More

    ವಾಹನದ ಮೇಲೆ ಕರೊನಾ ಬೋರ್ಡ್; ಮಾಡುತ್ತಿದ್ದುದು ಮತ್ತೇರಿಸೋ ಕೆಲಸ!

    ದೆಹಲಿ: ಕರೊನಾ ಹೆಸರಲ್ಲಿ ಯಾರ್ಯಾರೋ ಹೇಗ್ಹೇಗೋ ಹಣ ಮಾಡಿಕೊಂಡಿದ್ದಿದೆ. ಅಂಥದ್ದೇ ಒಂದು ಕೆಲಸವನ್ನು ಈ ಕಿಡಿಗೇಡಿಗಳಿಬ್ಬರು ಮಾಡಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ವಾಹನದ ಮೇಲೆ ‘ಕೋವಿಡ್​ ಸರ್ವಿಸ್​’ ಸ್ಟಿಕ್ಕರ್​ ಅಂಟಿಸಿಕೊಂಡು ಮತ್ತೇರಿಸೋ ಕೆಲಸ ಮಾಡುತ್ತಿದ್ದ ಇವರು ಇದೀಗ ಕಂಬಿ ಎಣಿಸುವಂತಾಗಿದೆ.

    ಹೀಗೆ ಮಾಡಬಾರದ್ದನ್ನು ಮಾಡಲು ಹೋಗಿದ್ದಕ್ಕೆ ಇವರಿಗೆ ಹೊಸ ವರ್ಷದಂದು ಸಂತೋಷ ಉಂಟಾಗುವ ಬದಲು ಬೇಸರ ಆಗುವಂತಾಗಿದೆ. ಏಕೆಂದರೆ ಹೊಸ ವರ್ಷದ ಸಂದರ್ಭವನ್ನೇ ಎನ್​ಕ್ಯಾಷ್​ ಮಾಡಿಕೊಂಡು ಕೈತುಂಬ ಕ್ಯಾಷ್​ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಇವರ ಲೆಕ್ಕಾಚಾರ ತಲೆಕೆಳಗಾಗಿದ್ದು, ಅಂದೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಂದನ್ ಷಾ ಮತ್ತು ಕೃಷ್ಣನ್ ಡಿಯೊ ಎಂಬವರು ಬಂಧಿತರು. ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.

    ಇದನ್ನೂ ಓದಿ: ಯಡಿಯೂರಪ್ಪ ಅವರೇ ಸುಪ್ರೀಂ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಬಿಜೆಪಿ ಸಭೆ ಬಳಿಕ ಘೋಷಣೆ

    ಕೋವಿಡ್​-19 ತುರ್ತು ಸೇವೆ ವಾಹನ ಎಂಬಂತೆ ಸ್ಟಿಕ್ಕರ್ ಹಾಕಿಕೊಂಡಿದ್ದ ಇವರಿಬ್ಬರು, ಆ ವಾಹನದ ಮೂಲಕ ಡ್ರಗ್ಸ್​ ಸರಬರಾಜು ಮಾಡುತ್ತಿದ್ದರು. ಒಡಿಶಾದಿಂದ ದೆಹಲಿಗೆ ಬರುತ್ತಿದ್ದ ಟೆಂಪೊವನ್ನು ದೆಹಲಿ ಪೊಲೀಸರು ತಡೆದು ಪರಿಶೀಲಿಸಿದಾಗ ಡ್ರಗ್ಸ್​ ಪತ್ತೆಯಾಗಿದೆ. ಬಂಧಿತರಿಂದ 950 ಕೆಜಿ ಮಾರಿಜುವಾನ ವಶ ಪಡಿಸಿಕೊಳ್ಳಲಾಗಿದೆ. ಬಂಧಿತರ ವಿಚಾರಣೆ ನಡೆಸುತ್ತಿರುವ ಪೊಲೀಸರು ಆ ಮೂಲಕ ಡ್ರಗ್ಸ್​ ಪೂರೈಸುತ್ತಿರುವವರ ಪತ್ತೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್​)

    ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

    ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!

    ಲವ್​ ಜಿಹಾದ್​ ಎಂದು ಕೇಸ್ ಹಾಕಿದ್ಲು- ಆಮೇಲೆ ನೋಡಿದ್ರೆ ಎಲ್ಲಾ ಮೊದಲೇ ಮುಗಿಸಿದ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts