7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!

Doctor
Published on

ಆಂಧ್ರಪ್ರದೇಶ: ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ಆದರೆ ಇಲ್ಲೊಬ್ಬಾಕೆಯ ಪತಿ, ತಂದೆ ಹಾಗೂ ಆಕೆ ಕೂಡ ಡಾಕ್ಟರ್ ಆಗಿದ್ದರೂ ಅವಳು ಮಾಡಿದ್ದು ಜೀವ ತೆಗೆಯೋ ಕೆಲಸ. ಅದರಲ್ಲೂ ಅವಳು ತನ್ನ ಏಳು ವರ್ಷದ ಮಗನಿಗೇ ನಿದ್ರೆ ಮಾತ್ರೆ ತಿನ್ನಿಸಿ ಜೀವ ಹೋಗುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಆಕೆ ಯಾಕೆ ಹಾಗೆ ಮಾಡಿದಳು ಎಂದು ಕೇಳಲು ಅವಳೇ ಇಲ್ಲ!

ಹೌದು.. ಮಗನಿಗೆ ನಿದ್ರೆ ಮಾತ್ರ ತಿನ್ನಿಸಿದ್ದಷ್ಟೇ ಅಲ್ಲದೆ ತಾನೂ ಅದನ್ನು ಸೇವಿಸಿದ್ದು, ಕೊನೆಗೆ ಇಬ್ಬರೂ ಜೀವ ಕಳೆದುಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿನ ದೊಂತಮ್​ಶೆಟ್ಟಿ ಲಾವಣ್ಯ ಎಂಬ 33 ವರ್ಷದ ಮಹಿಳೆಯೇ ಆ ವೈದ್ಯೆ. ಲಾವಣ್ಯ ಹಾಗೂ ಆಕೆಯ ಪುತ್ರ ನಿಶಾಂತ್ ಅತಿಯಾದ ನಿದ್ರೆ ಮಾತ್ರೆ ಸೇವನೆಯಿಂದ ಕೋಮಾಗೆ ತೆರಳಿದ್ದು, ಬಳಿಕ ಅವರನ್ನು ಹತ್ತಿರದ ರಾಜಮುಂಡ್ರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಇಬ್ಬರನ್ನೂ ಉಳಿಸಿಕೊಳ್ಳಲು ಆಗಿಲ್ಲ.

ರಾಜಮುಂಡ್ರಿಯ ವೈದ್ಯರೊಬ್ಬರ ಪುತ್ರಿಯಾಗಿರುವ ಲಾವಣ್ಯ, ತೆಲಂಗಾಣದ ವೈದ್ಯರೊಬ್ಬರೊಂದಿಗೆ ಮದುವೆಯಾಗಿದ್ದಳು. ಬಳಿಕ ಪತಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ತಂದೆಯ ಮನೆಗೆ ಬಂದು ನೆಲೆಸಿದ್ದಳು. ಆದರೆ ಈ ಮಧ್ಯೆ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನೋಟಿಸ್ ಕಳಿಸಿದ್ದರು. ಇದರಿಂದ ಬೇಸತ್ತು ಆಕೆ ಇಂಥದ್ದೊಂದು ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net