

ಆಸ್ಟ್ರೇಲಿಯಾ: ಮಿಸ್ ಯೂನಿವರ್ಸ್ ಸ್ಪರ್ಧೆಯ ಫೈನಲಿಸ್ಟ್, ರೂಪದರ್ಶಿಯೊಬ್ಬರು ದಾರುಣವಾಗಿ ಅಂತ್ಯ ಕಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 23 ವರ್ಷದ ಸಿಯೆನ್ನಾ ವೈರ್ ಸಾವನಪ್ಪಿದ ಮಾಡೆಲ್ ಆಗಿದ್ದು, ಕುದುರೆ ಸವಾರಿ ವೇಳೆ ಈ ದುರ್ಘಟನೆ ನಡೆದಿದೆ.
ಅಲ್ಲಿನ ಪತ್ರಿಕೆಯೊಂದರ ಪ್ರಕಾರ ಸಿಯೆನ್ನಾ ವೈರ್ ಅವರು ಆಸ್ಟ್ರೇಲಿಯಾದ ವೈಂಡ್ಸೊರ್ ಪೋಲೋ ಗ್ರೌಂಡ್ನಲ್ಲಿ ಏಪ್ರಿಲ್ 2ರಂದು ಕುದುರೆ ಸವಾರಿ ವೇಳೆ ಬಿದ್ದು ಗಾಯಗೊಂಡಿದ್ದರು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದ ಆಕೆ ಚಿಕಿತ್ಸೆ ಸಫಲವಾಗದೇ ಕೊನೆಯುಸಿರೆಳೆದಿದ್ದಾಳೆ ಎಂದು ಕುಟುಂಬ ಸದಸ್ಯರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ನಾಳೆ NEET UG 2023 ಪರೀಕ್ಷೆ : ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ
ಅಲ್ಲದೇ, ಆಕೆಯ ಮಾಡೆಲಿಂಗ್ ಏಜೆನ್ಸಿಯಾಗಿರುವ ಸ್ಕೂಪ್ ಮ್ಯಾನೇಜ್ಮೆಂಟ್ ಕೂಡ ಆಕೆಯ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, "ನಮ್ಮ ಹೃದಯದಲ್ಲಿ ಎಂದೆಂದಿಗೂ ಶಾಶ್ವತ" ಎಂದು ಅಡಿಬರಹ ನೀಡಿದ್ದಾರೆ.
2022ರ ಮಿಸ್ ಯೂನಿವರ್ಸ್ ಸ್ಪರ್ಧೆಯ ಫೈನಲಿಸ್ಟ್ ಆಗಿದ್ದ ಸಿಯೆನ್ನಾ ಸಿಡ್ನಿ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಹಾಗೂ ಮನೋವಿಜ್ಞಾನದ ವಿಷಯಗಳಲ್ಲಿ ಪದವಿಯನ್ನು ಪಡೆದಿದ್ದರು. ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ಮಾಡೆಲ್ ಸಿಯೆನ್ನಾ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ.(ಏಜೆನ್ಸೀಸ್)