More

    ಭಾರತದ ಕೀರ್ತಿ ಪತಾಕೆ ಬಾನೆತ್ತರಕ್ಕೆ ಹಾರಿಸಿದ ನೀರಜ್​ ಚೋಪ್ರಾ

    ಕತಾರ್​: ಭಾರತದ ಭರವಸೆಯ ಜಾವೆಲಿನ್​​ ಥ್ರೋ ಆಟಗಾರ ನೀರಜ್​ ಚೋಪ್ರಾ ಮತ್ತೊಮ್ಮೆ ಚಿನ್ನವನ್ನು ಗೆಲ್ಲುವ ಮೂಲಕ ಡೈಮಂಡ್​ ಲೀಗ್​ನಲ್ಲಿ ಸಾಧನೆಗೈದಿದ್ದಾರೆ. ದೋಹಾದಲ್ಲಿ ನಡೆದ​ ಲೀಗ್​ನಲ್ಲಿ ಜಾವೆಲಿನ್​ ಅನ್ನು 88.67 ಮೀಟರ್ ದೂರ ಎಸೆಯುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

    ತಮ್ಮ ಮೊದಲನೇ ಎಸೆತದಲ್ಲೆ ಅತ್ಯುತ್ತಮವಾಗಿ ಜಾವೆಲಿನ್​ ಅನ್ನು 88.67 ಮೀಟರ್​ ದೂರ ಎಸೆಯುವ ಮೂಲಕ ನೀರಜ್​ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಇನ್ನು, ನೀರಜ್​ಗೆ ಉತ್ತಮ ಪ್ರತಿಸ್ಪರ್ಧೆ ನೀಡಿದ ಜೇಕಬ್​​ ವಾಡ್ಲೆಜ್​ 88.63 ಮೀಟರ್​ ಜಾವೆಲಿನ್​ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, 85.88m ದೂರ ಎಸೆದ ಆಂಡರ್​ಸನ್​ ಪೀಟರ್ಸ್​ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

    ಇದನ್ನೂ ಓದಿ: ಕೇರಳದ ಮೊದಲ ತೃತೀಯ ಲಿಂಗಿ ಬಾಡಿಬಿಲ್ಡರ್ ಇನ್ನಿಲ್ಲ; ಪತ್ನಿ ಮೇಲೆ ಕೊಲೆ ಆರೋಪ…

    ಈ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್​ನಲ್ಲಿ ಕೂಡ ನೀರಜ್​ಗೆ ಟಕ್ಕರ್​ ನೀಡಿದ್ದ ಜೇಕಬ್​​ ವಾಡ್ಲೆಜ್ ಅಲ್ಲಿಯೂ ಬೆಳ್ಳಿಯನ್ನು ಗೆದ್ದಿದ್ದರು. ಇನ್ನೂ, ವಿಶ್ವ ಚಾಂಪಿಯನ್​ಶಿಪ್​ನಲ್ಲಿ ನೀರಜ್​ರನ್ನು ಸೊಲಿಸಿ, ಆಂಡರ್​ಸನ್​ ಪೀಟರ್ಸ್ ಸೊಲಿಸಿ ಬಂಗಾರದ ಪದಕವನ್ನು ಗೆದ್ದಿದ್ದರು ಎಂಬುದು ಗಮನಾರ್ಹ.

    ಪಂದ್ಯ ಮುಗಿದ ಬಳಿಕ ಮಾತನಾಡಿದ ನೀರಜ್​, “ಈ ಪಂದ್ಯ ಅತ್ಯಂತ ರೋಚಕವಾಗಿತ್ತು. ಗೆಲುವು ದೊರೆತಿದ್ದು ನನಗೆ ಖುಷಿ ನೀಡಿದೆ. ಈ ಗೆಲುವಿನಿಂದ ನನ್ನ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ” ಎಂದರು.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts