದ. ಮನೆಯ ಬಾಗಿಲು ತೆರೆದ ಕೂಡಲೇ ವರ್ಷಾ ಮತ್ತು ಆಕೆಯ ಮಗು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಪೋಲಿಸರಿಗೆ ವಿಷಯ ತಿಳಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ವರ್ಷಾ ಪೊಲೀಸ್ ಉದ್ಯೋಗಿಯಾಗಿದ್ದ ಕಾರಣ ಆರ್ಥಿಕ ಸ್ಥಿರತೆ ಇತ್ತು. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಆಕೆ ಕೆಲ ದಿನಗಳ ಹಿಂದೆ ಮನೆ ಕಟ್ಟಲು ಆರಂಭಿಸಿದ್ದರು. ಪ್ರತಿ ದಿನ ಕೆಲಸ ಮುಗಿಸಿ ಮರಳಿದ ನಂತರ ಮನೆ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇನ್ನು ಈ ಘಟನೆ ಬಗ್ಗೆ ಸ್ಥಳೀಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಿಶೋರ್ ಮತ್ತು ವರ್ಷಾ ನಡುವೆ ಉತ್ತಮ ಬಾಂಧವ್ಯ ಇತ್ತು. ಹೀಗಿರುವಾಗ ಈ ಕೊಲೆಗಳ ಹಿಂದೆ ಮೂರನೇ ವ್ಯಕ್ತಿಯ ಕೈವಾಡವೂ ಇರಬಹುದು. ಘಟನೆಯ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಬೇಕು ಎಂದು ಸುತ್ತಮುತ್ತಲಿನ ಜನರು ಹೇಳುತ್ತಿದ್ದಾರೆ. ಹೀಗಾದರೆ ಮಾತ್ರ ಸತ್ಯ ಹೊರಬರಲಿದೆ. ಆದರೆ, ಕೆಲವರು ಪತಿ-ಪತ್ನಿಯರ ನಡುವಿನ ಮನಸ್ತಾಪದ ಬಗ್ಗೆಯೂ ಮಾತನಾಡಿದ್ದಾರೆ.(ಏಜೆನ್ಸೀಸ್)