ಸೀಮಾ ಹೈದರ್‌ನಂತೆಯೇ ಮಗು ಹಿಡಿದುಕೊಂಡು ಭಾರತಕ್ಕೆ ಬಂದ ನೆರೆರಾಷ್ಟ್ರದ ಯುವತಿ..

bangladesh woman
Published on

ನೋಯ್ಡಾ: ಪಾಕಿಸ್ತಾನದಿಂದ ತನ್ನ ಪ್ರೇಮಿ ಸಚಿನ್​ಗೊಸ್ಕರ್​​ ನಾಲ್ಕು ಮಕ್ಕಳೊಂದಿಗೆ ಬಂದ ಸೀಮಾ ಹೈದರ್ ಚರ್ಚೆಯ ನಡುವೆಯೇ ಮತ್ತೊಂದು ಅಂತರರಾಷ್ಟ್ರೀಯ ಪ್ರೇಮಕಥೆ ಬೆಳಕಿಗೆ ಬಂದಿದೆ. ನೆರೆಯ ರಾಷ್ಟ್ರದ ಯುವತಿಯೊಬ್ಬಳು​ ತನ್ನ ಮಡಿಲಲ್ಲಿ ಪುಟ್ಟ ಮುಗ್ಧ ಮಗುವನ್ನು ಇಟ್ಟುಕೊಂಡು ನೋಯ್ಡಾಕ್ಕೆ ಬಂದಿಳಿದ್ದಾಳೆ.

ಬಾಂಗ್ಲಾದೇಶದ ಢಾಕಾ ನಿವಾಸಿ ಸೋನಿಯಾ ಅಖ್ತರ್​ ಎಂಬಾಕೆಯೇ ಭಾರತಕ್ಕೆ ಬಂದಿದ್ದು, ಸೀಮಾಳಂತೆ ಅಕ್ರಮವಾಗಿ ಗಡಿ ದಾಟದೆ ವೀಸಾ, ಪಾಸ್ ಪೋರ್ಟ್ ಪಡೆದು ಬಂದಿದಿದ್ದಾಳೆ. ನೋಯ್ಡಾದ ಸೌರಭಕಾಂತ್ ತಿವಾರಿ ಎಂಬಾತ ತನ್ನನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮೋಸ ಮಾಡಿದ್ದಾನೆ ಎಂದು ಹೇಳಿದ್ದಾಳೆ.

ಯುವತಿಯನ್ನು ಆತ 2021ರ ಏಪ್ರಿಲ್ 14ರಂದು ಬಾಂಗ್ಲಾದೇಶದಲ್ಲಿ ವಿವಾಹವಾಗಿದ್ದು, ಇಬ್ಬರೂ ಢಾಕಾದಲ್ಲಿರುವ ಕಲ್ಪಿ ಮ್ಯಾಕ್ಸ್ ಎನರ್ಜಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ಜನವರಿ 2017 ರಿಂದ ಡಿಸೆಂಬರ್ 2021 ರವರೆಗೆ ಜತೆಯಾಗಿ ಕೆಲಸಮಾಡುತ್ತಿದ್ದರು. ವಿವಾಹಿತನಾಗಿದ್ದರೂ ಆತ ಆಕೆಗೆ ವಿಷಯ ತಿಳಿಸಿದೇ ತನ್ನ ಪ್ರೇಮಜಾಲದಲ್ಲಿ ಸಿಲುಕಿಸಿ ಮದುವೆಯಾಗಿದ್ದು, ಮಗುವಾದ ನಂತರ ಆತ ಮೋಸ ಮಾಡಿ ಓಡಿ ಹೋಗಿದ್ದಾನೆ ಎಂದು ಹೇಳಲಾಗಿದೆ.
ಸದ್ಯ ಯುವತಿಯ ಆತನನ್ನು ಅರಸಿಕೊಂಡು ಭಾರತಕ್ಕೆ ಬಂದಿದ್ದು, ಆಕೆಯ ಮತ್ತು ಮಗುವಿನ ಪಾಸ್‌ಪೋರ್ಟ್‌ಗಳು, ವೀಸಾಗಳು ಮತ್ತು ಸಿವಿಲ್ ಕಾರ್ಡ್‌ಗಳನ್ನು ಪೊಲೀಸರಿಗೆ ಒದಗಿಸಿದ್ದು, ಮತ್ತೊಂದೆಡೆ ಸೌರಭ್ ನಾಪತ್ತೆಯಾಗಿದ್ದಾನೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.

ಯುವತಿಯ ಮಡಿಲಲ್ಲಿ ಮುಗ್ಧ ಮಗುವಿದ್ದು ಆಕೆ ಪೊಲೀಸ್ ರಕ್ಷಣೆಯಲ್ಲಿದ್ದು, ತಾನು ಬಾಂಗ್ಲಾದೇಶಿ ಪ್ರಜೆಯಾಗಿದ್ದು, ಸೌರಬ್‌ ಜತೆಗೆ ಮೂರು ವರ್ಷವಿದ್ದೆ. ತಾನು ಸೌರಭ್ ಜೊತೆ ಮಾತ್ರ ಇರಲು ಬಯಸುತ್ತೇನೆ ಎಂದು ಸೋನಿಯಾ ಹೇಳಿದ್ದು, ಇದಕ್ಕಾಗಿ ಆಕೆ ಪೊಲೀಸರು ಮತ್ತು ಸರ್ಕಾರದ ಸಹಾಯವನ್ನು ಕೋರಿದ್ದಾಳೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net