'ಶಾಂತಿಯುತ ಕರ್ನಾಟಕ' ಹೆಸರಿನಲ್ಲಿ ಸಹಾಯವಾಣಿ ಸ್ಥಾಪಿಸುವಂತೆ ಸಿಎಂಗೆ ಎಂ.ಬಿ. ಪಾಟೀಲ್ ಮನವಿ

mb patil
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಯಾರೂ ದ್ವೇಷ ಹರಡದಂತೆ ನೋಡಿಕೊಳ್ಳಲು ಸಹಾಯವಾಣಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್(MB Patil) ಮನವಿ ಮಾಡಿದ್ದಾರೆ.

ಯಾರೂ ದ್ವೇಷ ಹರಡದಂತೆ ನೋಡಿಕೊಳ್ಳಲು 'ಶಾಂತಿಯುತ ಕರ್ನಾಟಕ' ಎಂಬ ಹೆಸರಿನಲ್ಲಿ ಸಹಾಯವಾಣಿಯನ್ನು(Helpline) ಸ್ಥಾಪಿಸುವಂತೆ ಎಂ.ಬಿ. ಪಾಟೀಲ್ ಅವರು ಸೋಮವಾರ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ದಕ್ಷಿಣ ಸಂಸದ ಮತ್ತು ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ(Tejasvi Surya), "ಕಾಂಗ್ರೆಸ್ ಸರ್ಕಾರದ ಎಲ್ಲಾ ಕಾನೂನು ದೌರ್ಜನ್ಯಗಳನ್ನು ತಡೆಯಲು ಪಕ್ಷದ ರಾಜ್ಯ ಕಾನೂನು ಘಟಕದಿಂದ ಶೀಘ್ರದಲ್ಲೇ ಸಹಾಯವಾಣಿಯನ್ನು ಪ್ರಾರಂಭಿಸುತ್ತೇವೆ" ಎಂದು ಹೇಳಿದ್ದರು.

ತೇಜಸ್ವಿ ಸೂರ್ಯ ಅವರ ಹೇಳಿಕೆಯ ಬೆನ್ನಲ್ಲೇ ಸಚಿವ ಎಂ.ಬಿ. ಪಾಟೀಲ್, 'ಶಾಂತಿಯುತ ಕರ್ನಾಟಕ' ಎಂಬ ಹೊಸ ಸಹಾಯವಾಣಿಯನ್ನು ಸ್ಥಾಪಿಸಲು ಪಕ್ಷದ ಹಿರಿಯರನ್ನು ವಿನಂತಿಸಿದ್ದಾರೆ. "ನಮ್ಮ ಅಜೆಂಡಾ ಕೇವಲ ಅಭಿವೃದ್ಧಿ ಮತ್ತು ಪ್ರಗತಿ ಮತ್ತು 'ಬ್ರಾಂಡ್ ಕರ್ನಾಟಕ'ವನ್ನು ರಕ್ಷಿಸುವುದು" ಎಂದು ಸಚಿವ ಎಂ.ಬಿ. ಪಾಟೀಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net