ಸಿನಿಮಾ

ಜನರ ಹಣ ಖರ್ಚು ಮಾಡದೇ ಪ್ರಚಾರ ಮಾಡುವುದು ಹೇಗೆ? ಐಡಿಯಾ ಕೊಡಿ ಎಂದ ನಟ ಉಪೇಂದ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿರುವ ಹಿನ್ನೆಲೆ ನಟ ಉಪೇಂದ್ರ, 110 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ‘ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ’ ಎಂಬ ಘೋಷಣೆಯನ್ನು ಉಪೇಂದ್ರ ಈಗಾಗಲೇ ಮೊಳಗಿಸಿದ್ದಾರೆ.

ಉಪೇಂದ್ರ ಪ್ರಜಾಕೀಯ ಪಕ್ಷದ ಬಗ್ಗೆ ಮಾತನಾಡುತ್ತಾ, ಜನರ ಬೇಡಿಕೆ ಏನೆಂಬುದು ನಮಗೆ ಗೊತ್ತಿದೆ. ಪಾರದರ್ಶಕ ವರದಿ ಕೊಡುತ್ತೇವೆ. ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ. ಪ್ರಜಾಕೀಯ ಕೇವಲ ಮತ ಹಾಕಿ ಎಂದು ಹೇಳುತ್ತಿಲ್ಲ. ನಮ್ಮ ಜೊತೆ ನಿರಂತರವಾಗಿ ಜತೆಯಾಗಬೇಕು ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ವಿಜಯಪುರ | ಹಾಡಹಗಲೇ ಗುಂಡಿನ ದಾಳಿ; ಸ್ಥಳದಲ್ಲಿಯೇ ಪ್ರಾಣಬಿಟ್ಟ ರೌಡಿಶೀಟರ್

ಐಡಿಯಾ ಕೊಡಿ

ಸದ್ಯ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಯಿಂದ ಇದ್ದಾರೆ. ಪ್ರತಿನಿತ್ಯ ರಾಜಕೀಯ ಸಂಬಂಧಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಉಪೇಂದ್ರ ಟ್ವಿಟರ್​ನಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ದಯಮಾಡಿ, ಐಡಿಯಾ ಕೊಡಿ ಪ್ರಜೆಗಳೇ, ಜನಗಳೇ, ಮತದಾರರೇ. ನಿಮ್ಮ ಹಣ ಖರ್ಚು ಮಾಡದೇ ಪ್ರಚಾರ ಮಾಡುವುದು ಹೇಗೆ? ಎಂದು ಉಪೇಂದ್ರ ಕೇಳಿದ್ದಾರೆ.

ಸದ್ಯ ಉಪೇಂದ್ರ ಕೇಳಿರುವ ಪ್ರಶ್ನೆಗೆ ಅನೇಕರು ಉತ್ತರಿಸುತ್ತಿದ್ದಾರೆ. ಮಂಡ್ಯ ಮೂಲದ ಎಚ್.ಸಿ.ಮರಿಸಿದ್ದಪ್ಪ ಎಂಬುವರು ಉತ್ತರಿಸಿ, ಪ್ರಚಾರಕ್ಕೆ ಕರ್ಚು ಮಾಡುವ ಕೋಟಿ ಕೋಟಿ ನಮ್ಮ ಹಣ. ನಮ್ಮ ಮತ್ತು ನಮ್ಮ ಮಕ್ಕಳ ಅಭಿವೃದ್ಧಿಗೆ, ಅನುಕೂಲಕ್ಕೆ ಕರ್ಚು ಮಾಡಬೇಕೆಂದರೆ “ನನ್ನ ಮತ ಪ್ರಚಾರಕ್ಕಲ್ಲ, ವಿಚಾರಕ್ಕೆ” ಎಂಬ ಕೂಗು ನನ್ನಿಂದ ಬರಬೇಕು, ಬರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ, ಪ್ರತಾಪ್ ಸಿಂಹ ವ್ಯಂಗ್ಯ; ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು…

ರಾಜಕೀಯ ಬೆಂಬಲಿಗರು ಮಾತ್ರ ಉತ್ತರ ಕೊಡಿ…

ರಾಜಕೀಯ ಪಕ್ಷಗಳ ಹಿಂಬಾಲಕರಿಗೆ ಉಪೇಂದ್ರ ಟ್ವಿಟರ್ ಮೂಲಕ ಓಪನ್ ಚಾಲೆಂಜ್ ನೀಡಿದ್ದು, ಎಲ್ಲಾ ರಾಜಕೀಯ ಪಕ್ಷಗಳೂ ಮತ್ತು ದೊಡ್ಡ ದೊಡ್ಡ ನಾಯಕರು ಅತಿ ಮುಖ್ಯವಾದ ನಮ್ಮ ತೆರಿಗೆ ಹಣ. ಅದನ್ನು ಪಾರದರ್ಶಕವಾಗಿ ಬಳಸುವ ವಿಧಾನ ಮತ್ತು ಭ್ರಷ್ಟಾಚಾರದ ತಡೆಗೆ ತಂತ್ರಜ್ಞಾನ ಬಳಕೆ ಇವರು ಮಾಡುವ ಸಾಲ ಇವುಗಳ ಬಗ್ಗೆ ಏಕೆ ಮಾತಾಡುತ್ತಿಲ್ಲ? ರಾಜಕೀಯ ಬೆಂಬಲಿಗರು ಮಾತ್ರ ಉತ್ತರ ಕೊಡಿ ಎಂದು ಬರೆದುಕೊಂಡಿದ್ದಾರೆ.

Latest Posts

ಲೈಫ್‌ಸ್ಟೈಲ್