

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನೆಲ್ಲೇ ಭುಗಿಲೆದ್ದ ಖಾತೆ ಕ್ಯಾತೆಗೆ ಇಂದು ತಾರ್ಕಿಕ ಅಂತ್ಯ ಹಾಡಲಾಗಿದೆ. ಖಾತೆ ಬದಲಾವಣೆಯ ಆಟ ಮುಂದುವರಿದಂತೆ, ಅಸಂತುಷ್ಟ ಸಚಿವರು ವಾರದಿಂದ ಸಿಎಂನಿಂದ ಅಂತರ ಕಾಯ್ದುಕೊಂಡಿದ್ದರು. ಮತ್ತೊಮ್ಮೆ ಭಿನ್ನಮತ ಆಸ್ಫೋಟಗೊಂಡರೂ ಅಚ್ಚರಿ ಇಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಿದ್ದನ್ನು ಅರಿತ ಸಿಎಂ ಯಡಿಯೂರಪ್ಪ, ಇಂದು(ಸೋಮವಾರ) ಮತ್ತೆ ಕೆಲವರ ಖಾತೆ ಬದಲಾವಣೆ ಮಾಡಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ತನ್ನ ಕೈಯಿಂದ ಜೆ.ಸಿ. ಮಾಧುಸ್ವಾಮಿಗೆ ಹೋಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆಯುವಲ್ಲಿ ಡಾ.ಕೆ.ಸುದಾಕರ್ ಯಶಸ್ವಿಯಾಗಿದ್ದಾರೆ. ಆ ಮೂಲಕ ಸುಧಾಕರ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ವೈದ್ಯಕೀಯ ಶಿಕ್ಷಣ ಖಾತೆಯೂ ಸಿಕ್ಕಂತಾಗಿದೆ. ಇನ್ನು ಖಾತೆ ಅದಲು-ಬದಲು ಆಗುವ ಬಗ್ಗೆ ಸೋಮವಾರ ಬೆಳಗ್ಗೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗರಂ ಆಗಿದ್ದ ಸಚಿವ ಮಾಧುಸ್ವಾಮಿ, ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಮಾಧುಸ್ವಾಮಿಯ ಆಕ್ರೋಶ ಶಮನಕ್ಕೆ ಯತ್ನಿಸಿದ್ದ ಸಿಎಂ, ಪ್ರವಾಸೋದ್ಯಮದ ಜತೆಗೆ ಪರಿಸರ ವಿಜ್ಞಾನ ಖಾತೆಯನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿರಿ ಸಚಿವ ಮಾಧುಸ್ವಾಮಿ ನಾಳೆ ಮಧ್ಯಾಹ್ನ ರಾಜೀನಾಮೆ
ಇನ್ನು ಸಿಎಂ ನಿರ್ಧಾರದಂತೆ ಪ್ರವಾಸೋದ್ಯಮ ಖಾತೆಯನ್ನ ಮಾಧುಸ್ವಾಮಿಗೆ ಬಿಟ್ಟುಕೊಟ್ಟ ಆನಂದ್ ಸಿಂಗ್ಗೆ ಮೂಲಸೌಕರ್ಯ ಅಭಿವೃದ್ಧಿ ಜತೆಗೆ ಹಜ್ ಮತ್ತು ವಕ್ಫ್ ಖಾತೆ ಕೊಟ್ಟು ಸಮಾಧಾನ ಮಾಡಿದ್ದಾರೆ.