ಗಬ್ಬು ನಾರುತ್ತಿದ್ದ ಕಸದಲ್ಲಿ ಸಿಕ್ಕ ಮಗು ಈಗ ನಟಿ; ಈಕೆ ಜೀವನವನ್ನೇ ಬದಲಿಸಿದ ಸ್ಟಾರ್​ ನಟ

_Meet actress who was adopted by Bollywood superstar from garbage heap is now becoming famous in Hollywood
Published on

ಮುಂಬೈ: ಹೆಣ್ಣು ಮಗು ಹುಟ್ಟಿದರೆ ಕೆಲವು ಪೋಷಕರು ಮಗುವನ್ನು ಸಾಕಲಾರದೆ ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಈ ಮಕ್ಕಳಿಗೆ ಸ್ವಲ್ಪ ಪ್ರೀತಿ, ಬೆಂಬಲ ನೀಡಿದರೆ ಅವರು ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಯುವತಿಯೊಬ್ಬಳು ಜೀವಂತ ಉದಾಹರಣೆಯಾಗಿ ನಿಂತಿದ್ದಾಳೆ.

ಮಿಥುನ್ ಚಕ್ರವರ್ತಿ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಈ ನಾಯಕ ಹಿಂದಿ ಮತ್ತು ಇತರ ಭಾಷೆಗಳಲ್ಲಿ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಿಥುನ್ ಯೋಗಿತಾ ಬಾಲಿ ಅವರನ್ನು ವಿವಾಹವಾದರು. ಈ ದಂಪತಿಗೆ ಮೂವರು ಗಂಡು ಮಕ್ಕಳು ಜನಿಸಿದರು. ಅವರ ಹೆಸರುಗಳು ಮಿಮೋ, ರೆಮೋ, ನಮಶಿ. ಆದರೆ ಒಂದು ದಿನ ಮಿಥುನ್ ಚಕ್ರವರ್ತಿ ಬೆಂಗಾಲಿ ಪತ್ರಿಕೆಯೊಂದರಲ್ಲಿ ಮಗುವನ್ನು ಕೋಲ್ಕತ್ತಾದ ಕಸದ ತೊಟ್ಟಿಯಲ್ಲಿ ಎಸೆಯಲಾಯಿತು. ಈ ಮಗುವನ್ನು ರಕ್ಷಣೆ ಮಾಡಲಾಗಿದ ಎನ್ನುವ ಹೃದಯವಿದ್ರಾವಕ ಸುದ್ದಿಯನ್ನು ಓದಿ ಕಂಗಾಲಾದರು. ಮಿಥುನ್ ಈ ಮಗುವನ್ನು ದತ್ತು ತೆಗೆದುಕೊಂಡರು. ಆ ದತ್ತುಪುತ್ರಿ ದಿಶಾನಿ ಚಕ್ರವರ್ತಿ. ಇದೀಗ ಈ ಯುವತಿ ಹಾಲಿವುಡ್ ರೇಂಜ್ ಗೆ ಬೆಳೆದಿದ್ದಾಳೆ.

ದಿಶಾನಿ ಚಕ್ರವರ್ತಿ ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದ ಲಾಸ್ ಏಂಜಲೀಸ್ ಗೆ ತೆರಳಿದರು. ಅವರು ಪ್ರತಿಷ್ಠಿತ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಿಂದ ನಟನೆಯಲ್ಲಿ ಪದವಿ ಪಡೆದರು, ಅಲ್ಲಿ ಅವರು ತಮ್ಮ ನಟನಾ ಕೌಶಲ್ಯವನ್ನು ಮತ್ತಷ್ಟು ಕರಗತ ಮಾಡಿಕೊಂಡರು.ದಿಶಾನಿ ಹಾಲಿವುಡ್‌ನಲ್ಲಿ ನಟನಾ ವೃತ್ತಿಯನ್ನು ಆರಿಸಿಕೊಂಡರು. ಅವರು ಈಗಾಗಲೇ 'ಗಿಫ್ಟ್' ಮತ್ತು 'ದಿ ಗೆಸ್ಟ್' ನಂತಹ ಕಿರುಚಿತ್ರಗಳಲ್ಲಿ ಅತ್ಯುತ್ತಮ ನಟನೆಯಿಂದ ವಿಮರ್ಶಕರು ಮತ್ತು ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ.

Dishani

ದಿಶಾನಿ ಸಂದರ್ಶನವೊಂದರಲ್ಲಿ, ತನ್ನ ತಂದೆ ಮಿಥುನ್ ಅವರಿಂದ ಬಹಳಷ್ಟು ಕಲಿತಿದ್ದೇನೆ. ಅವರೇ ನನಗೆ ಸ್ಫೂರ್ತಿ. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.ದಿಶಾನಿ ಅವರು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಭೇಟಿಯಾದ ಹಾಲಿವುಡ್ ನಟ ಕೋಡಿ ಸುಲೇಕ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಪ್ರೀತಿ ಹೇಗೆ ಜೀವನವನ್ನು ಬದಲಾಯಿಸುತ್ತದೆ ಎಂಬುದಕ್ಕೆ ದಿಶಾನಿ ಚಕ್ರವರ್ತಿ ಉತ್ತಮ ಉದಾಹರಣೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net