More

    ನಾಳೆ NEET UG 2023 ಪರೀಕ್ಷೆ : ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ

    ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪದವಿ ಪೂರ್ವ ಪರೀಕ್ಷೆಯ (NEET UG) ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ ನಾಳೆ ನಡೆಯಲಿದೆ. ಭಾರತದ ಏಕೈಕ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಗೆ ಸುಮಾರು 20 ಲಕ್ಷಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. ಈ ಪರೀಕ್ಷೆಯು 13 ಭಾಷೆಗಳಲ್ಲಿ ನಡೆಯಲಿದ್ದು, ಎಂಬಿಬಿಎಸ್​ ಸೇರಿದಂತೆ 10 ಕೋರ್ಸ್‌ಗಳಿಗೆ ಪ್ರವೇಶ ದೊರೆಯುತ್ತದೆ. ಲಿಖಿತ ರೂಪದಲ್ಲಿ ಈ ಪರೀಕ್ಷೆ ದೇಶದ 499 ಸ್ಥಳಗಳಲ್ಲಿ ನಡೆಯಲಿದೆ.


    ದಿನಾಂಕ ಮತ್ತು ಅವಧಿ:
    ಮೇ 7ರಂದು ಮಧ್ಯಾಹ್ನ 2ರಿಂದ ಸಂಜೆ 5.20ರವೆರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು 3 ಗಂಟೆ 20 ನಿಮಿಷಗಳ ಕಾಲಾವಧಿಯನ್ನು ಹೊಂದಿದೆ.

    ಅಡ್ಮಿಟ್​ ಕಾರ್ಡ್​:
    neet.nta.nic.in ಈ ಲಿಂಕ್ ಅನ್ನು ಬಳಸಿಕೊಂಡು ಪರೀಕ್ಷಾರ್ಥಿಗಳು ಅಪ್ಲಿಕೇಶನ್​ ನಂಬರ್​ ಹಾಗೂ ಜನ್ಮ ದಿನಾಂಕ ನಮೂದಿಸಿ ಅಡ್ಮಿಟ್​ ಕಾರ್ಡ್​ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

    ಇದನ್ನೂ ಓದಿ: ಭಾರತದ ಕೀರ್ತಿ ಪತಾಕೆ ಬಾನೆತ್ತರಕ್ಕೆ ಹಾರಿಸಿದ ನೀರಜ್​ ಚೋಪ್ರಾ

    ಪರೀಕ್ಷಾ ಮಾದರಿ:
    ಈ ಪರೀಕ್ಷೆಯು NCERTಯ 11 ಮತ್ತು 12ನೇ ತರಗತಿಯ ಜೀವಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳನ್ನು ಆಧರಿಸಿದೆ. ಬಹುಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಯು ಒಟ್ಟು 45 ಪ್ರಶ್ನೆಗಳನ್ನು ಹೊಂದಿದೆ. ಅಂದರೆ A ವಿಭಾಗದಲ್ಲಿ 35 ಪ್ರಶ್ನೆ ಹಾಗೂ B ವಿಭಾಗದಲ್ಲಿ 10 ಪ್ರಶ್ನೆಗಳನ್ನು ಹೊಂದಿದೆ. ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ಕಡಿತ, ಉತ್ತರ ನೀಡದೆ ಇರುವ ಪ್ರಶ್ನೆಗೆ ಶೂನ್ಯ ಅಂಕ ನಿಗದಿ ಪಡಿಸಲಾಗಿದೆ.

    • ಪರೀಕ್ಷಾರ್ಥಿಗಳಿಗೆ ಪ್ರಮುಖ ಸೂಚನೆಗಳು:
    • ಪರೀಕ್ಷಾರ್ಥಿಗಳು ಅಡ್ಮಿಟ್​ ಕಾರ್ಡ್​ ಜತೆಗೆ ಸರ್ಕಾರ ದೃಢಿಕರಿಸಿರುವ ವೈಯುಕ್ತಿಕ ದಾಖಲಾತಿ ಪತ್ರ(ID proof)ವನ್ನು ಪರೀಕ್ಷಾ ಕೇಂದ್ರಕ್ಕೆ ಒಯ್ಯಬೇಕು.
    • ಹಾಜರಾತಿ ಹಾಳೆಗೆ ಅಂಟಿಸಲು ಒಂದು ಪಾಸ್​ ಪೋರ್ಟ್​ ಸೈಜಿನ ಪೋಟೋವನ್ನು ಒಯ್ಯತಕ್ಕದ್ದು.
    • ಅಡ್ಮಿಟ್​ ಕಾರ್ಡ್​ ತರಲು ವಿಫಲರಾದ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೋಣೆಗೆ ಪ್ರವೇಶವಿಲ್ಲ.
    • ಪರೀಕ್ಷಾರ್ಥಿಗಳು ಪರೀಕ್ಷೆಗೆ ನಿಗದಿಪಡಿಸಿದ ಸಮಯಕ್ಕಿಂತ ಮುಂಚೆ, ಅಡ್ಮಿಟ್​ ಕಾರ್ಡ್​ ಜತೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರತಕ್ಕದ್ದು.
    • ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ನಿಗದಿತ ಡ್ರೆಸ್ ಕೋಡ್ ಪಾಲಿಸಬೇಕಾಗಿದ್ದು, ಉದ್ದ ತೋಳಿನ ಅಂಗಿ, ಬೂಟು, ಆಭರಣ ಅಥವಾ ಲೋಹದ ವಸ್ತುಗಳನ್ನು ನಿಷೇಧಿಸಲಾಗಿದೆ. ಸ್ಯಾಂಡಲ್ಸ್​ ಹಾಗೂ ಕಡಿಮೆ ಹೀಲ್ಸ್​ ಚಪ್ಪಲಿಗೆ ಅನುಮತಿಸಲಾಗಿದೆ.
    • ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಪಠ್ಯ ಸಾಮಗ್ರಿಗಳು, ಕಾಗದದ ಚೂರು, ತ್ರಿಜ್ಯ/ಪೆನ್ಸಿಲ್ ಬಾಕ್ಸ್‌, ಪ್ಲಾಸ್ಟಿಕ್ ಪೌಚ್‌, ಕ್ಯಾಲ್ಕುಲೇಟರ್‌, ಮಾಪಕಗಳು, ರೈಟಿಂಗ್ ಪ್ಯಾಡ್‌, ಪೆನ್ ಡ್ರೈವ್‌, ಎರೇಸರ್‌, ಲಾಗ್ ಟೇಬಲ್‌, ಎಲೆಕ್ಟ್ರಾನಿಕ್ ಪೆನ್‌ ಇತ್ಯಾದಿಗಳನ್ನು ತರುವಂತಿಲ್ಲ.

    ನಾಳೆ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಬೆಂಗಳೂರಿನಲ್ಲಿ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಮನೆ ಬಿಡುವ ಮುಂಚೆಯೇ ಟ್ರಾಫಿಕ್ ಅಡೆತಡೆ ಇಲ್ಲದ ರಸ್ತೆಗಳನ್ನು ಆಯ್ದುಕೊಂಡರೆ ಪರೀಕ್ಷಾ ಕೇಂದ್ರಗಳಿಗೆ ಬೇಗ ತೆರಳಬಹುದಾಗಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts