

ನವದೆಹಲಿ: ಭವಿಷ್ಯದ ಸವಾಲುಗಳನ್ನು ಎದುರಿಸುವಂತೆ ಸಜ್ಜಾಗಲು ಅನುಕೂಲವಾದ ಹಾಗೂ ‘ನವಭಾರತ’ ಚಿಂತನೆಗೆ ಅನುಗುಣವಾದ ಕೇಂದ್ರ ಕಚೇರಿಯನ್ನು ಭಾರತೀಯ ಭೂಸೇನೆಗಾಗಿ ರಾಷ್ಟ್ರ ರಾಜಧಾನಿಯಲ್ಲಿ ನಿರ್ವಿುಸಲಾಗುತ್ತಿದೆ. ದೆಹಲಿ ಕಂಟೋನ್ಮೆಂಟ್ನ ಮಾಣಿಕ್ಷಾ ಕೇಂದ್ರದ ಎದುರು ನಿರ್ಮಾಣ ಗೊಳ್ಳುತ್ತಿರುವ ಕೇಂದ್ರ ಕಚೇರಿಯ ಹೆಸರು ‘ಥಲ್ ಸೇನಾ ಭವನ್’. ತಂತ್ರಜ್ಞಾನದಲ್ಲಿ ಮುಂದು ವರಿದ, ಮಾರಕ ಹಾಗೂ ಚಾಣಾಕ್ಷ ಭೂ ಸೇನೆಯನ್ನು ರೂಪಿಸುವ ಉದ್ದೇಶದೊಂದಿಗೆ ಥಲ್ ಸೇನಾ ಭವನದ ಪರಿಕಲ್ಪನೆ ರೂಪುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದೊಂದು ಐಕಾನಿಕ್ ಮಾದರಿ ಕಟ್ಟಡವಾಗಲಿದೆ. ಸದ್ಯಕ್ಕೆ ದೆಹಲಿಯ ನಾನಾ ಭಾಗಗಳಲ್ಲಿ ಹರಡಿರುವ ಆರ್ವಿು ಕೇಂದ್ರ ಕಾರ್ಯಾಲಯದ ವಿವಿಧ ಕಚೇರಿಗಳು ಒಂದೇ ಕಟ್ಟಡದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.
ಇದೇ ಜನವರಿಯಲ್ಲಿ ಭವನದ ನಿರ್ಮಾಣ ಕಾರ್ಯ ಆರಂಭವಾಗಿದ್ದು 27 ತಿಂಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದರ ಅಂದಾಜು ವೆಚ್ಚ 832 ಕೋಟಿ ರೂಪಾಯಿ ಆಗಿದೆ.
ಸುಮಾರು 1.5 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ತಲೆಯೆತ್ತುವ ಹೊಸ ಕಟ್ಟಡವು ನೆಲ ಅಂತಸ್ತಿನೊಂದಿಗೆ ಏಳು ಮಹಡಿಗಳ ಕಚೇರಿ ಸಂಕೀರ್ಣ, ಒಂದು ವಿವಿಧ ಸೌಲಭ್ಯಗಳ ಫೆಸಿಲಿಟಿ ವಲಯ, ಮೂಲಸೌಕರ್ಯ ಸಂಕೀರ್ಣ, ಒಬ್ಬ ವ್ಯಕ್ತಿ ವಾಸಿಸುವ ವಸತಿ ಸಂಕೀರ್ಣ, ವಾಹನ ರ್ಪಾಂಗ್, ಎಂಜಿನಿಯರಿಂಗ್ ಸೇವಾ ಪ್ರದೇಶ ಮತ್ತು ಭೂದೃಶ್ಯಾವಳಿಯನ್ನು ಹೊಂದಿರುತ್ತದೆ. ಇದು ಕಾರ್ಯತಃ ಪ್ರಬಲವಾದ ಜಿಆರ್ಐಎಎಚ್ (ಗೃಹ)-ಕಾಂಪ್ಲಿಯಂಟ್, ಭೂಕಂಪ-ನಿರೋಧಕ ಕಟ್ಟಡವಾಗಿರುತ್ತದೆ. ವಿವಿಧ ನಿರ್ದೇಶನಾಲಯಗಳು ಮತ್ತು ಇಲಾಖೆಗಳಿಗೇ ಮುಡುಪಾದ ಕಚೇರಿಗಳು ಕೂಡ ಸಂಕೀರ್ಣದಲ್ಲಿ ಇರುತ್ತವೆ.
ಕೇಂದ್ರೀಯ ವಾಗಿ ಹವಾ ನಿಯಂತ್ರಿತವಾದ ಮುಖ್ಯ ಕಚೇರಿ ಸಂಕೀರ್ಣದಲ್ಲಿ ಡಿಜಿಟಲ್ ಇಂಟರ್ಫೇಸ್ನೊಂದಿಗೆ ಸಾಕಷ್ಟು ಸಂಖ್ಯೆಯ ಸಮ್ಮೇಳನ ಸಭಾಂಗಣಗಳು, ಮಾಧ್ಯಮ ಗೋಷ್ಠಿ ಕೊಠಡಿಗಳು, ಸಂದರ್ಶಕರು ಮತ್ತು ಚಾಲಕರ ಕಾಯುವ ಪ್ರದೇಶಗಳು ಮತ್ತು ಎಲ್ಲ ಸೌಕರ್ಯಗಳೊಂದಿಗೆ ಕಾಮನ್ ಏರಿಯಾ ಇರುತ್ತದೆ. ಇಡೀ ಸಂಕೀರ್ಣಕ್ಕೆ ಗರಿಷ್ಠ ಭದ್ರತೆಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಂದು ಸಾಮಾನ್ಯ ಗ್ರಂಥಾಲಯವೂ ಇರುತ್ತದೆ. ಫುಡ್ ಕೋರ್ಟ್, ಕ್ರೀಷೆ, ಜಿಮ್ ವೆಟ್ ಕ್ಯಾಂಟೀನ್ ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಎಂಐ ಕೊಠಡಿಯನ್ನು ಕೂಡ ಸಂಕೀರ್ಣದಲ್ಲಿ ನಿರ್ವಿುಸಲಾಗುತ್ತದೆ.
ನೂತನ ಥಲ್ ಸೇನಾ ಭವನ್, ಭಾರತ ಸರ್ಕಾರದ ಸೆಂಟ್ರಲ್ ವಿಸ್ಟಾ ಯೋಜನೆಗೆ ಪೂರಕವಾಗಿರುತ್ತದೆ. ಸ್ವಾತಂತ್ರ್ಯದ 75ನೇ ವರ್ಷಾಚ ರಣೆ ಸಂದರ್ಭದಲ್ಲಿ ಹೊಸ ಭಾರತದ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ನೆರವಾಗಲಿದೆ ಎಂದು ಮೂಲಗಳು ಹೇಳಿವೆ.
ಆನ್ಲೈನ್ ಡೊಮೇನ್ನಲ್ಲಿ ಭಾರತವನ್ನು ಟಾರ್ಗೆಟ್ ಮಾಡಿ ನೆರೆ ದೇಶಗಳಾದ ಚೀನಾ ಮತ್ತು ಪಾಕಿಸ್ತಾನ ನಡೆಸುತ್ತಿರುವ ಚಟುವಟಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಹೊಸ ಪರಿಣಿತ ಘಟಕಗಳನ್ನು ರಚಿಸಲು ನಿರ್ಧರಿಸಿದೆ. ಈ ಮೂಲಕ ಸೈಬರ್ ಸಮರದ ಬೆದರಿಕೆ ಮತ್ತು ಸವಾಲುಗಳನ್ನು ಎದುರಿಸಲು ಆರ್ವಿು ಸರ್ವಸನ್ನದ್ಧಗೊಂಡಿದೆ. ಈ ತಿಂಗಳ ಮೂರನೇ ವಾರ ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ನೇತೃತ್ವದಲ್ಲಿ ನಡೆದ ಆರ್ವಿು ಕಮಾಂಡರ್ಗಳ ಸಮ್ಮೇಳನದಲ್ಲಿ ಈ ಬಗ್ಗೆ ನಿರ್ಧರಿಸಲಾಗಿತ್ತು. ಆನ್ಲೈನ್ ಡೊಮೇನ್ನಲ್ಲಿ ಸಂವಹನ ಜಾಲವನ್ನು ರಕ್ಷಿಸಲು ಮತ್ತು ಸಿದ್ಧತೆಯ ಮಟ್ಟವನ್ನು ಎತ್ತರಿಸಲು ಭಾರತೀಯ ಸೇನೆಯಲ್ಲಿ ಕಮಾಂಡ್ ಸೈಬರ್ ಆಪರೇಷನ್ಸ್ ಮತ್ತು ಸಪೋರ್ಟ್ ವಿಂಗ್ಸ್ (ಸಿಸಿಒಎಸ್ಡಬ್ಲ್ಯು) ರಚಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನಮ್ಮ ವಿರೋಧಿಗಳ ಸೈಬರ್ ಸಮರ ಸಾಮರ್ಥ್ಯ ವಿಸ್ತರಣೆಗೊಂಡಿರುವುದರಿಂದ ಇದು ಎಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗಿದೆ ಎಂದು ವಿಶೇಷ ಘಟಕದ ಅಗತ್ಯವನ್ನು ಹೇಳಿದ ಮೂಲಗಳು ವಿಶ್ಲೇಷಿಸಿವೆ. ಭಾರತೀಯ ಸೇನೆ ಪ್ರಸ್ತುತ ತೀವ್ರ ಗತಿಯಲ್ಲಿ ಇಂಟರ್ನೆಟ್ ಕೇಂದ್ರಿತ ಆಗುತ್ತಿದೆ. ಹೀಗಾಗಿ ಆಧುನಿಕ ಸಂವಹನ ವ್ಯವಸ್ಥೆಗಳ ಮೇಲೆ ಅವಲಂಬನೆ ಹೆಚ್ಚಿದೆ ಎಂದು ಹೇಳಿವೆ.
ಏಪ್ರಿಲ್ 20ರಂದು ಪೂಂಛ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೆ ಎಂಬ ಭಯ ಪಾಕಿಸ್ತಾನವನ್ನು ಕಾಡುತ್ತಿದೆ. ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ವಿಡಿಯೋ ಬಿಡುಗಡೆ ಮಾಡಿದ್ದು, ಭಾರತ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಅಥವಾ ಏರ್ ಸ್ಟ್ರೈಕ್ ಮಾಡಬಹುದು ಎಂದು ಪಾಕಿಸ್ತಾನದ ಜನತೆ ಹೇಳುತ್ತಿದ್ದಾರೆ. ಭಾರತ ಆ ರೀತಿ ಮಾಡುತ್ತೆ ಎಂದು ನನಗನಿಸುತ್ತಿಲ್ಲ. ಯಾಕೆಂದರೆ ಎಸ್ಸಿಓ ಮತ್ತು ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಶೃಂಗಸಭೆಯ ಅಧ್ಯಕ್ಷತೆ ಇರುವವರೆಗೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡುವುದಿಲ್ಲ. ಮುಂದಿನ ವರ್ಷ ಭಾರತದಲ್ಲಿ ಲೋಕಸಭೆ ಚುನಾವಣೆ ಇದೆ. ಲೋಕಸಭೆ ಚುನಾವಣೆಗೂ ಮೊದಲು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು ಎಂದು ಹೇಳಿದ್ದಾರೆ. ಏಪ್ರಿಲ್ 20ರಂದು ಪೂಂಛ್ನಲ್ಲಿ ನಡೆದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು.
2016ರ ಸೆಪ್ಟೆಂಬರ್ 18ರಂದು ಎಲ್ಓಸಿ ದಾಟಿ ಉಗ್ರರು ಉರಿಯಲ್ಲಿ ಭಾರತೀಯ ಸೇನೆಯ ಪ್ರಧಾನ ಕಚೇರಿ ಗುರಿಯಾಗಿಸಿ ದಾಳಿ ನಡೆಸಿದ್ದರು. ದಾಳಿಯಲ್ಲಿ ಭಾರತೀಯ ಸೇನೆಯ 19 ಯೋಧರು ಹುತಾತ್ಮರಾಗಿದ್ದರು. ಉರಿ ದಾಳಿಯ ಬಳಿಕ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. 2019ರ ಫೆ.14ರಂದು ಉಗ್ರರು ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆ ಮೇಲೆ ದಾಳಿ ಮಾಡಿದ್ದರು. ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ದಾಳಿಯ ಹೊಣೆ ಹೊತ್ತಿತ್ತು. ದಾಳಿ ನಡೆದ 2 ವಾರಗಳೊಳಗೆ ಭಾರತೀಯ ವಾಯುಸೇನೆ ಎಲ್ಓಸಿ ದಾಟಿ ಬಾಲಾಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ತರಬೇತಿ ಶಿಬಿರದ ಮೇಲೆ ಏರ್ ಸ್ಟ್ರೈಕ್ ನಡೆಸಿತ್ತು.