ಶಂಕರ್ ನಾಗ್ , ಸುನೀಲ್ ಮರಣಕ್ಕೂ ಇದೆ ಸಂಬಂಧ; ಹೋಗಿದ್ದು ಎರಡು ಜೀವವಾದ್ರೆ ಬದುಕಿದ್ದು ಎರಡು ಜೀವ

Shankar Nag
Published on

ಬೆಂಗಳೂರು: ಸ್ಯಾಂಡಲ್​ವುಡ್​​ ಕಂಡ ಅತ್ಯಂತ ಉತ್ತಮ ನಾಯಕರಲ್ಲಿ ನಟ ಶಂಕರ್ ನಾಗ್ ಮತ್ತು ಸುನೀಲ್ ಕೂಡಾ ಒಬ್ಬರಾಗಿದ್ದಾರೆ. ಇಬ್ಬರು ಈಗ ನಮ್ಮೊಂದಿಗೆ ಇಲ್ಲ. ಆದರೆ ಇವರ ಸಿನಿಮಾಗಳು ಇಂದು ಜೀವಂತ ಎನ್ನುವುದು ಅಷ್ಟೆ ಸತ್ಯ. ಶಂಕರ್ ನಾಗ್ ಮತ್ತು ಸುನೀಲ್ ಅವರ ಮರಣಕ್ಕೆ ಅದೇನೋ ಒಂಥರಾ ಸಂಬಂಧ. ಎನು? ಎನ್ನುವ ಪ್ರಶ್ನೆ ನಿಮಗೆ ಇದ್ದರೆ ಈ ಸ್ಟೋರಿ ಓದಿ...

ಶಂಕರ್ ನಾಗ್ ಅವರ ಸಾವಿನ ನೋವು ಅರಗಿಸಿಕೊಳ್ಳಲಾಗದ ಅಭಿಮಾನಿಗಳು ಕೆಲ ವರ್ಷದಲ್ಲೇ ಇನ್ನೊಂದು ಚಾಕಲೇಟ್ ಹಿರೋರನ್ನು ಕಳೆದುಕೊಂಡು ವಿಪರೀತ ಕಣ್ಣೀರಿಡುವಂತಾಯಿತು. ಈ ಇಬ್ಬರ ಸಾವನ್ನು ಒಂದಕ್ಕೋಂದು ಹೊಂದಾವಣಿಕೆ ಮಾಡಿದಾಗ ಎನೋ ಒಂದು ಸಂಬಂಧ ಇರುವುದು ಖಂಡಿತಾ ಹೌದು ಎಂದು ನಿಮಗೂ ಎನ್ನಿಸದೆ ಇರುವುದಿಲ್ಲ.

ಶಂಕರ್ ನಾಗ್‌ ಅವರು ತೀರಿಕೊಂಡಿದ್ದು ಕಾರ್ ಆ್ಯಕ್ಸಿಡೆಂಟ್ ನಲ್ಲೇ, ಹಾಗೇ ಸುನೀಲ್ ಅವರು ತೀರಿಕೊಂಡಿದ್ದು ಕಾರ್ ಆ್ಯಕ್ಸಿಡೆಂಟ್​​ನಲ್ಲೇ. ಇಬ್ಬರೂ ನಮ್ಮನ್ನಗಲ್ಲಿದ್ದು ಅದೇ ದಾವಣಗೆರೆ-ಚಿತ್ರದುರ್ಗ ಹೈವೇಯಲ್ಲೇ.

ಶಂಕರ್ ನಾಗ್ ಅವರು 1990 ಸೆಪ್ಟೆಂಬರ್ 30 ರವಿವಾರದಂದು, ಅದು ಬೆಳಿಗ್ಗೆ‌ 4.30 ರ ಹೊತ್ತಿಗೆ. ಶಂಕರ್ ನಾಗ್ ಅವರ‌ ಜತೆ ಅವರ ಫಿಯೇಟ್ ಕಾರಿನಲ್ಲಿ ಪ್ರಯಾಣ ಮಾಡಿದ್ದು, ಅವರ ಹೆಂಡತಿ, ಮಗು ಮತ್ತೆ ಡ್ರೈವರ್ ಲಿಂಗಯ್ಯ… ಒಟ್ಟಾರೆ ನಾಲ್ಕು ಜನ. ಸ್ಥಳದಲ್ಲೇ ಸತ್ತಿದ್ದು ಡ್ರೈವರ್ ಲಿಂಗಯ್ಯ ಮತ್ತು ಶಂಕರ್ ನಾಗ್. ಶಂಕರ್ ನಾಗ್ ಪತ್ನಿ ಹಾಗೂ ಮಗು ಬದುಕುಳಿದರು.

ಸುನೀಲ್ 1994 ಜುಲೈ ‌25 ರವಿವಾರದಂದು, ಅದು ಬೆಳಿಗ್ಗೆ 4.30ರ ಹೊತ್ತಿಗೆ. ನೋಡಿ ಎರಡು ಸಾವು ಸಂಭವಿಸಿದ್ದು ರವಿವಾರದಂದೆ. ನಟ ಸುನೀಲ್​ ಅವರು ಪ್ರತಿಷ್ಠಿತ ಕಾಂಟೆಸ್ಸಾ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು ನಾಲ್ವರು, ಡ್ರೈವರ್ ಕೃಷ್ಣ, ಸುನೀಲ್ ಸೋದರ ಸಂಬಂಧಿ ಸಚಿನ್ ಮಲ್ಲಿ, ಸುನೀಲ್ ಹಾಗೇ ಮಾಲಾಶ್ರೀ. ಇಲ್ಲೂ ಹಾಗೇ ಡ್ರೈವರ್ ಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದರು, ಸುನೀಲ್‌ ಚಿತ್ರದುರ್ಗದ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟರು. ಅಪಘಾತದಲ್ಲಿ ಹೋಗಿದ್ದು ಎರಡು ಜೀವವಾದರೆ ಬದುಕುಳಿದದ್ದು ಎರಡು ಜೀವ.

ಶಂಕರ್ ನಾಗ್ ಅವರು 1990 ಸೆಪ್ಟೆಂಬರ್ 30 ರವಿವಾರದಂದು, ಅದು ಬೆಳಿಗ್ಗೆ‌ 4.30 ರ ಹೊತ್ತಿಗೆ. ಸುನೀಲ್ ಜುಲೈ ‌25,1994 ರವಿವಾರದಂದು, ಅದು ಬೆಳಿಗ್ಗೆ 4.30ರ ಹೊತ್ತಿಗೆ. ನೋಡಿ ಎರಡು ಸಾವು ಸಂಭವಿಸಿದ್ದು ರವಿವಾರದಂದೆ.. ಒಂದೇ ಸಮಯದಲ್ಲೇ ಎನ್ನುವ ಮಾಹಿತಿ ವಿಚಿತ್ರವಾಗಿದೆ.

ಶಂಕರ್ ನಾಗ್ ಅವರ‌ ಜತೆ ಅವರ ಫಿಯೇಟ್ ಕಾರಿನಲ್ಲಿ ಪ್ರಯಾಣ ಮಾಡಿದ್ದು, ಅವರ ಹೆಂಡತಿ, ಮಗು ಮತ್ತೆ ಡ್ರೈವರ್ ಲಿಂಗಯ್ಯ… ಒಟ್ಟಾರೆ ನಾಲ್ಕು ಜನ. ಸ್ಥಳದಲ್ಲೇ ಸತ್ತಿದ್ದು ಡ್ರೈವರ್ ಲಿಂಗಯ್ಯ ಮತ್ತು ಶಂಕರ್ ನಾಗ್. ಶಂಕರ್ ನಾಗ್ ಪತ್ನಿ ಹಾಗೂ ಮಗು ಬದುಕುಳಿದರು. ನಟ ಸುನೀಲ್​ ಅವರು ಪ್ರತಿಷ್ಠಿತ ಕಾಂಟೆಸ್ಸಾ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು ನಾಲ್ವರು, ಡ್ರೈವರ್ ಕೃಷ್ಣ, ಸುನೀಲ್ ಸೋದರ ಸಂಬಂಧಿ ಸಚಿನ್ ಮಲ್ಲಿ, ಸುನೀಲ್ ಹಾಗೇ ಮಾಲಾಶ್ರೀ. ಇಲ್ಲೂ ಹಾಗೇ ಡ್ರೈವರ್ ಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದರು, ಸುನೀಲ್‌ ಚಿತ್ರದುರ್ಗದ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟರು. ಅಪಘಾತದಲ್ಲಿ ಹೋಗಿದ್ದು ಎರಡು ಜೀವವಾದರೆ ಬದುಕುಳಿದದ್ದು ಎರಡು ಜೀವ.

ಶಂಕರ್ ನಾಗ್ ಅವರು ಸಾವನ್ನಪ್ಪುವ ಮುನ್ನ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸ ಬೇಕಿದ್ದ ವ್ಯಕ್ತಿ ಹಾಗೇ ಸುನೀಲ್ ಅವರು ಸಾವನ್ನಪ್ಪುವ ಮುನ್ನ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸ ಬೇಕಿದ್ದ ವ್ಯಕ್ತಿಯೇ ಈ ಸುಧೀಂದ್ರ ‌ಕಲ್ಲೋಳ್. ತಾನು ಕೈ ಹಾಕಿದ ಎರಡೂ ಯೋಜನೆಗಳು ಹೀಗಾಯ್ತಲ್ಲ??ಎಂದು ಬೇಜಾರು ಪಟ್ಟು ಮುಂದೆ ಇವರು ನಿರ್ದೇಶನ‌ ಮಾಡುವ ಕೆಲಸಕ್ಕೆ ಕೈ ಹಾಕಲಿಲ್ಲ. ಈ ಎರಡೂ ನಟರ ಮುಂದಿನ ಚಿತ್ರದ ನಿರ್ದೇಶಕರು ಒಬ್ಬರೇ ಆಗಿದ್ದರು ಅನ್ನುವುದು ವಿಚಿತ್ರ. ಇಲ್ಲೂ ಕೂಡಾ ಇಬ್ಬರಿಗೂ ಒಂದು ಅವಿನಾಭಾವ ಸಂಬಂಧ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net