

ನವದೆಹಲಿ: ಗೂಗಲ್ ಸಂಸ್ಥೆ ಭಾರತ ಮತ್ತು ಜಾಗತಿಕವಾಗಿ ಅತಿ ಹೆಚ್ಚು ಶೋಧವಾದ ವಿಚಾರಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಅದರಂತೆ ಟ್ವಿಟ್ಟರ್ ಕೂಡ ಅತಿ ಹೆಚ್ಚು ಲೈಕ್ಸ್ ಪಡೆದ ಹಾಗೂ ರಿಟ್ವೀಟ್ ಆದ ಟ್ವೀಟ್ಗಳು ಯಾವುದೆಂದು ಬಹಿರಂಗಪಡಿಸಿತ್ತು. ಇದೀಗ ಯೂಟ್ಯೂಬ್ ಕೂಡ 2020ರಲ್ಲಿ ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ವಿಡಿಯೋಗಳು ಯಾವುದು ಎಂದು ಪಟ್ಟಿ ರಚಿಸಿದೆ.
2020ರಲ್ಲಿ ವೀಕ್ಷಣೆಯಾದ ಮ್ಯೂಸಿಕ್ ವಿಡಿಯೋಗಳಲ್ಲಿ ಸೋನಿ ಮ್ಯೂಸಿಕ್‌ನ ಬಾದ್ಶಾ- ಗೆಂಡಾ ಫೂಲ್ ವಿಡಿಯೋ ಮೊದಲ ಸ್ಥಾನದಲ್ಲಿದೆ. ಇದರ ನಂತರ ಡಿಐಎಲ್ ಮ್ಯೂಸಿಕ್‌ನ ಮೋಟೋ (ಅಧಿಕೃತ ವಿಡಿಯೋ), ಆದಿತ್ಯ ಮ್ಯೂಸಿಕ್‌ನ ಬುಟ್ಟಬೊಮ್ಮ ಪೂರ್ಣ ವಿಡಿಯೋ ಸಾಂಗ್ (4 ಕೆ), ಸೋನಿ ಮ್ಯೂಸಿಕ್ ಇಂಡಿಯಾದ ಸುಮಿತ್ ಗೋಸ್ವಾಮಿ - ಫೀಲಿಂಗ್ಸ್ ಮತ್ತು ಟಿ-ಸರಣಿಯ ಇಲ್ಲೀಗಲ್ ವೆಪನ್ 2.0 - ಸ್ಟ್ರೀಟ್ ಡ್ಯಾನ್ಸರ್ 3D ವಿಡಿಯೋಗಳು ಪಟ್ಟಿಯಲ್ಲಿವೆ.
ಅತಿ ಹೆಚ್ಚು ವೀಕ್ಷಣೆಗೊಂಡ ವಿಡಿಯೋಗಳಲ್ಲಿ ಕ್ಯಾರಿಮಿನಾಟಿಯ ಸ್ಟಾಪ್ ಮೇಕಿಂಗ್ ಅಸೆಂಪ್ಷನ್ ವಿಡಿಯೋ ಮೊದಲ ಸ್ಥಾನದಲ್ಲಿದೆ. ನಂತರ ಜೆಕೆ ಎಂಟರ್ಟೈನ್ಮೆಂಟ್ನ ಚೋಟು ದಾದಾ ಟ್ರ್ಯಾಕ್ಟರ್ ವಾಲಾ, ಜೋಕ್ ಆಫ್ ದಿ ಲಾಕ್‌ಡೌನ್ ಕಾಣಿಸಿಕೊಂಡಿದೆ. ಕ್ಯಾರಿಮಿನಾಟಿ, ಟೋಟಲ್ ಗೇಮಿಂಗ್, ಟೆಕ್ನೋ ಗೇಮರ್ಜ್, ಜೆಕೆ ಎಂಟರ್‌ಟೈನ್‌ಮೆಂಟ್ ಮತ್ತು ಆಶಿಶ್ ಚಾಂಚ್ಲಾನಿರನ್ನು ವರ್ಷದ ಅತ್ಯುತ್ತಮ ಕ್ರಿಯೇಟರ್ಗಳು ಎಂದು ಯೂಟ್ಯೂಬ್ ಹೇಳಿದೆ. (ಏಜೆನ್ಸೀಸ್)