ಪ್ರತಿದಿನ ಅಕ್ಕಿ ಗಂಜಿ ಕುಡಿದರೆ ಇಷ್ಟೆಲ್ಲಾ ಲಾಭಗಳಿವೆ ಗೊತ್ತಾ..?

rice water
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಅನೇಕ ಜನರು ಅನ್ನವನ್ನು ಬೇಯಿಸಿದ ನಂತರ ಗಂಜಿಯನ್ನು ಬಿಸಾಕುತ್ತಾರೆ. ಹಿಂದಿನ ಕಾಲದಲ್ಲಿ ಈ ಗಂಜಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಸೇರಿಸಿ ಗಂಜಿ ಕುಡಿಯುತ್ತಿದ್ದರು. ಅದಕ್ಕಾಗಿಯೇ ಆ ಕಾಲದ ಜನ ಬಲಶಾಲಿ ಮತ್ತು ಆರೋಗ್ಯವಂತರಾಗಿದ್ದರು. ಕಾಲಾನಂತರದಲ್ಲಿ ಗಂಜಿ ನಿಷ್ಪ್ರಯೋಜಕವೆಂದು ತಿಳಿದುಕೊಂಡು ಇದನ್ನು ಹಾಳುಮಾಡಲಾಗುತ್ತಿದೆ. ಗಂಜಿ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದ್ದು, ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಗಂಜಿ ಪಿಷ್ಟವನ್ನು ಹೊಂದಿರುವುದರಿಂದ ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಅತಿಸಾರ, ಹೊಟ್ಟೆನೋವಿನಂತಹ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದರೆ ಒಂದು ಲೋಟ ತೆಳ್ಳಗಿನ ಗಂಜಿ ಕುಡಿದರೆ ಪರಿಹಾರ ಸಿಗುತ್ತದೆ. ಇದರಲ್ಲಿನ ಪಿಷ್ಟವು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದರೆ ಜತೆಗೆ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.

ಗಂಜಿಯಲ್ಲಿರುವ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಿ ನಿಮ್ಮ ದೇಹವನ್ನು ಪುನರ್ಜಲೀಕರಣಗೊಳಿಸುತ್ತವೆ. ದೇಹದಲ್ಲಿ ಕಳೆದುಹೋದ ದ್ರವಗಳು ಮತ್ತು ಖನಿಜಗಳನ್ನು ಪುನಃಸ್ಥಾಪಿಸಲು ಗಂಜಿ ಸಹಾಯ ಮಾಡುವುದಲ್ಲದೇ ಇದು ನಿರ್ಜಲೀಕರಣ ಮತ್ತು ಆಯಾಸವನ್ನು ತಡೆಯುತ್ತದೆ.

ಇದನ್ನೂ ಓದಿ: ಮೇಕೆ ಹತ್ಯೆಯ ವಿಚಿತ್ರ ಪ್ರಕರಣ: ಆರೋಪಿಯ ಉತ್ತರ ಕೇಳಿ ಪೊಲೀಸರೂ ಅಚ್ಚರಿ..

ಗಂಜಿಯಲ್ಲಿ ವಿಟಮಿನ್ ಬಿ, ಕಬ್ಬಿಣ, ಸತು ಮತ್ತು ಮೆಗ್ನೀಸಿಯಮ್‌ನಂತಹ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದು, ಪ್ರತಿನಿತ್ಯ ಗಂಜಿ ಸೇವಿಸಿದರೆ ಸೋಂಕು, ರೋಗಗಳಿಂದ ರಕ್ಷಣೆ ಪಡೆಯಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ಗಂಜಿ ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಗಂಜಿ ಕಡಿಮೆ ಕ್ಯಾಲೋರಿ ಹೊಂದಿದೆ. ಒಂದು ಲೋಟ ಗಂಜಿ ಕುಡಿದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದರಲ್ಲಿರುವ ಫೈಬರ್ ಅಂಶವೇ ಇದಕ್ಕೆ ಕಾರಣ. ಈ ನಾರಿನಂಶದಿಂದಾಗಿ ಹೊಟ್ಟೆ ತುಂಬಿದಂತಾಗುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ದೋಷರಹಿತ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಲು ಗಂಜಿಯನ್ನು ಅನೇಕ ದೇಶಗಳಲ್ಲಿ ಸೌಂದರ್ಯ ಆರೈಕೆಯಲ್ಲಿ ಬಳಸಲಾಗುತ್ತದೆ. ನೀವು ಗಂಜಿಯನ್ನು ಟೋನರ್​ ಆಗಿ ಬಳಸಬಹುದಾಗಿದ್ದು, ಇದನ್ನು ಹತ್ತಿ ಉಂಡೆಯಿಂದ ನಿಮ್ಮ ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಬಹುದು. ಸನ್ ಬರ್ನ್ ನಂತಹ ಕಿರಿಕಿರಿಯುಂಟುಮಾಡುವ ಚರ್ಮದ ಸ್ಥಿತಿಯನ್ನು ನಿವಾರಿಸಲು ಗಂಜಿ ಸಹಾಯ ಮಾಡುತ್ತದೆ. ಈ ವಿಷಯವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್​)

harassed-by-young-man-in-hyderabad

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net