ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ...

Hoax
Published on

ಬೆಂಗಳೂರು: ಕರೊನಾ ಹಾವಳಿಗೆ ಒಂದು ರೀತಿಯಲ್ಲಿ ಜಗತ್ತೇ ಕಂಗಾಲಾಗಿದ್ದರೆ ಇಲ್ಲೊಂದಷ್ಟು ಮಂದಿ ಅದಕ್ಕೇ ಕೇರೇ ಎನ್ನುತ್ತಿಲ್ಲ. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಇವರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಷ್ಟೇ ಅಲ್ಲ, ಆಸ್ಪತ್ರೆಯ ಮುಂದೆಯೇ ಪ್ರತಿಭಟನೆ ನಡೆಸಿ, ವೈದ್ಯರೇ ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ.

ಎಲ್ಲರೂ ಕರೊನಾದಿಂದ ಬಚಾವಾಗುವುದು ಹೇಗೆ?, ಕರೊನಾಗೆ ಲಸಿಕೆ ಯಾವಾಗ ಪೂರ್ಣಪ್ರಮಾಣದಲ್ಲಿ ಸಿಗುತ್ತದೆ ಎಂಬ ಚಿಂತೆಯಲ್ಲಿದ್ದರೆ ಇವರೊಂದಿಷ್ಟು ಜನ ಬೇರೆಯವರು ಮತ್ತಷ್ಟು ಚಿಂತೆಗೊಳಗಾಗುವಂತೆ ಮಾಡಿದ್ದಾರೆ. ಇಂಥದ್ದೊಂದು ಘಟನೆ ಬಗ್ಗೆ ವೈದ್ಯರೊಬ್ಬರು ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಲಂಡನ್​ನ ಸೇಂಟ್​ ಥಾಮಸ್​ ಆಸ್ಪತ್ರೆ ಮುಂದೆ ಈ ಘಟನೆ ಜರುಗಿದೆ. ಪಾನಮತ್ತರಾಗಿ ಮಾಸ್ಕ್​ ಧರಿಸದೆ ಆಸ್ಪತ್ರೆ ಸುತ್ತ ಜಮಾಯಿಸಿದ್ದ ಈ ಜನರು, ಅಲ್ಲಿ ದೈಹಿಕ ಅಂತರ ಕಾಪಾಡದೆ ಪ್ರತಿಭಟಿಸಿದ್ದಲ್ಲದೆ, ಕರೊನಾ ಎಂಬುದೇ ಸುಳ್ಳು, ವಂಚನೆ ಎಂದು ಆರೋಪಿಸಿ ಕೂಗಾಡಿದ್ದಾರೆ. ಈ ಬಗ್ಗೆ ಆ ಆಸ್ಪತ್ರೆಯ ವೈದ್ಯರು ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಕಂಡಿದ್ದು ಇದು. ಒಳಗೆ ನೂರಾರು ಮಂದಿ ಅನಾರೋಗ್ಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದರೆ ಇವರು ಹೊರಗೆ ಹೀಗೆ ಆಡುತ್ತಿದ್ದಾರೆ. ಯಾಕೆ ಜನರು ಇನ್ನೂ ಈ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಡಾ. ಮ್ಯಾಥ್ಯೂ ಲೀ ಎಂಬವರು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್​ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 47 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net