ಶಾಸಕರ ಭಾವಚಿತ್ರಕ್ಕೆ ಸೆಗಣಿ ಬಳಿದು ಚಪ್ಪಲಿ ಹೊಡೆತ; ಹೊಡೆದವರು ತಲೆ ಕೆಟ್ಟವರು, ದೂರು ನೀಡಲ್ಲ ಎಂದ ಮಹೇಶ್​

MLA S Mahesh
Published on

ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಭಾವಚಿತ್ರಕ್ಕೆ ಸೆಗಣಿ ಬಳಿದು ಚಪ್ಪಲಿಯಿಂದ ಹೊಡೆದ ಪ್ರಕರಣ ನಡೆದಿದ್ದು, ಈ ದುಷ್ಕೃತ್ಯ ಎಸಗಿದವರನ್ನು ತಲೆ ಕೆಟ್ಟವರು ಎಂದಿರುವ ಶಾಸಕ, ಅಂಥವರ ವಿರುದ್ಧ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ಯಳಂದೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಈ ವಿಷಯ ತಿಳಿಸಿದರು.

ಶೇ. 40 ಭ್ರಷ್ಟಾಚಾರ ಎಂದು ಕಾಂಗ್ರೆಸ್​​ನವರು ಮಾಡುತ್ತಿರುವುದು ಆಧಾರರಹಿತ ಆರೋಪ. ಅವರು ಲೋಕಾಯುಕ್ತ, ನ್ಯಾಯಾಲಯಕ್ಕೆ ದೂರು ನೀಡಿದ್ದಾರಾ? ತಲೆ ಕೆಟ್ಟಿರುವವರು ಈ ರೀತಿ ಮಾಡುತ್ತಾರೆ. ತಲೆ ಸರಿ ಇರುವವರು ಇದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಈ ಬಗ್ಗೆ ನಾನು ದೂರು ನೀಡಲ್ಲ. ತಲೆ ಕೆಟ್ಟಿರುವವರ ಮೇಲೆ ದೂರು ನೀಡಲಾಗುವುದಿಲ್ಲ. ಈ ರೀತಿ ಮಾಡಿರುವವರೇ ತಾಕತ್ ಇದ್ರೆ ದೂರು ನೀಡಲಿ ಎಂದು ಮಹೇಶ್ ಸವಾಲೆಸೆದಿದ್ದಾರೆ.

ಶಾಸಕ ಎನ್.ಮಹೇಶ್ 40% ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರು ನೀಡಲಿ. ಆದರೆ ಬೀದಿಬದಿಯಲ್ಲಿ ಈ ರೀತಿ ಬರೆದು ನನ್ನನ್ನು ಹೆದರಿಸುವುದು ಸಾಧ್ಯವಿಲ್ಲ, ಅದನ್ನು ಬರೆದಿರುವವರು ವಿಕೃತ ಮನಸ್ಸಿನವರು. ಹದ್ದು ಮೀರಿದರೆ ಕಾನೂನು ಪ್ರಕಾರ ಕೆಲಸ ಮಾಡಬೇಕಾಗುತ್ತದೆ‌ ಎಂದಿರುವ ಮಹೇಶ್, ಈ ಪ್ರಕರಣದಿಂದ ನನ್ನ ವರ್ಚಸ್ಸಿಗೆ ಯಾವುದೇ ಹಾನಿಯಾಗಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net